ಮೂತ್ರ ಸೋರಿಕೆ ತಡೆಗಟ್ಟಲು ಯಶಸ್ವಿ ಶಸ್ತ್ರಚಿಕಿತ್ಸೆ.

 

ಶಿವಮೊಗ್ಗದ ಎನ್‌ಯು ಆಸ್ಪತ್ರೆಯಲ್ಲಿ ಯಶಸ್ವಿಯಗಿ ಇದೆ ಮೊದಲ ಬಾರಿಗೆ ಮೂತ್ರ ರೋಗ ಶಸ್ತ್ರ ಚಿಕಿತ್ಸೆಯ ಮೂಲಕ ಮೂತ್ರ ಸೋರಿಕೆಯನ್ನು ಗುಣಪಡಿಸಲಾಗಿದೆ.ಗರ್ಭಕೋಶದ ಶಸ್ತ್ರಚಿಕಿತ್ಸೆಯ ನಂತರ ಮೂತ್ರ ಚೀಲಕ್ಕೆ ತೊಂದರೆಯಾಗಿ 38 ವರ್ಷದ ಮಹಿಳೆಗೆ ನಿರಂತರವಾಗಿ ಮೂತ್ರ ಸೋರುತ್ತಿತ್ತು.ಗರ್ಭಕೋಶದ ಶಸ್ತ್ರಚಿಕಿತ್ಸೆಯ ನಂತರ ಮೂತ್ರ ಚೀಲಕ್ಕೆ ತೊಂದರೆಯಾಗಿ 38 ವರ್ಷದ ಮಹಿಳೆಗೆ ನಿರಂತರವಾಗಿ ಮೂತ್ರ ಸೋರುತ್ತಿತ್ತು. ಇದರಿಂದ ಹಾಕಿದ ಬಟ್ಟೆ ಒದ್ದೆಯಾಗಿ ಮೂತ್ರದ ವಾಸನೆಯಿಂದ, ಬೇರೆಯವರು ಅವರೊಂದಿಗೆ ಬೆರೆಯಲು ಹಿಂದೆಮುಂದೆ ಯೋಚಿಸುವಂತಾಗಿತ್ತು.ಈ ಮೂತ್ರ ಸೋರುವಿಕೆಯಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಅವರು ಸಾಮಾಜಿಕವಾಗಿ ಬೇರೆಯವರೊಂದಿಗೆ ಬೆರೆಯುವುದನ್ನು ಸಹ ನಿಲ್ಲಿಸಿದ್ದರು, ಒಟ್ಟಾರೆ ತಮ್ಮ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು.ಎನ್‌ಯು ಆಸ್ಪತ್ರೆಯಲ್ಲಿ ಕೂಲಂಕುಷವಾಗಿ ತಪಾಸಣೆ ಮಾಡಿದಾಗ ಇವರ ಮೂತ್ರ ಚೀಲದಲ್ಲಿ ರಂಧ್ರವಾಗಿ ಯೋನಿ ಮಾರ್ಗಕ್ಕೆ ಜೋಡಣೆಯಾಗಿರುವುದು ಖಚಿತವಾಯಿತು. ‌ಈ ತೊಂದರೆಗೆ ಎನ್‌ಯು ಆಸ್ಪತ್ರೆಯ ಖ್ಯಾತ ಮೂತ್ರ ರೋಗ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಪ್ರದೀಪ್ ಅವರು ಲ್ಯಾಪ್ರೋಸ್ಕೊಪಿಯ ಮುಖಾಂತರ ಶಸ್ತ್ರಚಿಕಿತ್ಸೆಯನ್ನು ಮಾಡಿ, ಮೂತ್ರ ಸೋರಿಕೆಯನ್ನು ಯಶಸ್ವಿಯಾಗಿ ಗುಣಪಡಿಸಿರುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ಸೆಲ್ಫಿಗಾಗಿ ಸೋನು ನಿಗಮ್ ಜೊತೆ ತಳ್ಳಾಟ.

Mon Feb 27 , 2023
    ಮುಂಬಯಿಯ ಚೆಂಬೂರ್ ಉತ್ಸವದ ಅಂತಿಮ ದರ್ಶನದ ವೇಳೆ ವೇದಿಕೆಯಿಂದ ಕೆಳಗೆ ಬರುವಾಗ ನಿನ್ನೆ ರಾತ್ರಿ ಖ್ಯಾತ ಗಾಯಕ ಸೋನು ನಿಗಮ್ ಅವರನ್ನು ತಳ್ಳಲಾದ ಘಟನೆ ನಡೆಯಿತು. ಮುಂಬೈನ ಚೆಂಬೂರ್ ಪ್ರದೇಶದಲ್ಲಿ ಲೈವ್ ಕನ್ಸರ್ಟ್ ವೇಳೆ ಗಾಯಕ ಸೋನು ನಿಗಮ್ ಮೇಲೆ ಈ ಹಲ್ಲೆ ನಡೆದಿದೆ. ಸೋನು ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಉದ್ಧವ್ ಬಣದ ಶಾಸಕ ಪ್ರಕಾಶ್ ಫಟರಪೇಕರ್ ಪುತ್ರನ ವಿರುದ್ಧ ಈ ಆರೋಪ […]

Advertisement

Wordpress Social Share Plugin powered by Ultimatelysocial