ಕಮಲದ ರೂಪದಲ್ಲಿರುವ ಶಿವಮೊಗ್ಗ ವಿಮಾನ ಟರ್ಮಿನಲ್..!

ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೆಯಾಗಿದೆ. ಹಾಗಾಗಿ ಈ ಕೂಡಲೇ ಶಿವಮೊಗ್ಗದಲ್ಲಿರುವ ವಿಮಾನ ನಿಲ್ದಾಣದ ಟರ್ಮಿನಲ್ ಕಮಲದ ರೂಪದಲ್ಲಿ ಇರುವುದರಿಂದ, ಅದಕ್ಕೆ ಹೊದಿಕೆ ಹಾಕಬೇಕೆಂದು ಚುನಾವಣಾ ಅಧಿಕಾರಿಗಳಿಗೆ ಜಿಲ್ಲಾ ಕಾಂಗ್ರೆಸ್ ಮನವಿ ಮಾಡಿದೆ.  ಶಿವಮೊಗ್ಗ ಕರ್ನಾಟಕ ವಿಧಾನ ಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಕಮಲ ರೂಪದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣದ ಟರ್ಮಿನಲ್​ಗೆ ಹೊದಿಕೆ ಹಾಕುವಂತೆ ಚುನಾವಣಾ ಅಧಿಕಾರಿಗಳಿಗೆ ಜಿಲ್ಲಾ ಕಾಂಗ್ರೆಸ್ ಮನವಿ ಮಾಡಿದೆ. ಇದು ನೀತಿ ಸಂಹಿತೆ ಉಲ್ಲಂಘನೆ ಆಗುವುದರಿಂದ ಕೂಡಲೇ ಚುನಾವಣಾ ಆಯೋಗ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಚುನಾವಣೆ ಮುಗಿಯುವವರೆಗೂ ಹೊದಿಕೆ ಹಾಕಿ ಮುಚ್ಚಬೇಕು ಎಂದು ಕಾಂಗ್ರೆಸ್​ ಆಗ್ರಹಿಸಿದೆ.

ಕಮಲ ಆಕಾರದ ವಿಮಾನ ನಿಲ್ದಾಣದ ಟರ್ಮಿನಲ್ ಪೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡುವ ಮೂಲಕ ಇದು ನಮ್ಮ ಸಾಧನೆ ಎಂದು ಬಿಜೆಪಿ ಪಕ್ಷ ಬಿಂಬಿಸುತ್ತಿದೆ ಹಾಗಾಗಿ ಚುನಾವಣೆ ಮುಗಿಯುವವರೆಗೂ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಸಂಪೂರ್ಣ ಪರದೆಯಿಂದ ಮುಚ್ಚಬೇಕು ಹಾಗೂ ಸಾರಿಗೆ ಬಸ್​ಗಳಲ್ಲಿ ಇರುವ ಸರ್ಕಾರದ ಜಾಹೀರಾತುಗಳನ್ನು ಸಹ ತೆರವು ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ದೇವೆಂದ್ರಪ್ಪ ಹಾಗೂ ಕವಿತಾ ರಾಘವೇಂದ್ರ, ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎರಡು ದಿನದ ಪ್ರವಾಸಕ್ಕಾಗಿ ಇಂದು ಪ್ರಧಾನಿ ಮೈಸೂರಿಗೆ ಆಗಮನ!

Sat Apr 8 , 2023
ಹೈದರಾಬಾದ್​ನಲ್ಲಿ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೆ ಚಾಲನೆ ನೀಡಿರುವ ಪ್ರಧಾನಿ ಮೋದಿ ಇಂದು ಚೆನ್ನೈಗೆ ತೆರಳಿ, ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ಫ್ಲ್ಯಾಗ್ ತೋರಿಸಲಿದ್ದಾರೆ. ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡು ದಿನದ ಮೈಸೂರು, ಬಂಡೀಪುರ ಪ್ರವಾಸಕ್ಕಾಗಿ ಇಂದು ರಾತ್ರಿ ಮೈಸೂರಿಗೆ ಆಗಮಿಸಿ, ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇದಕ್ಕಾಗಿ ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಹಾಕಲಾಗಿದ್ದು, ಕಳೆದ ಎರಡು ದಿನಗಳಿಂದ ಎಸ್​ಪಿಜಿ […]

Advertisement

Wordpress Social Share Plugin powered by Ultimatelysocial