ಮೊಣಕಾಲು ನೋವಿದ್ದರೂ ಸೂಪರ್ ಆಗಿ ಡ್ಯಾನ್ಸ್ ಮಾಡಿದ ಶಾರುಖ್‌.

ನೃತ್ಯ ಸಂಯೋಜಕ ಬಾಸ್ಕೊ ಮಾರ್ಟಿಸ್ ʻಪಠಾಣ್ʼ ಹಾಡಿನ ʻಜೂಮ್ ಜೋ ಪಠಾನ್‌ʼನ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗಿನ ಒಡನಾಟವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಬಾಸ್ಕೊ ಮಾರ್ಟಿಸ್ ಮಾತನಾಡಿ, ‘ನಮ್ಮ ಮೊದಲ ಹಾಡು ಸ್ವದೇಸ್‌ ಸಿನಿಮಾದ ʻಯೇ ತಾರಾ ವೋ ತಾರಾʼ ಆಗಿತ್ತು.ಅದಾದ ನಂತರ ಜೂಮ್ ಜೋ ಪಠಾಣ್ ಒಂದು ಹುಕ್ ಸ್ಟೆಪ್‌ ಮಾಡಬೇಕಿತ್ತು. ಹಾಡು ಎಲ್ಲ ವಯಸ್ಸಿನವರಲ್ಲಿ ಜನಪ್ರಿಯವಾಗಿದೆ. ನಾವು ರಯೀಸ್‌ ಮತ್ತು ಜೀರೋ ಸಿನಿಮಾಗಳಲ್ಲಿ ಶಾರುಖ್‌ ಜತೆ ಕೆಲಸ ಮಾಡಿದ್ದೆ. ಆದರೆ ಪಠಾಣ್‌ನಲ್ಲಿ ನಾವು ಬಹಳ ಸಮಯದ ನಂತರ ಮತ್ತೆ ಒಟ್ಟಾಗಿ ಕೆಲಸ ಮಾಡಿದ್ದೇವೆʼʼ ಎಂದಿದ್ದಾರೆ.ʻಜೂಮ್ ಜೋ ಪಠಾಣ್‌ನಲ್ಲಿ ಬಾಸ್ಕೋ ಅವರ ನೃತ್ಯ ಸಂಯೋಜನೆಯು ಸಮಕಾಲೀನ ಮತ್ತು ವರ್ಣರಂಜಿತವಾಗಿದೆ ಎಂದು ಪ್ರಶಂಸಿಸಲಾಗಿದೆ. ಸಂದರ್ಶನವೊಂದರಲ್ಲಿ ಪಠಾಣ್‌ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ.ʻʻಸ್ಪೇನ್‌ನಲ್ಲಿ, ಕೇವಲ 2-3 ದಿನಗಳ ಕಾಲ ರಿಹರ್ಸಲ್‌ಗಾಗಿ ಇದ್ದೆವು. ಶೂಟಿಂಗ್‌ ಮುಗಿದ ನಂತರವೂ ಶಾರುಖ್‌ ಅವರು ರಾತ್ರಿ 1.30ರವರೆಗೆ ಅಭ್ಯಾಸ ನಡೆಸುತ್ತಿದ್ದರು. ಬಾಡಿ ಶಾಟ್‌ ತೆಗೆಯುವಾಗ ತುಂಬಾ ನಾಚಿಕೆಪಡುತ್ತಾರೆ. ಅದಕ್ಕೆ ಸರಿಯಾದ ಹಾಡು ಸಿಕ್ಕಿದ್ದು, ನಮ್ಮ ಅದೃಷ್ಟ. ಆದ್ದರಿಂದ, ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಲು ಇದು ಸರಿಯಾದ ಸಮಯ ಎಂದು ನಾನು ಭಾವಿಸಿದೆ. ಪಠಾಣ್ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಪಂಚದಾದ್ಯಂತ ರೀಲ್ಸ್‌ಗಳನ್ನು ಮಾಡಲಾಗುತ್ತಿದೆ. ಜನರ ಪ್ರತಿಕ್ರಿಯೆ ನೋಡಿ ಸಂತಸವಾಗುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

Wed Jan 18 , 2023
ಜನವರಿ 19ರಂದು ಕಲಬುರಗಿಗೆ ಭೇಟಿ ನೀಡಲಿದ್ದಾರೆ.  ಬೃಹತ್ ಸಮಾವೇಶದ ಹಿನ್ನಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಗುರುವಾರ ಸೇಡಂ ತಾಲ್ಲೂಕಿನ ಮಳಖೇಡದಲ್ಲಿ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸುವ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಜನರನ್ನು ಕರೆತರಲು ಬಸ್ ನಿಯೋಜನೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗ-1ರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್‍ಗಳನ್ನು ಕರಾರು ಒಪ್ಪಂದದ […]

Advertisement

Wordpress Social Share Plugin powered by Ultimatelysocial