10ನೇ ತರಗತಿ ವಿದ್ಯಾರ್ಥಿ ಜೊತೆ 27 ವರ್ಷದ ಶಿಕ್ಷಕಿ ಪರಾರಿ.

 

 

ಹೈದರಾಬಾದಿನಲ್ಲಿ ಕಳೆದ ತಿಂಗಳು ನಡೆದಿದ್ದ ಶಿಕ್ಷಕಿ – ವಿದ್ಯಾರ್ಥಿ ಪರಾರಿ ಪ್ರಕರಣವನ್ನು ಪೊಲೀಸರು ಕೊನೆಗೂ ಬಗೆಹರಿಸಿದ್ದಾರೆ. ಇವರಿಬ್ಬರನ್ನು ಪತ್ತೆ ಹಚ್ಚಿ ಕರೆ ತಂದಿರುವ ಪೊಲೀಸರು ಕೌನ್ಸೆಲಿಂಗ್ ನಡೆಸಿ ತಿಳುವಳಿಕೆ ಹೇಳಿದ ಬಳಿಕ ಕಳುಹಿಸಿಕೊಟ್ಟಿದ್ದಾರೆ.ಹೈದರಾಬಾದಿನ ಚಂದನ್ ನಗರದಲ್ಲಿ ವಾಸಿಸುತ್ತಿದ್ದ 27 ವರ್ಷದ ಅವಿವಾಹಿತ ಮಹಿಳೆ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಶಾಲೆಯಲ್ಲಿಯೇ ವ್ಯಾಸಂಗ ಮಾಡುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿ ಪ್ರೇಮ ಪಾಶದಲ್ಲಿ ಈಕೆ ಬಿದ್ದಿದ್ದರು.ಫೆಬ್ರವರಿ 16 ರಂದು ಶಾಲೆಗೆ ಹೋಗುತ್ತೇನೆ ಎಂದು ಹೇಳಿದ್ದ ಶಿಕ್ಷಕಿ ಮನೆಗೆ ಬಾರದೆ ನಾಪತ್ತೆಯಾಗಿದ್ದು ಫೆಬ್ರವರಿ 17ರಂದು ಪ್ರಕರಣ ದಾಖಲಿಸಲಾಗಿತ್ತು. ಫೆಬ್ರವರಿ 20ರಂದು ಅದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೂಡ ನಾಪತ್ತೆಯಾಗಿದ್ದು, ಪೋಷಕರು ಶಿಕ್ಷಕಿ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು.ಇವರಿಬ್ಬರೂ ರೈಲಿನಲ್ಲಿ ಬೆಂಗಳೂರಿಗೆ ತೆರಳಿದ್ದು ತಿಳಿದುಬಂದ ಬಳಿಕ ಅವರುಗಳ ಪತ್ತೆಗಾಗಿ ಪೊಲೀಸರು ವ್ಯಾಪಕ ತನಿಖೆ ಕೈಗೊಂಡಿದ್ದರು. ಬೆಂಗಳೂರು – ಹೈದರಾಬಾದಿನ ವಿವಿಧ ಲಾಡ್ಜ್ ಗಳಲ್ಲಿ ತಂಗಿದ್ದ ಇವರುಗಳು ಫೆಬ್ರವರಿ 27ರಂದು ಹೈದರಾಬಾದಿನ ಗಚ್ಚಿಬೊಲಿ ಠಾಣೆಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೇಷ ರಾಶಿ ಭವಿಷ್ಯ.

Mon Mar 6 , 2023
ಸ್ನೇಹಿತರೊಂದಿಗಿನ ಸಂಜೆ ಆಹ್ಲಾದಕರವಾಗಿದ್ದರೂ ವಿಪರೀತ ತಿನ್ನುವುದು ಮತ್ತು ಹಾರ್ಡ್ ಡ್ರಿಂಕ್ ಗಳ ಬಗ್ಗೆ ಎಚ್ಚರಿಕೆಯಿಂದಿರಿ. ನಿಮ್ಮ ಸೃಜನಶೀಲ ಪ್ರತಿಭೆಯನ್ನು ಸರಿಯಾಗಿ ಬಳಸಿದಲ್ಲಿ ಅದು ಅತ್ಯಂತ ಲಾಭದಾಯಕವೆಂದು ಸಾಬೀತಾಗಬಹುದು. ಸಂಬಂಧಿಗಳು / ಸ್ನೇಹಿತರು ಒಂದು ಅದ್ಭುತ ಸಂಜೆಗಾಗಿ ಬರುತ್ತಾರೆ. ಪ್ರೀತಿಗಾಗಿ ವಿಶೇಷ ದಿನ- ರಾತ್ರಿಗಾಗಿ ಯಾವುದಾದರೂ ಯೋಜನೆ ಹಾಕಿ ಮತ್ತು ಇದನ್ನು ಸಾಧ್ಯವಾದಷ್ಟು ಪ್ರಣಯಮಯವಾಗಿಸಲು ಪ್ರಯತ್ನಿಸಿ. ಹೊಸ ಉದ್ಯಮಗಳು ಆಕರ್ಷಕವಾಗಿರುತ್ತವೆ ಮತ್ತು ಒಳ್ಳೆಯ ಆದಾಯದ ಭರವಸೆ ಕಾಣಿಸುತ್ತದೆ. ಸಮಯಲಿಕ್ಕೆ ಸರಿಯಾಗಿ ಕೆಲಸವನ್ನು […]

Advertisement

Wordpress Social Share Plugin powered by Ultimatelysocial