ಎಸ್.ಬಿ.ಐ ಗ್ರಾಹಕರಿಗೆ ಬಂಪರ್ ಆಫರ್..! 5 ನಿಮಿಷದಲ್ಲಿ ಸಿಗುತ್ತೆ 5ಲಕ್ಷದವರೆಗೆ ಲೋನ್…!

ದೇಶದಲ್ಲಿ ಅತಿ ಹೆಚ್ಚು ಸಾಲ ನೀಡಿರುವ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಂದು ಮಹತ್ವದ ಕೆಲಸಕ್ಕೆ ಕೈ ಹಾಕಿದೆ. ಲಾಕ್ ಡೌನ್ ಹಿನ್ನೆಲೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಗ್ರಾಹಕರಿಗೆ ನೆರವಾಗಲು ಎಸಬಿಐ ಬ್ಯಾಂಕ್ ಮುಂದಾಗಿದೆ. ದೇಶದಲ್ಲಿ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ‘SBI ತುರ್ತು ಸಾಲ ಯೋಜನೆ’ಯಡಿ ಅತಿ ಶೀಘ್ರ ಸಮಯದಲ್ಲಿ ಸುಮಾರು 5 ಲಕ್ಷದವೆರೆಗೆ ಸಾಲ ನೀಡಲು ಮುಂದಾಗಿದೆ. ಸದ್ಯ ಲಾಕ್ ಡೌನ್ ಮಧ್ಯೆ ಸಾಕಷ್ಟು ಜನರು ಆರ್ಥಿಕವಾಗಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. 5ಲಕ್ಷದವರೆಗೂ ಸಾಲ ನೀಡಲು ಮುಂದಾಗಿರುವ ಸ್ಟೇಟ್ ಬ್ಯಾಂಕ್ 10.5 ರ ಬಡ್ಡಿದರವನ್ನು ನಿಗದಿ ಮಾಡಿದ್ದು, ಈ ಸಾಲದ ಸಮಾನ ಮಾಸಿಕ ಕಂತು 6 ತಿಂಗಳುಗಳ ನಂತರ ಆರಂಭವಾಗಲಿದೆ ಅಂತ ತಿಳಿಸಿದೆ.

ಸಾಲ ಪಡೆದುಕೊಳ್ಳಲು ಏನು ದಾಖಲೆ, ಅರ್ಹತೆ ಬೇಕು..?

ಎಸ್‌ಬಿಐ ಖಾತೆ ಸಂಖ್ಯೆಯ ನಾಲ್ಕು ಕೊನೆಯ ಸಂಖ್ಯೆಗಳನ್ನು 567676 ನಂಬರ್ಗೆ ಮೇಸೆಜ್ ಕಳುಹಿಸಿದ ನಂತರ ಯೋಜನೆಯ ಅರ್ಹತೆ ಬಗ್ಗೆ ತಿಳಿಸಲಾಗುತ್ತದೆ.

ನಾಲ್ಕು ಹಂತಗಳಲ್ಲಿ ಸಾಲವನ್ನು ಹೇಗೆ ಪಡೆಯಬಹುದು..?

ಎಸ್.ಬಿ.ಐ ನ ಯೋನೊ ಆಪ್ ಡೌನಲೋಡ್ ಮಾಡಿ ಅದ್ರಲ್ಲಿ ಲೋನ್ ವಿಭಾಗ ಆಯ್ಕೆ ಮಾಡಿಕೊಳ್ಳಬೇಕು ಅಲ್ಲದೇ ನಿಮಗೆ ಎಷ್ಉ ಸಾಲ ಬೇಕು, ಎಷ್ಟು ಅವಧಿಯವರೆಗೆ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.ಹೀಗೆ ಇದಕ್ಕೆ ಹಲವಾರು ದಾಖಲೆಗಳನ್ನ ನೀಡಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ಎಸ್ಬಿಐ ವೆಬ್ ಸೈಟ್ಗೆ ಭೇಟಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳಿ ಅಂತ ಸ್ಟೇಟ್ ಬ್ಯಾಂಕ್ ತಿಳಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಮಾನವನ ಮೂತ್ರದಿಂದ ಹೊಸ ಉಪಯೋಗ ಕಂಡುಕೊಂಡ ವಿಜ್ಞಾನಿಗಳು...

Sat May 9 , 2020
ಬರ್ಲಿನ್: ಚಂದ್ರನ ಮೇಲೆ ಕಾಂಕ್ರೀಟ್ ತಯಾರಿಸಲು ಮಾನವ ಮೂತ್ರವು ಒಂದು ದಿನ ಉಪಯುಕ್ತ ಘಟಕಾಂಶ ಆಗಲಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಮೂತ್ರದಲ್ಲಿನ ಸಂಯುಕ್ತವಾದ ‘ಯೂರಿಯಾ’ವು ಅದರ ಗಟ್ಟಿಮುಟ್ಟಾದ ಅಂತಿಮ ಸ್ವರೂಪ ಗಟ್ಟಿ ಆಗುವ ಮೊದಲು ‘ಚಂದ್ರನ ಕಾಂಕ್ರೀಟ್’ ಗೆ ಉಪಯೋಗಕಾರಿಯಾಗಿದೆ ಎಂಬುದನ್ನು ಇತ್ತೀಚಿನ ಅಧ್ಯಯನವೊಂದರಲ್ಲಿ ಸಂಶೋಧಕರು ಕಂಡುಕೊಂಡಿದ್ದಾರೆ ಎಂದು ಸಂಸ್ಥೆ ಹೇಳಿದೆ. ಚಂದ್ರನ ಮೇಲ್ಭಾಗದಲ್ಲಿ ಲಭ್ಯವಿರುವ ವಸ್ತುಗಳನ್ನು ಮಾತ್ರ ಬಳಸುವುದರಿಂದ ಭೂಮಿಯಿಂದ ಸರಬರಾಜಾಗುವ ಅಗತ್ಯ ಸರಕುಗಳ ಸಾಗಣೆ […]

Advertisement

Wordpress Social Share Plugin powered by Ultimatelysocial