ಚಿಂದೋಡಿ ಲೀಲಾ ಕನ್ನಡದ ಮಹಾನ್ ರಂಗಕಲಾವಿದೆ.

ತನ್ನ ಏಳನೆ ವಯಸ್ಸಿನಲ್ಲೇ ರಂಗಪ್ರವೇಶಿಸಿದ ಚಿಂದೋಡಿ ಲೀಲಾ ಅವರು ಸಾಧಿಸಿದ ಪರಿ ಅನನ್ಯವಾದದ್ದು. ಚಿಂದೋಡಿ ಲೀಲಾ ಅವರು ತಮ್ಮ ತಂದೆಯವರಾದ ಚಿಂದೋಡಿ ವೀರಪ್ಪನವರು ಸ್ಥಾಪಿಸಿದ್ದ ಕರಿಬಸವರಾಜೇಂದ್ರ ನಾಟಕ ಮಂಡಳಿಯನ್ನು ನಿರಂತರವಾಗಿ ಯಶಸ್ಸಿನಲ್ಲಿ ಮುನ್ನಡೆಸಿ ತಮ್ಮ ನಿಧನಕ್ಕೆ ಕೆಲ ವರ್ಷಗಳ ಹಿಂದೆ, ಅಂದಿನ ರಾಷ್ಟ್ರಪತಿಗಳಾದ ನಾಡಿನ ಹೆಮ್ಮೆಯ ಪುತ್ರ ಅಬ್ದುಲ್ ಕಲಂ ಅವರ ಸಮ್ಮುಖದಲ್ಲಿ ಎಂಭತ್ತನೇ ವಾರ್ಷಿಕೋತ್ಸವ ನಡೆಸಿ ತಮ್ಮ ಸಂಸ್ಥೆಯಲ್ಲಿ ತನ್ನೊಡನೆ ದುಡಿದ ಪ್ರತಿ ಕಲಾವಿದನನ್ನೂ ಗೌರವಿಸಿದ ಔನ್ನತ್ಯ ಮೆರೆದಿದ್ದರು.
ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನದಲ್ಲಿ ಜಿ. ಎಚ್ ನಾಯಕ ಹೀಗೆ ಹೇಳುತ್ತಾರೆ. “ಪೊಲೀಸನ ಮಗಳು 4500 ಪ್ರಯೋಗಗಳನ್ನು ಕಂಡ ಕನ್ನಡ ನಾಟಕ ಮಾತ್ರವಲ್ಲ, ಜಗತ್ತಿನಲ್ಲಿಯೇ ಅಷ್ಟು ಪ್ರಯೋಗಗಳನ್ನು ಕಂಡ ನಾಟಕವೆಂದು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿದೆ. ಅದರಲ್ಲಿ ಲೀಲಾ ಅವರೇ ಪೊಲೀಸನ ಮಗಳ ಪಾತ್ರದಲ್ಲಿದ್ದರು. ಆಗ ಅವರಿಗೆ ಅರುವತ್ತೆರಡೊ ಅರುವತ್ಮೂರೊ ವರ್ಷ. ಆ ವಯಸ್ಸಿನಲ್ಲಿ ಅವರು ಮದುವೆಯಾಗಲಿರುವ ಪ್ರಾಯದ ಹೆಣ್ಣಿನ ಪಾತ್ರದಲ್ಲಿ ಅಭಿನಯ ನೀಡಿದ್ದರು. ಅವರ ವಯಸ್ಸೆಷ್ಟೆಂಬುದರ ನೆನಪು ಒಂದಷ್ಟು ಹೊತ್ತು ನಮ್ಮ ಮನಸ್ಸಿನಲ್ಲಿ ಎಣಿಕೆಗೊಂಡಿದ್ದರೂ ಬಲು ಬೇಗ ಅವರ ಅಭಿನಯದಲ್ಲಿ ತನ್ಮಯರಾಗಿಬಿಟ್ಟೆವು. ಚಿಂದೋಡಿ ಲೀಲಾ ನಿಜವಾದ ಜನ್ಮಜಾತ ಪ್ರತಿಭೆಯ ರಂಗ ಕಲಾವಿದೆ ಎಂಬುದು ನಮಗೆ ಮನವರಿಕೆಯಾಗಿತ್ತು. ಕೇವಲ ಎರಡನೆಯ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ ಲೀಲಾ ಕರ್ನಾಟಕ ರಂಗಭೂಮಿಯಲ್ಲಿ ಆರು ದಶಕಗಳಿಗಿಂತ ಹೆಚ್ಚು ಕಾಲ ಲಕ್ಷಾಂತರ ಪ್ರೇಕ್ಷಕರನ್ನು ರಂಜಿಸಿ ಮೆರೆದ ಕಥೆ ನಾಟಕ ರಂಗಭೂಮಿಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವಂಥದು. ಲೀಲಾ ಅವರ ಆ ಸಾಧನೆ ಸಾಮಾನ್ಯವಾದುದಲ್ಲ. ಲೀಲಾ ಕಲಾವಿದೆ ಮಾತ್ರವಲ್ಲ, ಬೆಳಗಾವಿಯಲ್ಲಿ ಮರಾಠಿಗರ ಕಿರುಕುಳಗಳನ್ನು ದಿಟ್ಟವಾಗಿ ಎದುರಿಸಿ ಅಲ್ಲಿಯೇ ಕನ್ನಡ ನಾಟಕವನ್ನು ಆಡಿದ ಮತ್ತು ಶಾಶ್ವತ ರಂಗಮಂದಿರವನ್ನು ನಿರ್ಮಿಸಿದ ಧೀರ ಮಹಿಳೆ. ಅವರು ಶಿವಾಜಿ ನಾಟಕವನ್ನು ಅಭಿನಯಿಸಿ ಮರಾಠಿಗರನ್ನೂ ಒಲಿಸಿಕೊಂಡರು. ಬೆಳಗಾವಿಯ ನಗರಸಭೆಗೂ ಆಯ್ಕೆಯಾಗಿದ್ದರು. ಅವರು ನಾವಿರುವವರೆಗೂ ಹಿತವಾದ ನೆನಪಾಗಿ ನಮ್ಮೊಡನೆ ಉಳಿದಿರುತ್ತಾರೆ.”
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಅಮೆರಿಕ ಮಿಲಿಟರಿ ದಾಳಿ.

Sun Jan 22 , 2023
ಶುಕ್ರವಾರ (ಸ್ಥಳೀಯ ಕಾಲಮಾನ) ಯುಎಸ್ ಮಿಲಿಟರಿ ದಾಳಿಯಲ್ಲಿ ಸುಮಾರು 30 ಮಂದಿ ಇಸ್ಲಾಮಿ ಅಲ್ ಶಬಾಬ್ ಹೋರಾಟಗಾರರು ಸೆಂಟ್ರಲ್ ಸೊಮಾಲಿಯಾದ ಗಾಲ್ಕಾಡ್ ಪಟ್ಟಣದ ಬಳಿ ಕೊಲ್ಲಲ್ಪಟ್ಟರು ಎಂದು ಅಮೆರಿಕದ ಆಫ್ರಿಕಾ ಕಮಾಂಡ್ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಸಿಎನ್‌ಎನ್ ವರದಿ ಮಾಡಿದೆ. ಈ ಮುಷ್ಕರವು ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಿಂದ ಈಶಾನ್ಯಕ್ಕೆ 260 ಕಿಲೋಮೀಟರ್ ದೂರದಲ್ಲಿ ಗಾಲ್ಕಾಡ್ ಬಳಿ ಸಂಭವಿಸಿದೆ. ದೂರದ ಸ್ಥಳದಿಂದಾಗಿ ಯಾವುದೇ ನಾಗರಿಕರಿಗೆ ಸಾವು-ನೋವು ಉಂಟಾಗಿಲ್ಲ ಎಂದು ಆಫ್ರಿಕಾ ಕಮಾಂಡ್ ಅಂದಾಜಿಸಿದೆ. […]

Advertisement

Wordpress Social Share Plugin powered by Ultimatelysocial