ಮಾವನನ್ನೇ ಹೊಡೆದು ಕೊಂದ ಸೊಸೆ

ಮಾವನನ್ನೇ ಹೊಡೆದು ಕೊಂದ ಸೊಸೆ

ಸೊಸೆಯಿಂದ ಹಲ್ಲೆಗೊಳಗಾದ ಹಿರಿಯ ನಾಗರಿಕರೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ರಾಜಸ್ಥಾನದ ಬುಂದಿಯಲ್ಲಿ ಜರುಗಿದೆ.

ರಾಮ್ಲಾಲ್ ಮೇಘ್ವಾಲ್ ಎಂಬ 60ರ ಈ ವ್ಯಕ್ತಿಯ ತಲೆ ಮೇಲೆ ಅವರ ಸೊಸೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರಿಂದ, ಆಸ್ಪತ್ರೆಯ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಂದಿ ಬಳಿಯ ಅಂತ್ರಾ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ, ತಮ್ಮ ಮಗ ಮನೆಯಲ್ಲಿ ಇಲ್ಲದ ವೇಳೆ ಸೊಸೆಯೊಂದಿಗೆ ಜಗಳ ನಡೆದು, ಆ ವೇಳೆ, 30 ವರ್ಷ ವಯಸ್ಸಿನ ತಮ್ಮ ಸೊಸೆ ಕೈಯಿಂದ ಕೋಲಿನಲ್ಲಿ ತಲೆ ಮೇಲೆ ಪೆಟ್ಟು ತಿಂದಿದ್ದಾರೆ ರಾಮ್ಲಾಲ್. ಈ ವೇಳೆ ರಾಮ್ಲಾಲ್‌ಗೆ ತೀವ್ರ ಗಾಯಗಳಾಗಿವೆ. ಮನೆಗೆ ಬಂದ ಮಗನಿಗೆ ಮೊಮ್ಮಕ್ಕಳು ನಡೆದ ಘಟನೆ ವಿವರಿಸಿದ್ದಾರೆ.

ರಾಮ್ಲಾಲ್ ಪುತ್ರ ಸತ್ಯನಾರಾಯಣ್ ಮೇಘ್ವಾಲ್‌ನ ಮಡದಿ ಧನ್ನಿಬಾಯಿ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮೃತರ ದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಧನ್ನಿಬಾಯಿಯನ್ನು ಪ್ರಕರಣದ ಸಂಬಂಧ ತನಿಖೆ ನಡೆಸಲು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಪಾಕಿಸ್ತಾನ ಆರ್ಥಿಕತೆಯಲ್ಲಿ ಮಹಾ ಕುಸಿತ

Fri Dec 17 , 2021
ಪಾಕಿಸ್ತಾನದ ಆರ್ಥಿಕತೆಯಲ್ಲಿ ಐತಿಹಾಸಿಕ ಕುಸಿತ ಕಂಡುಬಂದಿದೆ. ಪಾಕಿಸ್ತಾನದ ರೂಪಾಯಿ ಇದುವರೆಗಿನ ಇತಿಹಾಸದಲ್ಲೇ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಪಾಕಿಸ್ತಾನದ ಕರೆನ್ಸಿಯು ಆಗಸ್ಟ್ 2018 ರಲ್ಲಿ ಡಾಲರ್‌ಗೆ, 123 ರೂಪಾಯಿಯಿಂದ ಡಿಸೆಂಬರ್ 2021 ರ ವೇಳೆಗೆ ಡಾಲರ್‌ಗೆ 177 ರೂಪಾಯಿಗೆ ಕುಸಿದಿದೆ. ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದಾಗ, ಪಾಕಿಸ್ತಾನವು ಅತಿದೊಡ್ಡ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ ಎಂಬುವುದು ಉಲ್ಲೇಖನೀಯ. ಹೆಚ್ಚುತ್ತಿರುವ ಹಣದುಬ್ಬರ ದರ, ವಿದೇಶಿ ವಿನಿಮಯ ಮೀಸಲು ಖಾಲಿಯಾಗುತ್ತಿರುವುದು, ಚಾಲ್ತಿ ಖಾತೆ ಕೊರತೆಯ ಒತ್ತಡ […]

Related posts

Advertisement

Wordpress Social Share Plugin powered by Ultimatelysocial