ಶ್ರೀಗುರು ಶಾಂತೇಶ್ವರ ಹಿರೇಮಠದ ಜಾತ್ರಾ ಮಹೋತ್ಸವ ಆರಂಭ.

 

ಮಾದನಹಿಪ್ಪರಗಾ ಗ್ರಾಮದ ಶ್ರೀಗುರು ಶಾಂತೇಶ್ವರ ಹಿರೇಮಠದ ಜಾತ್ರಾ ಮಹೋತ್ಸª ಹಾಗೂ ಜಗದ್ಗುರು ರೇಣುಕಾಚಾರ್ಯರ ಯುಗಶತಮಾನೊತ್ಸವ ಕಾರ್ಯಕ್ರಮ ಮಾರ್ಚ 1 ರಿಂದ 11 ರವರೆಗೆ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಲಿದೆ.ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಪ್ರತಿ ದಿನ ಸಂಜೆ ಕಡಕೋಳ ಮಡಿವಾಳಪ್ಪನವರ ಮಹಾಪುರಾಣ 1008 ಮುತೈದೆಯರಿಗೆ ಉಡಿ ತುಂಬುವುದು ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷಾ ಪಟ್ಟಾಧ್ಯಕ್ಷರ ಕುಂಬೋತ್ಸವ ಲಿಂ. ಶಿವಲಿಂಗ ಮಹಾಶಿವಯೋಗಿಗಳ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳ ತೂಗು ಉಯ್ಯಾಲೆ ಸಾಮೂಹಿಕ ಜಪ ಅನುಷ್ಠಾನ 11 ರಂದು ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಗಣ್ಯರಿಗೆ ಸತ್ಕಾರ ಸಮಾರಂಭ ನಡೆಯಲಿದೆ. ಈ ಒಂದು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸರ್ವ ಭಕ್ತಾಧಿಗಳು ಪಾಲ್ಗೊಳ್ಳಬೇಕೆಂದು ಶಾಂತೇಶ್ವರ ಹಿರೇಮಠದ ಪೀಠಾಧಿಪತಿಗಳಾದ ಶ್ರೀ ಶಾಂತವೀರ ಶಿವಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ಸಿ.ವಿ.ರಾಮನ್ ಸ್ಮರಣೆ.

Thu Mar 2 , 2023
  ವಿದ್ಯಾರ್ಥಿಗಳು ಪ್ರಶ್ನೆಗಳು ಕೇಳುವುದು ಹಾಗೂ ಕೂತುಹಲ ಹೆಚ್ಚಿಸಿಕೊಳ್ಳುವ ಮೂಲಕ ತಮ್ಮ ಜ್ಞಾನದ ಮಟ್ಟವನ್ನು ವೃದ್ದಿಸಿಕೊಳ್ಳಬೇಕು ಎಂದು ಎಸ್‍ಡಿಎಂಸಿ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.ಪಟ್ಟಣದ ನಾಗಾವಿ ಕ್ಯಾಂಪಸ್‍ನಲ್ಲಿರುವ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಿಜ್ಞಾನಿ ಸಿ.ವಿ.ರಾಮನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಯಾರಲ್ಲಿ ಪ್ರಶ್ನೆ ಕೇಳುವ ಮನೋಭಾವನೆ ಇರುತ್ತದೆಯೋ ಅಂತಹ ವಿದ್ಯಾರ್ಥಿ ಜೀವನದಲ್ಲಿ ಏನಾದರೊಂದು ಸಾಧಿಸುತ್ತಾನೆ. ಹೀಗಾಗಿ ಸಾಕಷ್ಟು ಪ್ರಶ್ನೆಗಳು ಕೇಳುವ […]

Advertisement

Wordpress Social Share Plugin powered by Ultimatelysocial