Bengaluru: ಈವರೆಗೆ ವಿಸರ್ಜನೆಗೊಂಡ ಮಣ್ಣಿನ-ಪಿಓಪಿ ‘ಗಣೇಶ ಮೂರ್ತಿ’ಗಳೆಷ್ಟು? ವಿವರ

ಬೆಂಗಳೂರು, ಸೆಪ್ಟಂಬರ್ 20: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಗಣೇಶ ಚತುರ್ಥಿ ನಡೆದಿದೆ. ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡೇ ದಿನದಲ್ಲಿ 1.5 ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳು ವಿಸರ್ಜನೆ ಆಗಿವೆ. ಕಳವಳಕಾರಿ ಸಂಗತಿ ಎಂದರೆ ಸರ್ಕಾರ ಪರಿಸರ ಸ್ನೇಹಿ ಮೂರ್ತಿಗಳ ಪ್ರತಿಷ್ಠಾಪನೆಗೆ ಕ್ರಮ ಕೈಗೊಂಡರು ಸಹಿತ ಅಧಿಕ ಸಂಖ್ಯೆಯಲ್ಲಿ POP ಗಣೇಶಗಳು ಪ್ರತಿಷ್ಠಾಪನೆ ಆಗಿವೆ.

 

ಹಾಗಾದರೆ ಯಾವ ವಾರ್ಡ್‌ಗಳಲ್ಲಿ ಎಷ್ಟೆಷ್ಟು ಮಣ್ಣಿನ ಗಣೇಶ ಮೂರ್ತಿಗಳು ಮತ್ತು ಪಿಓಪಿ ಗಣೇಶ ಮೂರ್ತಿಗಳು ಬಿಬಿಎಂಪಿ ನಿರ್ಮಿಸಿದ ತಾತ್ಕಾಲಿಕ ಕಲ್ಯಾಣಿ/ಹೊಂಡ, ಮೊಬೈಲ್ ಟ್ಯಾಂಕರ್/ಕೆರೆಗಳಲ್ಲಿ ವಿಸರ್ಜನೆ ಆಗಿವೆ ಎಂದು ತಿಳಿಯೋಣ.

ಪಿಓಪಿ ಮತ್ತು ಮಣ್ಣಿನ ಮೂರ್ತಿಗಳು ಸೇರಿ ಪ್ರತಿಷ್ಠಾಪನೆ ದಿನ ಸೋಮವಾರ (ಸೆ.18) ಒಟ್ಟು 1,53,965 ಗಣೇಶ ಮೂರ್ತಿಗಳು ವಿಸರ್ಜನೆಗೊಂಡಿವೆ. ಮಂಗಳವಾರ ಸೆ.19ರಂದು ಒಟ್ಟು 28,347 ಗಣಪಗಳು ವಿಸರ್ಜನೆಗೊಂಡಿವೆ.

ವಲಯವಾರು ವಿಸರ್ಜನೆ ಪಟ್ಟಿ (ಸೋಮವಾರ)

* ಪೂರ್ವ ವಲಯ

ಮಣ್ಣಿನ ಗಣೇಶ ಮೂರ್ತಿಗಳು: 24,990

POP ಗಣೇಶ ಮೂರ್ತಿಗಳು: 206

* ಪಶ್ಚಿಮ ವಲಯ

ಮಣ್ಣಿನ ಗಣೇಶ ಮೂರ್ತಿಗಳು: 35,887

POP ಗಣೇಶ ಮೂರ್ತಿಗಳು: 134

* ದಕ್ಷಿಣ ವಲಯ

ಮಣ್ಣಿನ ಗಣೇಶ ಮೂರ್ತಿಗಳು: 50,848

POP ಗಣೇಶ ಮೂರ್ತಿಗಳು: 8,992

* ಬೊಮ್ಮನಹಳ್ಳಿ ವಲಯ

ಮಣ್ಣಿನ ಗಣೇಶ ಮೂರ್ತಿಗಳು: 7,291

POP ಗಣೇಶ ಮೂರ್ತಿಗಳು: 147

* ದಾಸರಹಳ್ಳಿ ವಲಯ

ಮಣ್ಣಿನ ಗಣೇಶ ಮೂರ್ತಿಗಳು: 1,138

POP ಗಣೇಶ ಮೂರ್ತಿಗಳು: 53

* ಮಹದೇವಪುರ ವಲಯ

ಮಣ್ಣಿನ ಗಣೇಶ ಮೂರ್ತಿಗಳು: 5,860

POP ಗಣೇಶ ಮೂರ್ತಿಗಳು: 18

* ಆರ್.ಆರ್.ನಗರ ವಲಯ

ಮಣ್ಣಿನ ಗಣೇಶ ಮೂರ್ತಿಗಳು: 10,180

POP ಗಣೇಶ ಮೂರ್ತಿಗಳು: 152

* ಯಲಹಂಕ ವಲಯ

ಮಣ್ಣಿನ ಗಣೇಶ ಮೂರ್ತಿಗಳು: 7414

POP ಗಣೇಶ ಮೂರ್ತಿಗಳು: 546

ಮಂಗಳವಾರದ ವಿಸರ್ಜಿಸಿದ ಮೂರ್ತಿಗಳ ಮಾಹಿತಿ

 

Please follow and like us:

tmadmin

Leave a Reply

Your email address will not be published. Required fields are marked *

Next Post

ಕೂಪನ್ ಹಂಚಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ವಜಾ ಮಾಡಬೇಕು-ಕುಮಾರಸ್ವಾಮಿ ಆಗ್ರಹ

Wed Sep 20 , 2023
ರಾಮನಗರ, ಸೆಪ್ಟೆಂಬರ್‌ 20: ಜನರಿಗೆ ಆಸೆ, ಆಮಿಷ ಒಡ್ಡಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬೇಕು. ಕೇಂದ್ರ ಚುನಾವಣಾ ಆಯೋಗ ಸೂಕ್ತ ರೀತಿಯಲ್ಲಿ ಕ್ರಮ ಜರುಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.   ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದೆ. ಜನರಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರೇ ಗ್ಯಾರಂಟಿ ಕೂಪನ್‌ಗಳ ಮೇಲೆ ಸಹಿ ಮಾಡಿ ಮನೆಮನೆಗೂ […]

Advertisement

Wordpress Social Share Plugin powered by Ultimatelysocial