ಶೂಟಿಂಗ್​ ಮುಕ್ತಾಯಕ್ಕೂ ಮುನ್ನವೇ 400 ಕೋಟಿ ರೂ. ವ್ಯವಹಾರ ಮಾಡಿದ ‘ಲಿಯೋ’ ಸಿನಿಮಾ,

ಭಾರತ ವಿವಿಧ ರಾಜ್ಯಗಳಲ್ಲಿ ‘ಲಿಯೋ’ ಸಿನಿಮಾವನ್ನು ಬಿಡುಗಡೆ ಮಾಡಲು ವಿತರಕರು ಮುಗಿಬಿದ್ದಿದ್ದಾರೆ. ವಿದೇಶದಲ್ಲೂ ಡಿಮ್ಯಾಂಡ್​ ಜೋರಾಗಿದೆ.2023ರ ಆರಂಭದಲ್ಲಿಯೇ ನಟ ದಳಪತಿ ವಿಜಯ್ಅವರು ಗೆಲುವಿನ ನಗೆ ಬೀರಿದರು.ಅವರು ನಟಿಸಿದ ‘ವಾರಿಸು’ ಸಿನಿಮಾ ಸೂಪರ್ ಹಿಟ್​ ಆಯಿತು. ಈ ಗೆಲುವಿನಿಂದಾಗಿ ಕಾಲಿವುಡ್​ನಲ್ಲಿ ಅವರ ಡಿಮ್ಯಾಂಡ್​ ಹೆಚ್ಚಾಗಿದೆ. ‘ವಾರಿಸು’ ಚಿತ್ರ ರಿಲೀ​ಸ್​ ಆಗುವುದಕ್ಕೂ ಮುನ್ನವೇ ದಳಪತಿ ವಿಜಯ್​ ಅವರು ಲೋಕೇಶ್​ ಕಗನರಾಜ್​ ನಿರ್ದೇಶನದ ಹೊಸ ಸಿನಿಮಾದ ಕೆಲಸಗಳಲ್ಲಿ ಭಾಗಿ ಆಗಿದ್ದರು. ಈ ಚಿತ್ರಕ್ಕೆಎಂದು ಶೀರ್ಷಿಕೆ ಇಡಲಾಗಿದೆ. ಅಚ್ಚರಿ ಏನೆಂದರೆ, ಈ ಸಿನಿಮಾದ ಶೂಟಿಂಗ್​ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಬರೋಬ್ಬರಿ 400 ಕೋಟಿ ರೂಪಾಯಿ ಬಿಸ್ನೆಸ್​ ಆಗಿದೆ ಎಂದು ವರದಿ ಆಗಿದೆ. ಆ ಕಾರಣದಿಂದ ‘ಲಿಯೋ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ.ತಮಿಳು ಚಿತ್ರರಂಗದಲ್ಲಿ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ಸೋಲಿಲ್ಲದ ಸರದಾರನಂತೆ ಮಿಂಚುತ್ತಿದ್ದಾರೆ. ಅವರು ನಿರ್ದೇಶಿಸಿದ ‘ವಿಕ್ರಮ್​’ ಸಿನಿಮಾ ಕಳೆದ ವರ್ಷ ಸೂಪರ್​ ಹಿಟ್​ ಆಯಿತು. ಈಗ ಅವರು ‘ಲಿಯೋ’ ಚಿತ್ರಕ್ಕೆ ಆಯಕ್ಷನ್​-ಕಟ್​ ಹೇಳುತ್ತಿದ್ದಾರೆ. 2023ರಲ್ಲೇ ಈ ಸಿನಿಮಾ ರಿಲೀಸ್​ ಆಗಲಿದೆ. ಲೋಕೇಶ್​ ಕನಗರಾಜ್​ ಮತ್ತು ದಳಪತಿ ವಿಜಯ್​ ಕಾಂಬಿನೇಷನ್​ ಮೇಲೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಭರವಸೆ ಇದೆ. ಹಾಗಾಗಿ ಈ ಚಿತ್ರದ ಪ್ರೀ-ರಿಲೀಸ್​ ಬಿಸ್ನೆಸ್​ ಚೆನ್ನಾಗಿ ಆಗುತ್ತಿದೆ.’ಲಿಯೋ’ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳನ್ನು 120 ಕೋಟಿ ರೂಪಾಯಿ ನೀಡಿ ನೆಟ್​ಫ್ಲಿಕ್ಸ್​ ಖರೀದಿಸಿದೆ. ಇದರ ಕಿರುತೆರೆ ಪ್ರಸಾರ ಹಕ್ಕುಗಳು ಸನ್​ ಟಿವಿ ಬಳಿ ಇವೆ. ಅದರ ಬೆಲೆ 70 ಕೋಟಿ ರೂಪಾಯಿ ಎನ್ನಲಾಗಿದೆ. ಸೋನಿ ಮ್ಯೂಸಿಕ್​ ಕಂಪನಿಯು 18 ಕೋಟಿ ರೂಪಾಯಿ ನೀಡಿ ‘ಲಿಯೋ’ ಚಿತ್ರದ ಹಾಡುಗಳ ಹಕ್ಕುಗಳನ್ನು ಪಡೆದುಕೊಂಡಿದೆ. ಚಿತ್ರದ ಬಿಸ್ನೆಸ್​ ಇಷ್ಟಕ್ಕೇ ಮುಗಿದಿಲ್ಲ. ಸಿನಿಮಾ ವಿತರಣೆ ಹಕ್ಕುಗಳು ಕೂಡ ಹಾಟ್​ ಕೇಕ್​ ರೀತಿ ಸೇಲ್​ ಆಗುತ್ತಿವೆ.ಭಾರತ ವಿವಿಧ ರಾಜ್ಯಗಳಲ್ಲಿ ‘ಲಿಯೋ’ ಸಿನಿಮಾವನ್ನು ಬಿಡುಗಡೆ ಮಾಡಲು ವಿತರಕರು ಮುಗಿಬಿದ್ದಿದ್ದಾರೆ. ವಿದೇಶದಲ್ಲೂ ಡಿಮ್ಯಾಂಡ್​ ಜೋರಾಗಿದೆ. ಆ ಪೈಕಿ ಬಹುತೇಕ ಬಿಸ್ನೆಸ್​ ಉತ್ತಮವಾಗಿಯೇ ಆಗಿದೆ. ಎಲ್ಲವನ್ನೂ ಸೇರಿಸಿದರೆ ಬರೋಬ್ಬರಿ 400 ಕೋಟಿ ರೂಪಾಯಿ ಹರಿದುಬಂದಿದೆ ಎಂದು ಹೇಳಲಾಗುತ್ತಿದೆ. ಶೂಟಿಂಗ್​ ಮುಗಿಯುವುದಕ್ಕೂ ಮುನ್ನ ಇಷ್ಟೊಂದು ವ್ಯವಹಾರ ಮಾಡಿದ ಮೊದಲ ತಮಿಳು ಸಿನಿಮಾ ಎಂಬ ಖ್ಯಾತಿಗೂ ‘ಲಿಯೋ’ ಚಿತ್ರ ಪಾತ್ರವಾಗುತ್ತಿದೆ.ಈ ಸಿನಿಮಾದಲ್ಲಿ ದಳಪತಿ ವಿಜಯ್​ ಜೊತೆ ತ್ರಿಷಾ ಕೃಷ್ಣನ್​, ಮಿಸ್ಕಿನ್​, ಸಂಜಯ್​ ದತ್​, ಪ್ರಿಯಾ ಆನಂದ್​, ಗೌತಮ್​ ವಾಸುದೇವ ಮೆನನ್​ ಮುಂತಾದವರು ಕೂಡ ನಟಿಸುತ್ತಿದ್ದಾರೆ. ಅಕ್ಟೋಬರ್​ 19ರಂದು ಈ ಸಿನಿಮಾ ರಿಲೀಸ್​ ಆಗಲಿದೆ.ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಮಾಡಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫುಲ್ ಟ್ಯಾಂಕ್‌ನಲ್ಲಿ ಬರೋಬ್ಬರಿ 900 ಕಿ.ಮೀ ಓಡುವ ರಾಯಲ್ ಎನ್‌ಫೀಲ್ಡ್ ಡೀಸಲ್ ಬೈಕ್

Tue Feb 28 , 2023
ವಿಶ್ವದ ಅತ್ಯಂತ ಹಳೆಯ ದ್ವಿಚಕ್ರ ವಾಹನ ತಯಾರಕರಲ್ಲಿ ಒಬ್ಬರಾಗಿರುವ ರಾಯಲ್ ಎನ್‌ಫೀಲ್ಡ್‌ಗೆ ಇಂದಿಗೂ ಉತ್ತಮ ಬೇಡಿಕೆಯಿದೆ. ತೊಂಬತ್ತರ ದಶಕದಿಂದಲೂ ಜನಪ್ರಿಯ ಮಾದರಿಗಳನ್ನು ನೀಡುತ್ತಿರುವ ಕಂಪನಿ ಒಂದು ಕಾಲದಲ್ಲಿ ಡೀಸಲ್ ಬೈಕ್‌ಗಳನ್ನು ಮಾರಾಟ ಮಾಡಿರುವುದು ಎಂದು ಎಷ್ಟು ಮಂದಿಗೆ ಗೊತ್ತು. ಈ ಲೇಖನದಲ್ಲಿ ಆ ಅಪರೂಪದ ಮೋಟಾರ್‌ಸೈಕಲ್‌ ಬಗ್ಗೆ ತಿಳಿದುಕೊಳ್ಳೋಣ. ರಾಯಲ್ ಎನ್‌ಫೀಲ್ಡ್ ಬುಲೆಟ್ ಮತ್ತು ಕ್ಲಾಸಿಕ್ ಸರಣಿಯ ಮೋಟಾರ್‌ಸೈಕಲ್‌ಗಳು ಖರೀದಿದಾರರಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ರಾಯಲ್ ಎನ್‌ಫೀಲ್ಡ್ ಒಮ್ಮೆ ಮಾರುಕಟ್ಟೆಯಲ್ಲಿ ಡೀಸೆಲ್ […]

Advertisement

Wordpress Social Share Plugin powered by Ultimatelysocial