ರಿಷಿ ಕಪೂರ್ಗೆ ಕಿಂಗ್ ಖಾನ್ ಭಾವನಾತ್ಮಕ ಪತ್ರ

ನಿನ್ನೆ ಬಾಲಿವುಡ್ ರೋಮ್ಯಾಂಟಿಕ್ ಹೀರೋ ರಿಷಿ ಕಪೂರ್ ನಿಧನ ಸುದ್ದಿ ಕೇಳಿ ಇಡೀ ದೇಶವೇ ಆಘಾತಕ್ಕೊಳಗಾಗಿತ್ತು. ರಿಷಿ ಕಪೂರ್ ನಿಧನಕ್ಕೆ ಬಾಲಿವುಡ್ ಅಷ್ಟೇ ಅಲ್ಲ ದೇಶದ ದೊಡ್ಡ ದೊಡ್ಡ ಗಣ್ಯರು ಕಂಬನಿ ಮಿಡಿದಿದ್ರು. ಎಲ್ಲ ಗಣ್ಯರು ರಿಷಿ ಕಪೂರ್ ಜೊತೆಗಿನ ಹಲವಾರು ನೆನಪುಗಳನ್ನು ಹಂಚಿಕೊಂಡ್ರು. ಈ ಮಧ್ಯೆ ನಟ ಶಾರುಖ್ ಖಾನ್  ಹಂಚಿಕೊಂಡ ಕೆಲ ಭಾವನಾತ್ಮಕ ನೆನಪುಗಳು ಎಲ್ಲರ ಮನಸಲ್ಲಿ ರಿಷಿ ಕಪೂರ್ ಅವರನ್ನ ಜೀವಂತವಾಗಿರಿಸಿದೆ.

ರಿಶಿ ಕಪೂರ್ ಅಭಿನಯದ ದಿವಾನಾ ಸಿನಿಮಾ ಶಾರುಖ್ ಖಾನ್‌ ಗೆ ಮೊದಲ ಸಿನಿಮಾ ಆಗಿತ್ತು. ಅಲ್ಲಿಯವರೆಗೆ ಧಾರವಾಹಿಗಳಲ್ಲಿ ನಟಿಸುತ್ತಿದ್ದ ಶಾರುಖ್ ಖಾನ್‌ ಗೆ ಮೊದಲ ಸಿನಿಮಾದಲ್ಲಿಯೇ ಆಗಿನ ಸ್ಟಾರ್ ರಿಶಿ ಕಪೂರ್ ಅವರೊಂದಿಗೆ ಅಭಿನಯಿಸುವ ಅವಕಾಶ ದೊರೆತಿತ್ತು. ಮೊಟ್ಟ ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಳ್ಳುತ್ತಿದ್ದ ಶಾರುಖ್ ಗೆ ಭಯದ ವಾತಾವರಣ ಕಾಡಿತ್ತು.

ರಿಷಿ ಕಪೂರ್ ಬಗ್ಗೆ ಭಾವನಾತ್ಮಕ ಪೋಸ್ಟ್ ಹಾಕಿದ ಶಾರುಖ್

ಸಾಕಷ್ಟು ಕೀಳರಿಮೆ ಮನೋಭಾವ ಹೊಂದಿದ್ದ ನಾನು ಚೆನ್ನಾಗಿಲ್ಲ. ನನ್ನ ಅಭಿನಯ ಅಷ್ಟೇನು ಉತ್ತಮವಾಗಿಲ್ಲ. ಸಿನಿಮಾ ರಂಗದಲ್ಲಿ ಪ್ರತಿಭಾವಂತನಲ್ಲ ಅನ್ಕೊಂಡಿದ್ದ ನನಗೆ ಹೆದರಿಕೆ ಆಗ್ತಿತ್ತು. ಒಬ್ಬ ದೊಡ್ಡ ನಟನ ಜೊತೆ ವೇದಿಕೆ ಹಂಚಿಕೊಳ್ಳುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ನಾನು ಹಲವು ಬಾರಿ ವಿಫಲವಾದರೂ ಸಹ ರಿಷಿ ಕಪೂರ್ ಸಾಹಿಬ್ ಅವರೊಂದಿಗೆ ಕೆಲಸ ಮಾಡುತ್ತಿದ್ದೆ ಅಂತ ಖುಷಿಯಾಗುತ್ತಿತ್ತು.

ವಿಶೇಷ ಅಂದ್ರೆ ತಮ್ಮ ಶಾಟ್ ಮುಗಿದಿದ್ರೂ ಕೂಡ ನನ್ನ ನಟನೆ ನೋಡಲು ರಿಷಿ ಕಪೂರ್ ಸೆಟ್ನಲ್ಲಿ ಕುರ್ಚಿ ಹಾಕಿ ಕುಳಿತುಕೊಂಡು ಗಮನಿಸುತ್ತಿದ್ದರು. ಮೊದಲೇ ಹೆದರಿದ್ದ ನಾನು ಇಲ್ಲಿ ವಿಫಲವಾದರೂ ಪರ್ವಾಗಿಲ್ಲ. ಒಬ್ಬ ಅದ್ಭುತ ನಟನೊಂದಿಗೆ ತೆರೆ ಹಂಚಿಕೊಂಡ ನೆನಪು ಅಮರವಾಗಿರುತ್ತದೆ. ಇಷ್ಟೇ ಸಾಕು ರಿಷಿ ಕಪೂರ್ ಸಾಹಿಬ್ ಅವರೊಂದಿಗಿನ ನೆನಪುಗಳಷ್ಟೇ ಸಾಕು ಅಂತ ಅಭಿನಯಿಸಿದ್ದೆ. ಭಯದಿಂದ ಆಕ್ಟಿಂಗ್ ಮಾಡಿದ್ದ ಮೊದಲ ದೃಶ್ಯವನ್ನು ನೋಡಿ ರಿಷಿ ಕಪೂರ್ ನಿನ್ನಲ್ಲಿ ತುಂಬಾ ಎನರ್ಜಿ ಇದೆಅಂತ ಹೇಳಿದ್ರು. ಅಂದು ಅವರು ಹೇಳಿದ  ಮಾತಿನಿಂದ ನಾನೊಬ್ಬ ನಾಯಕನಟ ಎನ್ನುವ ನಂಬಿಕೆ ಬಂದಿತ್ತು.

ಇತ್ತೀಚಗಷ್ಟೇ ಕೆಲ ತಿಂಗಳುಗಳ ಮೊದಲು ನಾನು ಅವರನ್ನು ಮೀಟ್ ಮಾಡಿದ್ದೆ. ಭೇಟಿಯ ವೇಳೆ ನನಗೆ ಆ ಸಿನಿಮಾದಲ್ಲಿ ಅವಕಾಶ ನೀಡಿದ್ದಕ್ಕೆ ಧನ್ಯವಾದ ತಿಳಿಸಿದ್ದೆ. ಅಲ್ಲದೇ ನೀವು (ರಿಷಿ ಕಪೂರ್) ಸಿಕ್ಕಾಗಲೆಲ್ಲ ನನ್ನ ತಲೆ ಸವರಿ, ಪ್ರೀತಿಯಿಂದ ಹೊಡೆದು ಮಾತನಾಡಿಸುತ್ತಿದ್ದಿರಿ. ಅದನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನೀವು ಹೊಡೆದ ಆ ಪ್ರೀತಿಯ ಹೊಡೆತವೇ ನನಗೆ ಆಶರ‍್ವಾದ ಎಂದು ಭಾವಿಸುತ್ತೇನೆ.

ಆ ನಿಮ್ಮ ಆಶಿರ್ವಾದದಿಂದ ನಾನು ಈ ಮಟ್ಟದ ಎತ್ತರಕ್ಕೆ ಬೆಳೆದಿದ್ದೇನೆ. ಅವರು ನೀಡಿದ ಪ್ರೋತ್ಸಾಹ, ಶಿರ್ವಾದ ನಾನು ಮರೆಯುವುದಿಲ್ಲ. ಅವರುಮ್ಮ ಪ್ರೀತಿ ಪಾತ್ರರ ಯಶಸ್ಸನ್ನು ಆನಂದಿಸುತ್ತಿದ್ದ ರೀತಿಯೇ ಬೇರೆಯಾಗಿತ್ತು. ಆದರೆ ಸಿನಿಮಾ ರಂಗದಲ್ಲಿ ಇತರರ ಯಶಸ್ಸಿಗೆ ನಿಜವಾದ ಸಂತೋಷವನ್ನ ಅನುಭವಿಸುವವರ ಸಂಖ್ಯೆ ಇನ್ನೂ ಕಡಿಮೆ ಇದೆ.

ನಾನು ಅವರನ್ನು ಅನೇಕ ವಿಷಯಗಳಲ್ಲಿ ಮಿಸ್ ಮಾಡಿಕೊಳ್ಳುತ್ತೇನೆ ಎಂದು ನಟ ಶಾರುಖ್ ಖಾನ್ ಭಾವನಾತ್ಮಕ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

 

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆ

Fri May 1 , 2020
ರಾಜ್ಯದಲ್ಲಿ ಇಂದು 24 ಜನರಿಗೆ ಹೊಸದಾಗಿ ಕೊರೋನಾ ವೈರಸ್ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 589 ಕ್ಕೇರಿಕೆಯಾಗಿದೆ ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ನಿಂದ್ ತಿಳಿದು ಬಂದಿದೆ. ಹೊಸದಾಗಿ ಸೋಂಕಿತರ  ಪೈಕಿ ಮಂಡ್ಯ ಜಿಲ್ಲೆಯಲ್ಲಿ ಎಂಟು ಜನರಿಗೆ, ಬೆಳಗಾವಿಯ ರಾಯಭಾಗದ ಮೂವರಿಗೆ, ವಿಜಯಪುರದಲ್ಲಿ ಒಬ್ಬರಿಗೆ, ದಕ್ಷಿಣ ಕನ್ನಡದಲ್ಲಿ ಇಬ್ಬರಿಗೆ, ದಾವಣಗೆರೆಯ ಆರು ಜನರಿಗೆ, ಚಿಕ್ಕಬಳ್ಳಾಪುರದಲ್ಲಿ ಒಬ್ಬರಿಗೆ, […]

Advertisement

Wordpress Social Share Plugin powered by Ultimatelysocial