*ಯಶಸ್ವಿಯಾಗಿ ಜರುಗಿದ ಗ್ರಾಮ ಸಭೆ *

ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ಬೆಳಕೇರಾ ಗ್ರಾಮ ಪಂಚಾಯತ್ ಆವರಣದಲ್ಲಿ ಸೋಮವಾರ ಗ್ರಾಮ ಪಂಚಾಯತ ಅಧ್ಯಕ್ಷ ಮಾಣಿಕ ಹಿಪರಗಿ ರವರ ಅಧ್ಯಕ್ಷತೆಯಲ್ಲಿ ಮನೆಗಳ ಹಂಚಿಕೆಯ ಗ್ರಾಮ ಸಭೆ ಹಮಿಕೊಳಲಾಯಿತ್ತು. ಈ ಗ್ರಾಮ ಸಭೆಯಲ್ಲಿ ನೋಡಲಧಿಕಾರಿ ಶಿವಪುತ್ರ ಪಾಟೀಲ ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭಾಗ್ಯಜ್ಯೋತಿ ರವರ ಸಹಭಾಗಿತ್ವದಲ್ಲಿ 2021-22ನೇ ಸಾಲಿನ ಬಸವ ವಸತಿ ಯೋಜನೆ ಮತ್ತು ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ ಒಟ್ಟು 40 ಮನೆಗಳ ಹಚ್ಚಿಯ ಗ್ರಾಮ ಸಭೆಯನ್ನು ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಳಲಾಯಿತ್ತು. ಈ ಗ್ರಾಮ ಸಭೆಯಲ್ಲಿ ಪಂಚಾಯತ್ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿ 31 ಅರ್ಹ ಫಲಾನುಭವಿಗಳ ಆಯ್ಕೆ ಮಾಡಲಾಯಿತು.ಬನಳ್ಳಿ ಗ್ರಾಮಸ್ಥರು ಗ್ರಾಮ ಸಭೆಗೆ ಸಹಕರಿಸದೇ ಇರುವುದರಿಂದ 9 ಮನೆ ರದ್ದು ಪಡಿಸಲಾಗಿದೆ ಎಂದು ತಿಳಿಸಿದರು. ನಂತರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭಾಗ್ಯಜ್ಯೋತಿ ಅರ್ಹ ಫಲಾನುಭವಿಗಳ ಪಟ್ಟಿ ಓದಿ ಗ್ರಾಮಸ್ಥರ ಒಪ್ಪಿಗೆ ಪಡೆದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪಾರ್ವತಿ ಪ್ರಭು, ಸದಸ್ಯರಾದ ಶಿವಕುಮಾರ ಹಿಪರಗಿ, ಕಮಲ್, ಕಮಲಾಬಾಯಿ, ಝರೆಪ್ಪಾ, ಸೂರ್ಯಕಾಂತ, ಸಂಜುಕುಮಾರ್, ಉಮಾದೇವಿ, ಅಂಪೂರ್ಣ ರಾಚಯ್ಯ, ಸೇರಿದಂತೆ ಸದಸ್ಯರು , ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು, ಪಂಚಾಯತ್ ಸಿಬ್ಬಂದಿ ವರ್ಗದವರು ಇದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರದಿಂದ ಶೀಘ್ರವೇ 3 ಆದೇಶ

Tue Feb 14 , 2023
ನವದೆಹಲಿ, ಫೆಬ್ರವರಿ 14: 18 ತಿಂಗಳ ಹಳೆಯ ತುಟ್ಟಿಭತ್ಯೆ (ಡಿಎ) ಬಾಕಿ, ಫಿಟ್‌ಮೆಂಟ್ ಅಂಶಗಳು ಮತ್ತು ಡಿಎ ಹೆಚ್ಚಳದ ಪಾವತಿಯ ಔಪಚಾರಿಕ ದೃಢೀಕರಣದ ಬಗ್ಗೆ ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ಪಿಂಚಣಿದಾರರು ಶೀಘ್ರವೇ ಕೇಂದ್ರ ಸರ್ಕಾರ ಒಳ್ಳೆಯ ಸುದ್ದಿ ನೀಡಲಿದೆ. ಬಹು ಮಾಧ್ಯಮ ಮೂಲಗಳ ಪ್ರಕಾರ, ಕೇಂದ್ರ ಸಿಬ್ಬಂದಿ ಈ ವರ್ಷ ಹೋಳಿ ವೇಳೆಗೆ ಒಳ್ಳೆಯ ಸುದ್ದಿಯನ್ನು ಪಡೆಯಬಹುದು ಎನ್ನಲಾಗಿದೆ. 1. ಕೇಂದ್ರ ಸರ್ಕಾರಿ ನೌಕರರು […]

Advertisement

Wordpress Social Share Plugin powered by Ultimatelysocial