ರಂಜಾನ್‌ ವೇಳೆ ಹಿಜಾಬ್‌ಗೆ ಅನುಮತಿ ನೀಡಲಾಗಿದೆ : ಹೈಕೋರ್ಟ್‌ಗೆ ಹೊಸ ಅರ್ಜಿ

 

ಬೆಂಗಳೂರು, ಫೆಬ್ರವರಿ 18: ಶುಕ್ರವಾರ ಮತ್ತು ಪವಿತ್ರ ರಂಜಾನ್ ತಿಂಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಕೋರಿ ರ್ನಾಟಕ ಹೈಕೋರ್ಟ್‌ನಲ್ಲಿ ಹೊಸ ಅರ್ಜಿಯನ್ನು ಸಲ್ಲಿಸಲಾಗಿದೆ. ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಪೀಠ, ಈ ಅರ್ಜಿಯನ್ನು ಪರಿಗಣಿಸಲು ಸಮ್ಮತಿಸಿದೆ.

ಕರ್ನಾಟಕದಲ್ಲಿನ ಹಿಜಾಬ್‌ ವಿವಾದ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಈಗಾಗಲೇ ಹಿಜಾಬ್‌ ನಿಷೇಧದ ವಿರುದ್ಧದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ನಡುವೆ ಹೊಸ ಅರ್ಜಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿದೆ.

ರಾಜ್ಯಾದ್ಯಂತ ಸಂಸ್ಥೆಗಳು ಇದನ್ನು ಜಾರಿಗೊಳಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿರುವ ಹಿನ್ನೆಲೆ ಅನೇಕ ಮುಸ್ಲಿಂ ಹುಡುಗಿಯರು ಮತ್ತು ಯುವತಿಯರು ತಮ್ಮ ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಹಿಜಾಬ್‌ಗೆ ಅವಕಾಶ ನೀಡದ ಕಾರಣ ಮನೆಗೆ ವಾಪಾಸ್‌ ಬಂದಿದ್ದಾರೆ. ಈ ವಿಷಯದ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ, ಧಾರ್ಮಿಕ ಸ್ವಾತಂತ್ರ್ಯದ ಜೊತೆಗೆ ಶಿಕ್ಷಣದ ಹಕ್ಕು ಕೂಡ ಮೂಲಭೂತ ಹಕ್ಕು ಎಂದು ಯುವತಿಯರು ಹೇಳುತ್ತಿದ್ದಾರೆ.

ಈ ಹೊಸ ಅರ್ಜಿಯಲ್ಲಿ ಏನೇನಿದೆ?

ರಾಜ್ಯದ ಮುಸ್ಲಿಂ ಬಾಲಕಿಯರ ಪರವಾಗಿ ಹಾಜರಾದ ಅರ್ಜಿದಾರ ಡಾ.ವಿನೋದ್ ಕುಲಕರ್ಣಿ, “ಮಧ್ಯಂತರ ಆದೇಶದ ಭಾಗವಾಗಿ ಮುಸ್ಲಿಂ ಹುಡುಗಿಯರು ಕನಿಷ್ಠ ಶುಕ್ರವಾರ, ಜುಮಾ ದಿನದಂದು, ಮುಸ್ಲಿಮರಿಗೆ ಅತ್ಯಂತ ಮಂಗಳಕರ ದಿನವಾದ ಸಮಯದಲ್ಲಿಯಾದರೂ ಹಿಜಾಬ್‌ ಧರಿಸಲು ಅವಕಾಶ ಮಾಡಿ ಆದೇಶ ಹೊರಡಿಸಬೇಕು ಎಂದು ಮನವಿ ಮಾಡುತ್ತೇವೆ. ವಿತ್ರ ರಂಜಾನ್ ತಿಂಗಳು, ಶೀಘ್ರದಲ್ಲೇ ಬರಲಿದೆ,” ಎಂದು ತಿಳಿಸಿದ್ದಾರೆ.

ಮುಸ್ಲಿಂ ಹುಡುಗಿಯರು ಸೂಚಿಸಿದ ಯಾವುದೇ ಸಮವಸ್ತ್ರವನ್ನು ಧರಿಸುತ್ತಾರೆ ಎಂಬ ಅವರ ಮನವಿಗೆ ವಿರುದ್ಧವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಉಲ್ಲೇಖ ಮಾಡಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಿದ ಡಾ ಕುಲಕರ್ಣಿ, “ಹಿಜಾಬ್ ಸಮವಸ್ತ್ರದ ಭಾಗವಾಗಿದೆ,” ಎಂದು ಹೇಳಿದರು. ಇನ್ನು ಹಿಜಾಬ್ ಅನ್ನು ನಿಷೇಧಿಸುವುದು “ಕುರಾನ್ ಅನ್ನು ನಿಷೇಧಿಸಿದಂತೆ” ಎಂದು ರಾಜ್ಯದ ಮುಸ್ಲಿಂ ಬಾಲಕಿಯರ ಪರವಾಗಿ ಹಾಜರಾದ ಅರ್ಜಿದಾರ ಡಾ.ವಿನೋದ್ ಕುಲಕರ್ಣಿ ಪ್ರತಿಪಾದಿಸಿದಾಗ, ನ್ಯಾಯಾಧೀಶರು “ಸ್ವಲ್ಪ ಹೆಚ್ಚಿಗೆ ಎಳೆಯಲಾಗುತ್ತಿದೆ,” ಎಂದು ಅಭಿಪ್ರಾಯಿಸಿದ್ದಾರೆ.

ಕುರಾನ್‌ನಿಂದ ಹಿಜಾಬ್ ಅನ್ನು ಶಿಫಾರಸು ಮಾಡಲಾಗಿದೆಯೇ ಎಂಬ ಚರ್ಚೆ ನಡೆಯುತ್ತಿದೆ. ಖುರಾನ್‌ನಲ್ಲಿ ಇದನ್ನು ಎಲ್ಲಿ ಹೇಳಲಾಗಿದೆ ಎಂಬುದನ್ನು ತೋರಿಸಬಹುದೇ ಎಂದು ಮುಖ್ಯ ನ್ಯಾಯಮೂರ್ತಿಗಳ ಪ್ರಶ್ನೆಗೆ, ಡಾ ಕುಲಕರ್ಣಿ ಪ್ರತಿಕ್ರಿಯಿಸಿದರು. “ನಾನು ಧರ್ಮನಿಷ್ಠ ಬ್ರಾಹ್ಮಣ, ನನ್ನ ಸಲ್ಲಿಕೆಯು ಕುರಾನ್ ಅನ್ನು ನಿಷೇಧಿಸುವ ಬಗ್ಗೆ ಇರಬಹುದು. ರಂಜಾನ್‌ ಸಂದರ್ಭದಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡಿ ದಯವಿಟ್ಟು ಆದೇಶವನ್ನು ನೀಡಿ ಎಂಬುದು ನನ್ನ ಸಲ್ಲಿಕೆಯಾಗಿದೆ.

“ಶುಕ್ರವಾರದಂದು ಅವರಿಗೆ ಹಿಜಾಬ್ ಅನ್ನು ಅನುಮತಿಸಬೇಕೆಂದು ನೀವು ಬಯಸುತ್ತೀರಾ? ನಿಮ್ಮ ವಾದವನ್ನು ನಾವು ಪರಿಗಣಿಸುತ್ತೇವೆ,” ಎಂದು ಮುಖ್ಯ ನ್ಯಾಯಮೂರ್ತಿ ಉತ್ತರಿಸಿದ್ದು ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ದಾರೆ.

ಇನ್ನು ಈಗಾಗಲೇ ತಾಂತ್ರಿಕ ಕಾರಣಗಳಿಂದಾಗಿ ಎರಡು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಲಾಗಿದೆ. ಒಂದು ಅರ್ಜಿಯ ಬಗ್ಗೆ ಪ್ರತಿಕ್ರಿಯಿಸಿದ ಪೀಠ, ನಿಮ್ಮ ಅರ್ಜಿ ನಿಯಮದ ಪ್ರಕಾರವಿಲ್ಲ. ಹೈಕೋರ್ಟ್ ಯಾವ ನಿಯಮ ಅನುಸರಿಸಬೇಕೆಂದು ಸೂಚಿಸಿದೆಯೇ ಅದರ ಪ್ರಕಾರ ಸಲ್ಲಿಕೆಯಾಗಿಲ್ಲ. ಹೀಗಾಗಿ ನಾವು ಈ ಪಿಐಎಲ್ ಅನ್ನು ವಜಾಗೊಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಅದೇ ರೀತಿ ತಾಂತ್ರಿಕ ಅಂಶದ ಆಧಾರದ ಮೇಲೆ ನ್ಯಾಯವಾದಿಯೊಬ್ಬರ ಅರ್ಜಿಯನ್ನೂ ವಜಾಗೊಳಿಸಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕರ್ಕಾಟಕ ರಾಶಿ

Fri Feb 18 , 2022
ಕರ್ಕಾಟಕ ನಾಳಿನ ಜಾತಕ ಗುರುವಾರ, ಫೆಬ್ರವರಿ 18, 2022 ಅನುಮಾನ, ನಿಷ್ಠೆ, ಖಿನ್ನತೆ, ನಂಬಿಕೆಯ ಕೊರತೆ, ದುರಾಸೆ, ಬಾಂಧವ್ಯ, ಅಹಂಕಾರ ಮತ್ತು ಅಸೂಯೆಯಂತಹ ಅನೇಕ ದುರ್ಗುಣಗಳಿಂದ ನೀವು ಮುಕ್ತರಾಗುವ ಸಾಧ್ಯತೆಯಿರುವುದರಿಂದ ನಿಮ್ಮ ಉದಾರ ಮನೋಭಾವವು ಮಾರುವೇಷದಲ್ಲಿ ಆಶೀರ್ವಾದವಾಗಿದೆ.ಶ್ರೀ ಮೂಕಾಂಬಿಕಾ ಜೋತಿಷ್ಯ ಪೀಠಂ ಖ್ಯಾತ ಜೋತಿಷ್ಯ ರತ್ನ ಪಂಡಿತ್ ಶ್ರೀ ಸಿದ್ಧಾಂತ್ ಅರುಣ್ ಶರ್ಮಾ ಗುರುಜಿ 30 ವರ್ಷದ ಅನುಭವವುಳ್ಳ ಜೋತಿಷ್ಯ ಶಾಸ್ತ್ರಜ್ಞರು. ಕುಟುಂಬ ಕಲಹ, ಸಂತಾನ ಸಮಸ್ಯೆ, ನಿರುದ್ಯೋಗ ಸಮಸ್ಯೆ, […]

Advertisement

Wordpress Social Share Plugin powered by Ultimatelysocial