ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಗುಡಿಸಿನಲ್ಲಿದ್ದ ಕರು ಸಜೀವ ದಹನವಾಗಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿ ನಡೆದಿದೆ. ಆಕಸ್ಮಿಕವಾಗಿ ಗುಡಿಸಿಲಿಗೆ ಬೆಂಕಿ ಬಿದ್ದಿದ್ದು,ಬೆಂಕಿಯ ಅವಘಡದಿಂದ ದೊಡ್ಡ ಆಲಹಳ್ಳಿಯ ಗ್ರಾಮಸ್ಥ ಕಂಗಾಲಾಗಿದ್ದಾರೆ.ದೊಡ್ಡ ಆಲಹಳ್ಳಿಯ ತಾತಯ್ಯ ಎಂಬುವರಿಗೆ ಸೇರಿದ ಕರು. ಇನ್ನು ಬೆಂಕಿ ನಿಂದಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಇದನ್ನೂ ಓದಿ :ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್

ಕಾಲೇಜಿನಲ್ಲಿಯೇ ನೇಣುಬಿಗಿದುಕೊಂಡು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ. ವೆಂಕಟ ಚೈತನ್ಯ ರೆಡ್ಡಿ ಆತ್ಮಹತ್ಯೆಗೆ ಶರಣಾದ ಯುವಕ. ಚನ್ನಪಟ್ಟಣದ ಖಾಸಗಿ ಕಾಲೇಜಿನಲ್ಲಿ BSC ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ವೆಂಕಟ್ ಶೌಚಾಲಯದ ಕಿಟಕಿಯ ಸರಳುಗಳಿಗೆ ನೇಣುಬಿಗಿದುಕೊಂಡಿದ್ದಾನೆ. ಸದ್ಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರ ಮಾಡಿದ್ದು, ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಕೇಸ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ:ರಾಷ್ಟ್ರೀಯ ಹೆದ್ದಾರಿಯಲ್ಲಿ ಜವರಾಯನ ಅಟ್ಟಹಾಸ,ಅಪಘಾತದಲ್ಲಿ ವ್ಯಕ್ತಿ ಸ್ಥಳದಲ್ಲೇ ಸಾವು  

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ದಾಟುವಾಗ ಅಪಘಾತವಾಗಿ ಓರ್ವ ವ್ಯಕ್ತಿ ಸಾವನ್ನಪಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬಳಿ ನಡೆದಿದೆ. ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯಾಗಳಾಗಿದ್ದು, ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಮಹ್ಮದ್ ಸಗೀರ್ (30) ಮೃತ ದುರ್ದೈವಿ.ಇನ್ನು ಈ ಪ್ರಕರಣವು ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದನ್ನೂ ಓದಿ :ಕೊಲೆ ಆರೋಪಿ ಕಾಲಿಗೆ ಗುಂಡೇಟು

ಕನಕಪುರ ಗ್ರಾಮಾಂತರ ಪೊಲೀಸರ ಭರ್ಜರಿ ಕಾರ್ಯಾಚರಣೆಯನ್ನು ಮಾಡಿ ಜಿಂಕೆ ಬೇಟೆಗಾರರನ್ನು ಬಂಧಿಸಿದ್ದಾರೆ. ರಾಮನಗರ ಜಿಲ್ಲೆಯ, ಕನಕಪುರ ತಾಲೂಕಿನ, ತಿಗಳರ ಹೊಸಳ್ಳಿಯ ಬೈಪಾಸ್ ಬಳಿ ಘಟನೆ ನಡೆದಿದೆ. ತಿಗಳರ ಹೊಸಳ್ಳಿಯ ಬೈಪಾಸ್ ಬಳಿ ಒಂದು ಚೀಲ ಹಿಡಿದುಕೊಂಡು ಅನುಮಾನಸ್ಪದವಾಗಿ ನಿಂತಿದ್ದ ಜಿಂಕೆ ಬೇಟೆಗಾರರು…ಮಾಹಿತಿ ತಿಳಿದು ರಹಸ್ಯವಾಗಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ 5 ಜಿಂಕೆ ಚರ್ಮಗಳು ಸೇರಿದಂತೆ ಒಂದು ಡಿಯೋ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಆರೋಪಿಗಳದ ರೆಹಮಾನ್, […]

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಂಗಮದ ಬಳಿ ಹರಿಯುವ ಅರ್ಕಾವತಿ ನದಿಯ ಸ್ಥಳದ ಬಳಿ ಸುತ್ತಮುತ್ತಲೂ ಮಿಲಿಟರಿ ತರಬೇತಿ ನಡೆಯುತ್ತಿತ್ತು. ಆ ಸಮಯದಲ್ಲಿ ಬಳಸಿದ್ದ ಲಾಂಚರ್ ಮಾದರಿ ಮಿಲಿಟರಿ ವಸ್ತುಗಳನ್ನ ನದಿಗೆ ಎಸೆಯಲಾಗಿತ್ತು. ಈಗ ಅದು ಸ್ಥಳೀಯ ಜನರಿಗೆ ಸಿಕ್ಕಿರುವ ಬಗ್ಗೆ ಮಾಹಿತಿ ದೊರಕಿದೆ. ಸ್ಥಳಕ್ಕೆ ತಜ್ಞರ ತಂಡ ವಸ್ತು ಪರೀಕ್ಷೆ ನಡೆಸಿ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ :ಬೆಂಗಳೂರಿನಲ್ಲಿ ಪೊಲೀಸ್ ದಂಪತಿ ಆತ್ಮಹತ್ಯೆ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರಿಗೆ ದ್ವೇಷದ ರಾಜಕಾರಣ ಗೊತ್ತಿಲ್ಲ ಎಂದ ವಸತಿ ಸಚಿವ ವಿ.ಸೋಮಣ್ಣ  . ರಾಮನಗರ ಜಿಲ್ಲೆಯ, ಕನಕಪುರ ತಾಲ್ಲೂಕಿನಲ್ಲಿ ಸಂಯುಕ್ತ ವಸತಿ ಉದ್ಘಾಟನೆಯ ನಂತರ ಮಾತನಾಡಿದ ಅವರು ಕರ್ನಾಟಕ ಗೃಹ ಮಂಡಳಿ ವತಿಯಿಂದ ಹಲವು ಕಡೆ ಬಡಾವಣೆಗಳ ನಿಮಿ೯ಸಿ ಜನರಿಗೆ ಹಂಚಿಕೆ ಮಾಡುತ್ತಿದ್ದು, ರಿಯಲ್ ಎಸ್ಟೇಟ್ ನಂತರ ಅವರಿಗೆ ಗೃಹ ಮಂಡಳಿ ಪೈಪೋಟಿ ನೀಡುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪಗೆ ದ್ವೇಷದ ರಾಜಕಾರಣ ಗೊತ್ತಿಲ್ಲ. ಕನಕಪುರಕ್ಕೆ ಏನು ಅವಶ್ಯಕತೆ ಇದೆಯೋ ಅದನ್ನು […]

Advertisement

Wordpress Social Share Plugin powered by Ultimatelysocial