ಫುಲ್ ಟ್ಯಾಂಕ್‌ನಲ್ಲಿ ಬರೋಬ್ಬರಿ 900 ಕಿ.ಮೀ ಓಡುವ ರಾಯಲ್ ಎನ್‌ಫೀಲ್ಡ್ ಡೀಸಲ್ ಬೈಕ್

ವಿಶ್ವದ ಅತ್ಯಂತ ಹಳೆಯ ದ್ವಿಚಕ್ರ ವಾಹನ ತಯಾರಕರಲ್ಲಿ ಒಬ್ಬರಾಗಿರುವ ರಾಯಲ್ ಎನ್‌ಫೀಲ್ಡ್‌ಗೆ ಇಂದಿಗೂ ಉತ್ತಮ ಬೇಡಿಕೆಯಿದೆ. ತೊಂಬತ್ತರ ದಶಕದಿಂದಲೂ ಜನಪ್ರಿಯ ಮಾದರಿಗಳನ್ನು ನೀಡುತ್ತಿರುವ ಕಂಪನಿ ಒಂದು ಕಾಲದಲ್ಲಿ ಡೀಸಲ್ ಬೈಕ್‌ಗಳನ್ನು ಮಾರಾಟ ಮಾಡಿರುವುದು ಎಂದು ಎಷ್ಟು ಮಂದಿಗೆ ಗೊತ್ತು.

ಈ ಲೇಖನದಲ್ಲಿ ಆ ಅಪರೂಪದ ಮೋಟಾರ್‌ಸೈಕಲ್‌ ಬಗ್ಗೆ ತಿಳಿದುಕೊಳ್ಳೋಣ.

ರಾಯಲ್ ಎನ್‌ಫೀಲ್ಡ್ ಬುಲೆಟ್ ಮತ್ತು ಕ್ಲಾಸಿಕ್ ಸರಣಿಯ ಮೋಟಾರ್‌ಸೈಕಲ್‌ಗಳು ಖರೀದಿದಾರರಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ರಾಯಲ್ ಎನ್‌ಫೀಲ್ಡ್ ಒಮ್ಮೆ ಮಾರುಕಟ್ಟೆಯಲ್ಲಿ ಡೀಸೆಲ್ ಎಂಜಿನ್ ಮೋಟಾರ್‌ಸೈಕಲ್‌ ಆದ ‘ಡೀಸೆಲ್ ಟಾರಸ್’ ಎಂಬ ಮಾದರಿಯನ್ನು ಪರಿಚಯಿಸಿತ್ತು. ಇಲ್ಲಿಯವರೆಗೆ ಡೀಸೆಲ್ ಎಂಜಿನ್ ಪಡೆದ ಭಾರತದ ಏಕೈಕ ಮೋಟಾರ್‌ಸೈಕಲ್ ಇದಾಗಿದೆ. ಇದನ್ನು 1993 ರಲ್ಲಿ ಬಿಡುಗಡೆ ಮಾಡಿ, ಸುಮಾರು ಏಳು ವರ್ಷಗಳ ನಂತರ ಹೊಸ ಎಮಿಷನ್ ಮಾನದಂಡಗಳ ಕಾರಣ 2000 ದಲ್ಲಿ ನಿಲ್ಲಿಸಲಾಯಿತು.

ಇಲ್ಲಿ ಕಾಣಸಿಗುವ ಮೋಟಾರು ಸೈಕಲ್ 1997ರ ಮಾಡೆಲ್ ಆಗಿದ್ದು, ಈ ಬೈಕಿನ ಮಾಲೀಕರಿಗೆ ಸುಮಾರು 80 ವರ್ಷ ವಯಸ್ಸಾಗಿದೆ. 26 ವರ್ಷದ ಈ ಹಳೆಯ ಡೀಸೆಲ್ ಟಾರಸ್ ಮೋಟಾರ್‌ಸೈಕಲ್‌ ಇಂದಿಗೂ ಉತ್ತಮ ಸ್ಥಿತಿಯಲ್ಲಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ಹಿಂದೆ ಮೋಟಾರ್‌ಸೈಕಲ್‌ಗೆ ಸೆಲ್ಫ್ ಸ್ಟಾರ್ಟ್ ನೀಡುತ್ತಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಹಾಗೆಯೇ ಇದು ಕೂಡ ಕಿಕ್ ಸ್ಟಾರ್ಟರ್ ಬಳಸಿ ಪ್ರಾರಂಭಿಸುವ ಮೂಲಕ ವಿಂಟೇಜ್ ಕಾಲವನ್ನು ನೆನಪಿಸುತ್ತದೆ.

ಹಳೆಯ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ನಂತೆಯೇ, ಇದು ಸಂಪೂರ್ಣವಾಗಿ ಪರಿಷ್ಕೃತವಾಗಿಲ್ಲ. ಅದರ ಮೇಲೆ ಕಂಪನಗಳು (ವೈಬ್ರೇಷನ್) ಸ್ಪಷ್ಟವಾಗಿ ಕಂಡುಬರುವುದಾಗಿ ಮಾಲೀಕ ಹೇಳುತ್ತಾರೆ. ಇತರ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳಂತೆ, ಟಾರಸ್ 350-ಸಿಸಿ ಎಂಜಿನ್ ಅನ್ನು ಹೊಂದಿಲ್ಲ. ಬದಲಿಗೆ ಇದು 325 ಸಿಸಿ, ಗ್ರೀವ್ಸ್ ಲೊಂಬಾರ್ಡಿನಿ ಫೋರ್-ಸ್ಟ್ರೋಕ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಅನೇಕ ಜನರು ಈ ಮೋಟಾರ್ಸೈಕಲ್ ಅನ್ನು ಖರೀದಿಸಲು ಒಂದು ಕಾರಣವೆಂದರೆ ಅದರ ದಕ್ಷತೆ.

ಸಾಮಾನ್ಯ ಬುಲೆಟ್ ನಿಮಗೆ ಸುಮಾರು 30 kmpl ಮೈಲೇಜ್ ಅನ್ನು ನೀಡುತ್ತವೆ. ಆದರೆ, ಈ ಡೀಸೆಲ್ ಬುಲೆಟ್ ಅಥವಾ ಟಾರಸ್ 60 ರಿಂದ 70 kmpl ನಡುವೆ ಮೈಲೇಜ್ ನೀಡುತ್ತವೆ. ಇದರರ್ಥ ಒಮ್ಮೆ ಟ್ಯಾಂಕ್‌ನಲ್ಲಿ ಪೂರ್ಣ ಡೀಸೆಲ್ ತುಂಬಿದರೆ ಮೋಟಾರ್ ಸೈಕಲ್ 900 ಕಿ.ಮೀ ಮೈಲೇಜ್ ನೀಡಬಹುದು. ಈ ಮೋಟಾರ್‌ಸೈಕಲ್ ಹೀರೋ ಹೋಂಡಾ ಸ್ಪ್ಲೆಂಡರ್‌ಗಿಂತಲೂ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ ಎಂದು ಮಾಲೀಕ ಹೇಳಿಕೊಂಡಿದ್ದಾರೆ.

325-cc ಎಂಜಿನ್ ಸುಮಾರು 6.9 Bhp ಅನ್ನು ಮಾತ್ರ ಉತ್ಪಾದಿಸಿತ್ತದೆ, ಈ ಪವರ್ ಈ ಗಾತ್ರದ ಮೋಟಾರ್‌ಸೈಕಲ್‌ಗೆ ತುಂಬಾ ಕಡಿಮೆಯಾಗಿದೆ. ಇದು ಇಂದಿಗಲ್ಲ ಆ ಕಾಲದಲ್ಲೂ ವೇಗದ ಮೋಟಾರ್‌ಸೈಕಲ್ ಆಗಿರಲಿಲ್ಲ, ಆದರೆ ತನ್ನ ಮೈಲೇಜ್ ಮೂಲಕ ಬೆಡಿಕೆಯನ್ನು ಪಡೆದಿತ್ತು. ಅನೇಕ ಪ್ರದೇಶಗಳಲ್ಲಿ, ಈ ಮೋಟಾರ್ಸೈಕಲ್ ಅನ್ನು ಕೃಷಿ ಉಪಕರಣವಾಗಿಯೂ ಬಳಸಲಾಗುತ್ತಿತ್ತು. ಜನರು ಮೋಟಾರ್‌ಸೈಕಲ್‌ನ ಎಂಜಿನ್ ಕವರ್ ತೆಗೆದುಹಾಕುವ ಮೂಲಕ ಫ್ಲೈವೀಲ್‌ಗೆ ಬೆಲ್ಟ್ ಅನ್ನು ಸಂಪರ್ಕಿಸುತ್ತಿದ್ದರು.

ನಂತರ ಕೃಷಿ ಜಮೀನುಗಳಿಗೆ ನೀರನ್ನು ಪಂಪ್ ಮಾಡಲು ಬಳಸಲಾಗುತ್ತಿತ್ತು. ಈ ಇಂಜಿನ್ ಅತ್ಯಂತ ದಕ್ಷತೆ ಹೊಂದಿದ್ದರಿಂದ ಜನರು ಇಂಧನ ಖಾಲಿಯಾಗುವ ಬಗ್ಗೆ ಚಿಂತಿಸುತ್ತಿರಲಿಲ್ಲ. ಈ ಮೋಟಾರ್‌ಸೈಕಲ್‌ಗೆ ಆ ಕಾಲದಲ್ಲಿ ಸುಮಾರು 72,000 ರೂಪಾಯಿಗಳ ಬೆಲೆ ಇತ್ತು. ಆ ಕಾಲಕ್ಕೆ ಇದು ತುಂಬಾ ದುಬಾರಿಯಾಗಿತ್ತು ಎಂದು ಕೂಡ ಹೇಳಲಾಗುತ್ತಿದೆ. ಪೆಟ್ರೋಲ್ ಚಾಲಿತ ಬುಲೆಟ್‌ಗೆ ಹೋಲಿಸಿದರೆ ಈ ಮೋಟಾರ್‌ಸೈಕಲ್ ಗ್ರಾಹಕರಲ್ಲಿ ಹೆಚ್ಚು ಜನಪ್ರಿಯವಾಗದಿರಲು ಇದು ಒಂದು ಕಾರಣವಾಗಿರಬಹುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಠಾಣ್ ಸಿನಿಮಾ ವಿರೋಧಿಗಳ ಬಗ್ಗೆ ಪ್ರಕಾಶ್ ರಾಜ್ ಟೀಕೆ,

Tue Feb 28 , 2023
ಕೇರಳದ ತಿರುವನಂತಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಪ್ರಕಾಶ್ ರಾಜ್​, ‘ಅವರು ಪಠಾಣ್ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಅಂದುಕೊಂಡಿದ್ದರು. ಆದರೆ, ಈ ಚಿತ್ರ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಪಠಾಣ್ ಸಿನಿಮಾ ರಿಲೀಸ್​ಗೂ ಮೊದಲು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಈ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಒಂದು ವರ್ಗದ ಜನರು ಆಗ್ರಹಿಸಿದ್ದರು. ಆದರೆ, ಇದು ಕೆಲಸ ಮಾಡಿಲ್ಲ. ಈ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ವಿಚಾರ […]

Advertisement

Wordpress Social Share Plugin powered by Ultimatelysocial