ವನಿತಾ ವಿಶ್ವಕಪ್‌ ಕ್ರಿಕೆಟ್‌: ಭಾರತದ ಭವಿಷ್ಯ ಇಂದೇ ನಿರ್ಧಾರ?

 

ವೆಲ್ಲಿಂಗ್ಟನ್‌: ವನಿತಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತದ ನಾಕೌಟ್‌ ಪ್ರವೇಶದ ಭವಿಷ್ಯ ಗುರುವಾರವೇ ನಿರ್ಧಾರಗೊಳ್ಳುವ ಸಾಧ್ಯತೆ ಇದೆ.

ಅಂದಮಾತ್ರಕ್ಕೆ ಗುರುವಾರ ಭಾರತಕ್ಕೆ ಯಾವುದೇ ಪಂದ್ಯವಿಲ್ಲ. ಮಿಥಾಲಿ ಪಡೆ ತನ್ನ ಉಳಿದೊಂದು ಲೀಗ್‌ ಪಂದ್ಯವಾಡುವುದು ರವಿವಾರ.

ಎದುರಾಳಿ ದಕ್ಷಿಣ ಆಫ್ರಿಕಾ. ಅದು ಲೀಗ್‌ ಹಂತದ ಕಟ್ಟಕಡೆಯ ಪಂದ್ಯವೂ ಹೌದು.

ಆದರೆ ಗುರುವಾರ ನಡೆಯುವ ದ. ಆಫ್ರಿಕಾ-ವೆಸ್ಟ್‌ ಇಂಡೀಸ್‌ ನಡುವಿನ ಲೀಗ್‌ ಪಂದ್ಯದ ಫ‌ಲಿತಾಂಶ ಭಾರತದ ಪಾಲಿಗೆ ನಿರ್ಣಾಯಕವಾಗಲಿದೆ. ಇಲ್ಲಿ ದಕ್ಷಿಣ ಆಫ್ರಿಕಾ ಗೆದ್ದರೆ ಹರಿಣಗಳ ಪಡೆಯ ಸೆಮಿಫೈನಲ್‌ ಪ್ರವೇಶ ಖಾತ್ರಿಯಾಗಲಿದೆ. ಜತೆಗೆ ಅದು ಭಾರತವನ್ನೂ ನಾಕೌಟ್‌ಗೆ ಕರೆದೊಯ್ಯುವ ಸಾಧ್ಯತೆ ಇದೆ!

ಇದನ್ನು ಗೆದ್ದರೆ ದಕ್ಷಿಣ ಆಫ್ರಿಕಾ 6 ಪಂದ್ಯಗಳಿಂದ 10 ಅಂಕ ಗಳಿಸಿದಂತಾ ಗುತ್ತದೆ. ತನ್ನ ಕೊನೆಯ ಲೀಗ್‌ ಪಂದ್ಯ ಆಡಲಿರುವ ವಿಂಡೀಸ್‌ ಅಂಕ ಆರರಲ್ಲೇ ಉಳಿಯಲಿದೆ. ಜತೆಗೆ ರನ್‌ರೇಟ್‌ ಕೂಡ ಮೈನಸ್‌ನಲ್ಲಿದೆ. 6 ಅಂಕಗಳೊಂದಿಗೆ +0.768 ರನ್‌ರೇಟ್‌ ಹೊಂದಿರುವುದು ಭಾರತಕ್ಕೊಂದು ಪ್ಲಸ್‌ ಪಾಯಿಂಟ್‌.ರೇಸ್‌ನಲ್ಲಿರುವ ತಂಡಗಳು
ರೇಸ್‌ನಲ್ಲಿ ಉಳಿಯಲಿರುವ ಉಳಿದೆರಡು ತಂಡಗಳೆಂದರೆ ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌. ಇವುಗಳಲ್ಲಿ ಇಂಗ್ಲೆಂಡ್‌ ಅಷ್ಟೇನೂ ಬಲಿಷ್ಠವಲ್ಲದ ಪಾಕಿಸ್ಥಾನ ಮತ್ತು ಬಾಂಗ್ಲಾದೇಶವನ್ನು ಎದುರಿಸಲಿಕ್ಕಿದೆ. ಎರಡನ್ನೂ ಗೆಲ್ಲುವ ಸದವಕಾಶ ಆಂಗ್ಲರ ಮುಂದಿದೆ. ಆಗ ಅಂಕ 8ಕ್ಕೆ ಏರಲಿದ್ದು, ಇಂಗ್ಲೆಂಡ್‌ ನಾಕೌಟ್‌ ಪ್ರವೇಶಿಸಲಿದೆ. ಆಂಗ್ಲರ ರನ್‌ರೇಟ್‌ ಕೂಡ ಪ್ಲಸ್‌ನಲ್ಲಿದೆ.

4 ಅಂಕ ಹೊಂದಿರುವ ಆತಿಥೇಯ ನ್ಯೂಜಿಲ್ಯಾಂಡ್‌ಗೆ ಉಳಿದಿರುವುದು ಒಂದೇ ಪಂದ್ಯ. ಎದುರಾಳಿ ಪಾಕಿಸ್ಥಾನ. ಇಲ್ಲಿ ಕಿವೀಸ್‌ ಗೆದ್ದೀತಾದರೂ ರನ್‌ರೇಟ್‌ -0.229ರಲ್ಲಿರುವುದು ಭಾರೀ ಹಿನ್ನಡೆಗೆ ಕಾರಣವಾಗಬಹುದು.
ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಭಾರತ ಸೋತರೂ ರನ್‌ರೇಟ್‌ ಉತ್ತಮ ಮಟ್ಟದಲ್ಲಿರುವುದರಿಂದ 4ನೇ ಸ್ಥಾನಿಯಾಗಿ ಸೆಮಿಫೈನಲ್‌ ತಲುಪಲು ಸಾಧ್ಯ ಎಂಬುದು ಸದ್ಯದ ಲೆಕ್ಕಾಚಾರ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ವಿಂಡೀಸ್‌ ಸೋಲುವುದು ಮುಖ್ಯ!

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಟ್ಲೀ ಕುಮಾರ್ ಅವರೊಂದಿಗಿನ ಶಾರುಖ್ ಖಾನ್ ಅವರ ಚಲನಚಿತ್ರವು ಪ್ರಮುಖ ನವೀಕರಣವನ್ನು ಹೊಂದಿದೆ ಮತ್ತು ಇದು ನಯನತಾರಾಗೆ ಸಂಬಂಧಿಸಿದೆ!

Thu Mar 24 , 2022
ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯದ ಅಟ್ಲೀ ಕುಮಾರ್ ಅವರ ಚಲನಚಿತ್ರವು ತಾತ್ಕಾಲಿಕವಾಗಿ ಲಯನ್ ಎಂದು ಹೆಸರಿಸಲ್ಪಟ್ಟಿದೆ, ಇದು ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಹದ್ದಿನ ಕಣ್ಣಿನ ಅಭಿಮಾನಿಗಳು ಚಿತ್ರದ ಅಪ್‌ಡೇಟ್‌ಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈಗ ಇತ್ತೀಚಿನ ವರದಿಯು ಚಿತ್ರದ ಬಗ್ಗೆ ಪ್ರಮುಖ ನವೀಕರಣವನ್ನು ಹೊಂದಿದೆ. ಇನ್ನಷ್ಟು ತಿಳಿಯಲು ಕೆಳಗೆ ಸ್ಕ್ರಾಲ್ ಮಾಡಿ. ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರ ಬಹುನಿರೀಕ್ಷಿತ ಚಿತ್ರವಾಗಿದ್ದು, ನಾನು ರೌಡಿ ಧಾನ್ ನಟಿ ತನಿಖಾ ಅಧಿಕಾರಿಯ ಪಾತ್ರವನ್ನು […]

Advertisement

Wordpress Social Share Plugin powered by Ultimatelysocial