ಶೂಟಿಂಗ್‌ ವೇಳೆ ಮೂಗಿನಲ್ಲಿ ರಕ್ತಸ್ರಾವ

ಪಂಜಾಬಿ ಬಿಗ್ ಬಾಸ್ 13 ಸ್ಪರ್ಧಿ, ನಟಿ ಹಾಗೂ ಗಾಯಕಿ ಹಿಮಾಂಶಿ ಖುರಾನಾ ಮೂಗಿನ ರಕ್ತಸ್ರಾವ ಮತ್ತು ತೀವ್ರ ಜ್ವರದಿಂದ ಬಳಲುತ್ತಿರುವ ಕಾರಣ ರೊಮೇನಿಯಾದ ಆಸ್ಪತ್ರೆಗೆ ದಾಖಲಾಗಿದ್ದಾರೆ. ರೊಮೇನಿಯಾದಲ್ಲಿ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.ಇದ್ದಕ್ಕಿದ್ದಂತೆ ಮೂಗಿನಿಂದ ರಕ್ತ ಸುರಿಯಲು ಶುರುವಾಯಿತು. ಅದು ನಿಲ್ಲದೇ ಇರುವ ಕಾರಣಕ್ಕಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.ಈಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ತಮ್ಮ ಮುಂಬರುವ ಪಂಜಾಬಿ ಚಿತ್ರ ‘ಫಟ್ಟೊ ದೇ ಯಾರ್ ಬಡೇ ನೆ’ ಚಿತ್ರೀಕರಣದಲ್ಲಿದ್ದರು. ‘ಜೀತ್ ಜಾಂಗೆ ಜಹಾನ್’, ‘ಸದ್ದಾ ಹಕ್’, ‘ಲೆದರ್ ಲೈಫ್’, ‘ಅಫ್ಸರ್’ ಮತ್ತು ಇನ್ನೂ ಅನೇಕ ಚಿತ್ರಗಳಿಗೆ ಹೆಸರುವಾಸಿಯಾಗಿರುವ ಹಿಮಾಂಶಿ ಅವರು ಮಳೆಯಲ್ಲಿ ಚಿತ್ರದ ಒಂದು ಸೀಕ್ವೆನ್ಸ್‌ ಚಿತ್ರೀಕರಣ ನಡೆದಿತ್ತು. ಮೈನಸ್ 7 ಡಿಗ್ರಿ ಸೆಲ್ಸಿಯಸ್‌ನಲ್ಲಿ ಶೂಟಿಂಗ್ ನಡೆದಿದ್ದ ಕಾರಣ ನಟಿಗೆ ತೀವ್ರ ಜ್ವರ ಕಾಣಿಸಿಕೊಂಡಿದ್ದು, ಮೂಗಿನಿಂದ ರಕ್ತ ಸುರಿಯಲು ಶುರುವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಕೊತ ಕೊತ ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ಮಿರ್ಚಿ ತೆಗೆದ ಅಯ್ಯಾಪ್ಪ ಮಾಲಾಧಾರಿಗಳು ,ನಿಬ್ಬೆರಗಾದ ಜನರು...

Mon Dec 26 , 2022
ಹುಬ್ಬಳ್ಳಿ: ಅಯ್ಯಪ್ಪ ಸ್ವಾಮಿಯ ಅದ್ಧೂರಿ ಶೋಭಾಯಾತ್ರೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆಯಿತು. ಅಯ್ಯಪ್ಪ ಪೂಜೆಯ ವೇಳೆ ಕೊತ ಕೊತ ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ಮಿರ್ಚಿ ತೆಗೆಯುವ ದೃಶ್ಯಗಳು ನೆರದಿದ್ದ ಭಕ್ತರನ್ನು ಮೈ ಜುಮ್‌ ಎನ್ನಿಸುವಂತೆ ಮಾಡಿತು. ಪ್ರಭು ಗುರುಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ‌ ಇದೇ ಸಂದರ್ಭದಲ್ಲಿ ಕ್ಷೀರಾಭೀಷೆಕ ಹಾಗೂ ತುಲಾಭಾರ ಕಾರ್ಯಕ್ರಮ ಸಹ ನಡೆಯಿತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಕುದಿಯುವ […]

Advertisement

Wordpress Social Share Plugin powered by Ultimatelysocial