ದೀರ್ಘಕಾಲದ ಲಾಕ್‌ಡೌನ್ ನಂತರ ಇಂದು ರೈಲು ಸೇವೆ ಆರಂಭವಾಗಿದೆ. ೨೦೦ ರೈಲುಗಳು ವೇಳಾಪಟ್ಟಿ ಅನುಸಾರ ಸಂಚರಿಸಲಿದ್ದು, ಮೊದಲ ರೈಲು ಮಹಾನಗರಿ ಎಕ್ಸ್ಪ್ರೆಸ್ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ಉತ್ತರ ಪ್ರದೇಶದ ವಾರಣಾಸಿಗೆ ಪ್ರಯಾಣ ಬೆಳೆಸಿದೆ.  ಮೊದಲ ರೈಲು ೦೧೦೯೨ ಸಿಎಸ್‌ಎಂಟಿ ಮುಂಬೈ-ವಾರಣಾಸಿ ವಿಶೇಷ ರೈಲು ೨೦೨೦ ಜೂನ್. ೧ರಂದು ೦೦.೧೦ಕ್ಕೆ ಹೊರಟಿದೆ ಎಂದು ಸೆಂಟ್ರಲ್ ರೈಲ್ವೆ ಇಲಾಖೆ ಟ್ವೀಟ್ ಮಾಡಿದೆ. ಮೇ ೧೨ರಂದು ಸರಿಸುಮಾರು ೧.೪೫ ಲಕ್ಷ ಪ್ರಯಾಣಿಕರು […]

ಕೊರೊನಾ ಲಾಕ್‌ಡೌನ್ ಹಿನ್ನಲೆ ಬಸ್, ರೈಲು ಸಂಚಾರವನ್ನ ಸರ್ಕಾರ ರದ್ದುಗೊಳಿಸಿತ್ತು. ಇದೀಗ ಲಾಕ್‌ಡೌನ್ ಸಡಿಲಿಕೆಯಾಗಿದ್ದು, ಮತ್ತೆ ಕೆಲಸಕ್ಕೆ ಮರಳಲು ಪ್ರಯಾಣಿಕರಿಗೆ ರೈಲು, ಬಸ್ ವ್ಯವಸ್ಥೆ ಮಾಡಲಾಗುತ್ತಿದೆ.  ಜೂ. ೧ರಿಂದ ದೇಶಾದ್ಯಂತ್ ರೈಲು ಸಂಚಾರ ಆರಂಭವಾಗಲಿದ್ದು, ಎಲ್ಲಾ ರಾಜ್ಯಗಳಿಂದ ಬೆಂಗಳೂರಿಗೆ ರೈಲು ಬರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.  ಉತ್ತರ ಭಾಗದಿಂದ ರಾಜಧಾನಿಗೆ ಸುಮಾರು೨೫-೩೦ಸಾವಿರ ಜನ ಬರುವ ನಿರೀಕ್ಷೆಯಿದೆ. ಹೀಗಾಗಿ ರೈಲ್ವೆ ಇಲಾಖೆ ರೈಲು ಸಂಚಾರಕ್ಕೆ ಅನುಮತಿ ನೀಡಿದೆ.

Advertisement

Wordpress Social Share Plugin powered by Ultimatelysocial