ತುರ್ತು ಸಂದರ್ಭದಲ್ಲಿ ಸ್ವಿಗ್ಗಿ ವಿತರಣಾ ಪ್ರತಿನಿಧಿಗಳಿಗೆ ಉಚಿತ ಆಂಬ್ಯುಲೆನ್ಸ್ ಸೇವೆ.

ಬೆಂಗಳೂರು: ಭಾರತದಲ್ಲಿ ಮುಂಚೂಣಿಯಲ್ಲಿರುವ ಆನ್-ಡಿಮ್ಯಾಂಡ್ ಕನ್ವೀನಿಯನ್ಸ್ ಪ್ಲಾಟ್ ಫಾರ್ಮ್ ಆಗಿರುವ ಸ್ವಿಗ್ಗಿ (Swiggy) ಇದೀಗ ತನ್ನ ವಿತರಣಾ ಪ್ರತಿನಿಧಿಗಳು ಮತ್ತು ಅವರ ಕುಟುಂಬ ಸದಸ್ಯರ ನೆರವಿಗಾಗಿ ತಕ್ಷಣದ ಮತ್ತು ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಪರಿಚಯಿಸಿದೆ.

ಇದಕ್ಕಾಗಿ ಸ್ವಿಗ್ಗಿ ಡಯಲ್ 4242 ಆಯಂಬ್ಯುಲೆನ್ಸ್ ಸರ್ವೀಸಸ್ ನೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ತುರ್ತು ಸಂದರ್ಭಗಳಲ್ಲಿ ವಿತರಣಾ ಪ್ರತಿನಿಧಿಗಳು ಟೋಲ್ ಫ್ರೀ ದೂರವಾಣಿ ಸಂಖ್ಯೆ 1800 267 4242 ಕ್ಕೆ ಕರೆ ಮಾಡಿ ಆಯಂಬ್ಯುಲೆನ್ಸ್ ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಈ ಕರೆ ಮಾಡುವ ಬದಲಾಗಿ ವಿತರಣಾ ಪ್ರತಿನಿಧಿಗಳು ಉತ್ಪನ್ನಗಳನ್ನು ವಿತರಣೆ ಮಾಡುವ ಮುನ್ನ, ಸಂದರ್ಭದಲ್ಲಿ ಅಥವಾ ನಂತರದಲ್ಲಿ ಯಾವುದಾದರೂ ತುರ್ತು ವೇಳೆಯಲ್ಲಿ ಕರೆ ಮಾಡುವ ಬದಲಾಗಿ ಪಾರ್ಟ್ನರ್ ಆಯಪ್‌ನಿಂದ ಹೊರ ಬರದೇ ಎಸ್‌ಒಎಸ್ ಬಟನ್ ಒತ್ತಿದರೆ ಸಾಕು. ಅವರಿರುವ ಸ್ಥಳಕ್ಕೆ ಆಯಂಬ್ಯುಲೆನ್ಸ್ ಬರಲಿದೆ.

ಈ ಪ್ರಕ್ರಿಯೆಗೆ ಯಾವುದೇ ದಾಖಲಾತಿಗ ಅಗತ್ಯವಿರುವುದಿಲ್ಲ. ಆದರೆ, ವಿತರಣಾ ಪ್ರತಿನಿಧಿಗಳು ತಮ್ಮ ಕುಟುಂಬ ಸದಸ್ಯರ ಐಡಿಯನ್ನು ದೃಢಪಡಿಸುವ ಅಗತ್ಯವಿದೆ. ಬೆಂಗಳೂರು, ದೆಹಲಿ, ಎನ್ ಸಿಆರ್, ಹೈದ್ರಾಬಾದ್, ಮುಂಬೈ, ಪುಣೆ ಮತ್ತು ಕೋಲ್ಕೊತಾ ನಗರಗಳಲ್ಲಿ ಜಾರಿಗೊಳಿಸಲಾದ ಈ ಪೈಲಟ್ ಯೋಜನೆಯನ್ನು ದೇಶಾದ್ಯಂತ ವಿಸ್ತರಣೆ ಮಾಡಿದೆ. ಇದುವರೆಗೆ ಪರೀಕ್ಷಾರ್ಥ ಪ್ರಕ್ರಿಯೆಗಳಲ್ಲಿ ಕರೆ ಸ್ವೀಕರಿಸಿದ ಸರಾಸರಿ 12 ನಿಮಿಷದೊಳಗೆ ಈ ಆಯಂಬ್ಯುಲೆನ್ಸ್ ಸೇವೆ ಲಭ್ಯವಾಗಿದೆ. ಕರೆ ಸ್ವೀಕರಿಸಿದ ತಕ್ಷಣ ಸಂಕಷ್ಟಕ್ಕೆ ಒಳಗಾಗಿರುವ ವ್ಯಕ್ತಿಯ ಅಗತ್ಯಕ್ಕೆ ಅನುಗುಣವಾಗಿ ಡಯಲ್4242 ಬೇಸಿಕ್ ಲೈಫ್ ಸಪೋರ್ಟ್ (ಬಿಎಲ್‌ಎಸ್) ಆಯಂಬ್ಯುಲೆನ್ಸ್, ಕಾರ್ಡಿಯಾಕ್ ಆಯಂಬ್ಯುಲೆನ್ಸ್, ಅಡ್ವಾನ್ಸ್ಡ್ ಲೈಫ್ ಸಪೋರ್ಟ್(ಎಎಲ್‌ಎಸ್), ಇಂಟರ್ ಸ್ಟೇಟ್ ಆಯಂಬ್ಯುಲೆನ್ಸ್, ಕೋವಿಡ್-19 ಆಯಂಬ್ಯುಲೆನ್ಸ್ ಮತ್ತು ಹಿಯರ್ಸ್ ವ್ಯಾನ್ಸ್ ಸೇವೆಗಳನ್ನು ನೀಡುತ್ತದೆ.

ಈ ಸೇವೆಯು ಎಲ್ಲಾ ವಿತರಣಾ ಪ್ರತಿನಿಧಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ (ಪತಿ/ಪತ್ನಿ, ಇಬ್ಬರು ಮಕ್ಕಳು) ಸಂಪೂರ್ಣ ಉಚಿತವಾಗಿದ್ದು, ಇವರೆಲ್ಲಾ ಸ್ವಿಗ್ಗಿ ಒದಗಿಸಿರುವ ವಿಮೆಯನ್ನು ಹೊಂದಿರಬೇಕು. ಇದಲ್ಲದೇ, ವಿತರಣಾ ಪ್ರತಿನಿಧಿಗಳು ಈ ವಿಮೆಯನ್ನು ಮಾಡಿಸಿಕೊಳ್ಳದೇ ಇರುವ ತಮ್ಮ ಕುಟುಂಬ ಸದಸ್ಯರಿಗೆ ಸಬ್ಸಿಡಿ ದರದಲ್ಲಿ ಈ ಆಯಂಬ್ಯುಲೆನ್ಸ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಈ ಬಗ್ಗೆ ಮಾತನಾಡಿದ ಸ್ವಿಗ್ಗಿಯ ಕಾರ್ಯಾಚರಣೆಗಳ ಮುಖ್ಯಸ್ಥ ಮಿಹಿರ್ ರಾಜೇಶ್ ಶಾ ಅವರು, ‘ನಮ್ಮ ವಿತರಣಾ ಪ್ರತಿನಿಧಿಗಳ ಸುರಕ್ಷತೆಗೆ ಸ್ವಿಗ್ಗಿ ಬದ್ಧವಾಗಿದೆ ಮತ್ತು ಕಳೆದ ಹಲವಾರು ವರ್ಷಗಳಿಂದ ಪ್ರತಿನಿಧಿಗಳ ಸುರಕ್ಷತೆ ಮತ್ತು ಕ್ಷೇಮಕ್ಕಾಗಿ ಹಲವಾರು ಯೋಜನೆಗಳು ಮತ್ತು ನೀತಿಗಳನ್ನು ರೂಪಿಸಲು ನಾವು ಹೂಡಿಕೆ ಮಾಡಿದ್ದೇವೆ. ನಮ್ಮ ವಿತರಣಾ ಪ್ರತಿನಿಧಿಗಳು ಪ್ರತಿದಿನ ಲಕ್ಷಾಂತರ ಡೆಲಿವರಿಗಳನ್ನು ಅತ್ಯಂತ ಉತ್ತಮ ರೀತಿಯಲ್ಲಿ ಮಾಡುತ್ತಿದ್ದಾರೆ. ಆದರೆ, ವಿತರಣೆ ಮಾಡುವ ಮಾರ್ಗಮಧ್ಯದಲ್ಲಿ ಕೆಲವೊಮ್ಮೆ ಆಕಸ್ಮಿಕ ಘಟನೆಗಳು ಸಂಭವಿಸುತ್ತವೆ. ಇಂತಹ ಸಂದರ್ಭದಲ್ಲಿ ಅವರಿಗೆ ಕ್ಷಿಪ್ರವಾಗಿ ಆರೋಗ್ಯ ಸೇವೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಾವು ಉಚಿತ ಆಯಂಬ್ಯುಲೆನ್ಸ್ ಸೇವೆಗಳನ್ನು ನೀಡುತ್ತಿದ್ದೇವೆ” ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೂರ್ಣಿಮಾ ಮುಂದೆ ಶಾರ್ವರಿ ಅಸಲಿ ಮುಖ ಬಯಲು ಮಾಡುತ್ತಾಳ ಸಿರಿ.

Wed Jan 18 , 2023
ತುಳಸಿಗೆ ಅಡುಗೆ ಮನೆಯಿಂದ ಘಮ ಘಮ ಎಂದು ಪರಿಮಳ ಬರುತ್ತಾ ಇರುತ್ತದೆ. ಈ ವೇಳೆ ಸಿರಿಗೆ ಬಾಯಲ್ಲಿ ನೀರು ಬರುತ್ತದೆ. ಸಿರಿ ಪೂರ್ಣಿಮಾ ಮನೆಗೆ ಹೊರಟಿರುವುದನ್ನು ಕಂಡು ತುಳಸಿ ಕೈಗೆ ಚಕ್ಕುಲಿಯನ್ನು ಕೊಡುತ್ತಾಳೆ. ಇದನ್ನು ಆಕೆಗೆ ಕೊಡು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಿರಿಗೆ ಬಹಳ ಖುಷಿ ಆಗುತ್ತದೆ.ಸಿರಿ ಹೋದ ಬಳಿಕ ಮತ್ತೆ ಕಾಲಿಂಗ್ ಬೆಲ್ ಸದ್ದಾಗುತ್ತದೆ. ಯಾರಿರಬಹುದು ಎಂದು ನೋಡಲು ತುಳಸಿ ಬಾಗಿಲು ತೆಗೆಯುತ್ತಾಳೆ. ಅಲ್ಲಿ ಪಕ್ಕದ ಮನೆ […]

Advertisement

Wordpress Social Share Plugin powered by Ultimatelysocial