ಪೂರ್ಣಿಮಾ ಮುಂದೆ ಶಾರ್ವರಿ ಅಸಲಿ ಮುಖ ಬಯಲು ಮಾಡುತ್ತಾಳ ಸಿರಿ.

ತುಳಸಿಗೆ ಅಡುಗೆ ಮನೆಯಿಂದ ಘಮ ಘಮ ಎಂದು ಪರಿಮಳ ಬರುತ್ತಾ ಇರುತ್ತದೆ. ಈ ವೇಳೆ ಸಿರಿಗೆ ಬಾಯಲ್ಲಿ ನೀರು ಬರುತ್ತದೆ. ಸಿರಿ ಪೂರ್ಣಿಮಾ ಮನೆಗೆ ಹೊರಟಿರುವುದನ್ನು ಕಂಡು ತುಳಸಿ ಕೈಗೆ ಚಕ್ಕುಲಿಯನ್ನು ಕೊಡುತ್ತಾಳೆ. ಇದನ್ನು ಆಕೆಗೆ ಕೊಡು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಿರಿಗೆ ಬಹಳ ಖುಷಿ ಆಗುತ್ತದೆ.ಸಿರಿ ಹೋದ ಬಳಿಕ ಮತ್ತೆ ಕಾಲಿಂಗ್ ಬೆಲ್ ಸದ್ದಾಗುತ್ತದೆ. ಯಾರಿರಬಹುದು ಎಂದು ನೋಡಲು ತುಳಸಿ ಬಾಗಿಲು ತೆಗೆಯುತ್ತಾಳೆ. ಅಲ್ಲಿ ಪಕ್ಕದ ಮನೆ ಚೋಟು ಇರುತ್ತಾನೆ. ಸನ್ ಗ್ಲಾಸ್ ಹಾಕಿಕೊಂಡು ಬಂದಿರುವುದನ್ನು ನೋಡಿದ ತುಳಸಿಗೆ ಆಶ್ಚರ್ಯ ಆಗುತ್ತದೆ.ಇನ್ನೂ ಚೋಟು ಮನೆಯ ಒಳಗೆ ಬರುತ್ತಾನೆ. ಬಂದು ತುಳಸಿ ಬಳಿ ಫ್ರೆಂಡ್ ಬಗ್ಗೆ ವಿಚಾರಣೆ ಮಾಡುತ್ತಾನೆ. ಇನ್ನು ಇದನ್ನೆಲ್ಲ ಕೇಳಿದ ತುಳಸಿ ಚೋಟುಗೆ ಚಕ್ಕುಲಿಯನ್ನು ಕೊಟ್ಟು ಇಬ್ಬರು ಮಾತನಾಡಲು ತೊಡಗುತ್ತಾರೆ. ಚೋಟು ಟಿವಿ ಹಾಕಲು ಹೇಳುತ್ತಾನೆ. ತುಳಸಿ ಫೇವರೇಟ್ ಶೋ ಬರುತ್ತದೆ. ಅದುವೇ ಒಗ್ಗರಣೆ ಡಬ್ಬಿ. ಟಿವಿಯಲ್ಲಿ ಮಾಧವ ಅವರನ್ನು ನೋಡಿ ಚೋಟು ಆಂಟಿ ಇವರು ನಮ್ಮ ಮನೆಗೆ ಎರಡು ಬಾರಿ ಬಂದಿದ್ದರು, ಅವರನ್ನು ಮೀಟ್ ಮಾಡಿಸಬೇಕು ಎಂದುಕೊಂಡಿದ್ದೆ ಆದರೆ ಅಮ್ಮ ಬಿಡಲಿಲ್ಲ ಎಂದು ಹೇಳಿದಾಗ ತುಳಸಿ ಜೋರಾಗಿ ನಗುತ್ತ ಇರುತ್ತಾಳೆ. ತುಳಸಿ ಚೋಟು ಬಳಿ ಅವರನ್ನು ನಾನು ಭೇಟಿ ಆಗಿದ್ದೇನೆ ಎಂದು ಹೇಳುತ್ತಾಳೆ.ಇನ್ನು ಮಾಧವ ಕೆಫೆಯಲ್ಲಿ ಬಹಳ ಬ್ಯುಸಿ ಆಗಿರುತ್ತಾನೆ. ಇದನ್ನು ನೋಡಿದ ಸದಾ ಹಾಗೂ ಮ್ಯಾಗಿ ಸರ್ ಇವತ್ತು ಮನೆಗೆ ಬರುತ್ತಾರಾ ಇಲ್ವಾ ಎಂದು ಅಂದುಕೊಂಡಿದ್ದೆ, ಸರ್ ಇವತ್ತು ಬೆಳಗ್ಗೆನೇ ಬಂಡಿದ್ದಾರಲ್ಲ ಎಂದುಕೊಳ್ಳುತ್ತಾರೆ. ಆಗ ಮ್ಯಾಗಿ ಮನೆಯಲ್ಲಿ ಏನಾದರೂ ಆದಾಗ ಅದನ್ನು ಮರೆಯಲು ಸರ್ ಈ ರೀತಿ ಕೆಫೆಗೆ ಬೇಗ ಬರುತ್ತಾರೆ ಎಂದು ಹೇಳುತ್ತಾಳೆ. ಮಾಧವ ಎಷ್ಟೇ ಕೆಫೆಯಲ್ಲೀ ಓಡಾಡಿದರೂ ಪೂರ್ಣಿಮಾ ಹಾಗೂ ಮಹೇಶ ನೆನಪಾಗುತ್ತಾ ಇರುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಾವಣಗೆರೆಯಲ್ಲಿ ನರ್ಸಿಂಗ್ ಮರುಪರೀಕ್ಷೆ.

Wed Jan 18 , 2023
ದಾವಣಗೆರೆ, ಜನವರಿ, 18: ನರ್ಸಿಂಗ್ ಮರುಪರೀಕ್ಷೆ ನಡೆಸಬಾರದು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಹಾಗೆಯೇ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಡಿಸೆಂಬರ್ 22 ರಂದು ನರ್ಸಿಂಗ್ ಪರೀಕ್ಷೆಗಳು ಪ್ರಾರಂಭವಾಗಿದ್ದು, ಡಿಸೆಂಬರ್‌ 25ಕ್ಕೆ ಅಂತ್ಯಗೊಂಡಿವೆ. ರಾಜ್ಯದಲ್ಲಿ ಒಟ್ಟು 88,000 ವಿದ್ಯಾರ್ಥಿಗಳು ಶ್ರಮಪಟ್ಟು ಓದಿ ಪರೀಕ್ಷೆಗಳನ್ನು ಬರೆದಿದ್ದಾರೆ. ಆದರೆ ಬೆಂಗಳೂರಿನ ಬಾಣಸವಾಡಿಯ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ನಕಲು […]

Advertisement

Wordpress Social Share Plugin powered by Ultimatelysocial