ದಾವಣಗೆರೆಯಲ್ಲಿ ನರ್ಸಿಂಗ್ ಮರುಪರೀಕ್ಷೆ.

ದಾವಣಗೆರೆ, ಜನವರಿ, 18: ನರ್ಸಿಂಗ್ ಮರುಪರೀಕ್ಷೆ ನಡೆಸಬಾರದು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಹಾಗೆಯೇ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಡಿಸೆಂಬರ್ 22 ರಂದು ನರ್ಸಿಂಗ್ ಪರೀಕ್ಷೆಗಳು ಪ್ರಾರಂಭವಾಗಿದ್ದು, ಡಿಸೆಂಬರ್‌ 25ಕ್ಕೆ ಅಂತ್ಯಗೊಂಡಿವೆ. ರಾಜ್ಯದಲ್ಲಿ ಒಟ್ಟು 88,000 ವಿದ್ಯಾರ್ಥಿಗಳು ಶ್ರಮಪಟ್ಟು ಓದಿ ಪರೀಕ್ಷೆಗಳನ್ನು ಬರೆದಿದ್ದಾರೆ. ಆದರೆ ಬೆಂಗಳೂರಿನ ಬಾಣಸವಾಡಿಯ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ನಕಲು ನಡೆದಿದೆ ಎಂದು ಮರುಪರೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ ವಿದ್ಯಾರ್ಥಿಗಳು ತುಂಬಾ ಶ್ರಮಪಟ್ಟು, ನಿದ್ದೆಗೆಟ್ಟು ಪರೀಕ್ಷೆಗಳನ್ನು ಬರೆದಿರುತ್ತಾರೆ. ಏಕಾಏಕಿ ಮರುಪರೀಕ್ಷೆ ಮಾಡುವುದರಿಂದ ಶ್ರಮಹಾಕಿದ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡರು.

ಜನವರಿ 21ಕ್ಕೆ ದಿನಾಂಕ ನಿಗದಿ

ಈಗ ಪರೀಕ್ಷೆ ಬರೆಯಲು ಜನವರಿ 21ಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಆದರೆ ಕೋರ್ಟ್ ಇದಕ್ಕೆ ಸಮ್ಮತಿ ಕೊಟ್ಟಿಲ್ಲ. ಮಕ್ಕಳ ಆಸಕ್ತಿಯ ಮೇರೆಗೆ ಮರುಪರೀಕ್ಷೆ ನಡೆಸುವಂತೆ ಆದೇಶ ನೀಡಿರುತ್ತದೆ. ಆದರೆ ಬೋರ್ಡ್‌ನವರು ವಿದ್ಯಾರ್ಥಿಗಳಿಗೆ ಯಾವುದೇ ಮಾಹಿತಿ ನೀಡದೇ, ಸಲಹೆ ಪಡೆಯದೇ ಏಕಾಏಕಿ ಮರುಪರೀಕ್ಷೆ ಮಾಡಲು ನಿರ್ಧರಿಸಿದ್ದಾರೆ. ಕೆಎಸ್‌ಡಿಎನ್ ಬೋರ್ಡ್‌ನವರು ಈ ರೀತಿ ದಿಢೀರನೇ ಮರುಪರೀಕ್ಷೆ ನಡೆಸಲು ತೀರ್ಮಾನಿಸಿದ್ದಾರೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದರು.

ಮರುಪರೀಕ್ಷೆಗೆ ವಿರೋಧ ವ್ಯಕ್ತ

ಇದರಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತೆ. ಆದರಿಂದ ಈ ಮರುಪರೀಕ್ಷೆಯ ಅಗತ್ಯವಿಲ್ಲ. ಯಾವ ಪರೀಕ್ಷಾ ಕೇಂದ್ರದಲ್ಲಿ ನಕಲು ನಡೆದಿದೆಯೋ ಆ ಪರೀಕ್ಷಾ ಕೇಂದ್ರಗಳ ವಿದ್ಯಾರ್ಥಿಗಳಿಗೆ ಮಾತ್ರ ಮರುಪರೀಕ್ಷೆ ನಡೆಸಲಿ ಎಂಬುದು ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳ ಅಳಲಾಗಿದೆ. ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಂಜುನಾಥ್ ಕೊಳ್ಳೇರ, ವರುಣ್, ಶಶಾಂಕ್, ಶಿವಕುಮಾರ್, ರಘು, ಅನುಷಾ ಸೇರಿದಂತೆ ಮತ್ತಿತರರು ಹಾಜರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೊಣಕಾಲು ನೋವಿದ್ದರೂ ಸೂಪರ್ ಆಗಿ ಡ್ಯಾನ್ಸ್ ಮಾಡಿದ ಶಾರುಖ್‌.

Wed Jan 18 , 2023
ನೃತ್ಯ ಸಂಯೋಜಕ ಬಾಸ್ಕೊ ಮಾರ್ಟಿಸ್ ʻಪಠಾಣ್ʼ ಹಾಡಿನ ʻಜೂಮ್ ಜೋ ಪಠಾನ್‌ʼನ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗಿನ ಒಡನಾಟವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಬಾಸ್ಕೊ ಮಾರ್ಟಿಸ್ ಮಾತನಾಡಿ, ‘ನಮ್ಮ ಮೊದಲ ಹಾಡು ಸ್ವದೇಸ್‌ ಸಿನಿಮಾದ ʻಯೇ ತಾರಾ ವೋ ತಾರಾʼ ಆಗಿತ್ತು.ಅದಾದ ನಂತರ ಜೂಮ್ ಜೋ ಪಠಾಣ್ ಒಂದು ಹುಕ್ ಸ್ಟೆಪ್‌ ಮಾಡಬೇಕಿತ್ತು. ಹಾಡು ಎಲ್ಲ ವಯಸ್ಸಿನವರಲ್ಲಿ ಜನಪ್ರಿಯವಾಗಿದೆ. ನಾವು ರಯೀಸ್‌ ಮತ್ತು ಜೀರೋ ಸಿನಿಮಾಗಳಲ್ಲಿ ಶಾರುಖ್‌ […]

Advertisement

Wordpress Social Share Plugin powered by Ultimatelysocial