ದೇವಸ್ಥಾನಗಳಲ್ಲಿ ಇನ್ಮೇಲೆ ಮೊಬೈಲ್‌ ಬಳಕೆ ನಿಷೇಧ – ಹೈಕೋರ್ಟ್‌ ಆದೇಶ

ದೇವಸ್ಥಾನಗಳ ಒಳ ಭಾಗದಲ್ಲಿ ಮೊಬೈಲ್‌ ಬಳಕೆ ನಿಷೇಧ ಎಂದು ಮದ್ರಾಸ್‌ ಹೈಕೋರ್ಟ್‌ ಆದೇಶ ನೀಡಿದೆ. ಹಾಗಾಗಿ ಇನ್ಮೇಲೆ ತಮಿಳುನಾಡಿನಲ್ಲಿ ಭಕ್ತರು ದೇವಸ್ಥಾನದ ಒಳಗಡೆ ಮೊಬೈಲ್‌ ಫೋನ್‌ ಬಳಸುವ ಹಾಗಿಲ್ಲ. ದೇವಸ್ಥಾನಗಳಿಗೆ ಭಕ್ತರು ಭಕ್ತಿಪೂರ್ವಕವಾಗಿ ಭೇಟಿ ನೀಡುವ ವೇಳೆ ಮೊಬೈಲ್ ಬಳಕೆಯಿಂದಾಗಿ ಹಲವು ಸಮಸ್ಯೆಗಳು ಉಂಟಾಗುತ್ತಿದೆ. ಹಾಗಾಗಿ ತಮಿಳುನಾಡಿನ ಅನೇಕ ಪ್ರಸಿದ್ಧ ದೇವಾಲಯಗಳನ್ನು ನಿರ್ವಹಿಸುತ್ತಿರುವ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತರಿಗೆ ನ್ಯಾಯಾಧೀಶರು ದೇವಾಲಯದ ಒಳಗೆ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸುವಂತೆ ಸೂಚಿಸಿದರು. ಈ ಮನವಿ ಮೇರೆಗೆ ನ್ಯಾಯಮೂರ್ತಿಗಳಾದ ಆರ್.ಮಹದೇವನ್ ಮತ್ತು ಜೆ ಸತ್ಯನಾರಾಯಣ ಪ್ರಸಾದ್ ಅವರ ವಿಭಾಗೀಯ ಪೀಠ ದೇವಸ್ಥಾನಗಳ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಮೊಬೈಲ್ ನಿಷೇಧಿಸುವ ಮಹತ್ವದ ಆದೇಶ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

ಸಿಎಂ ಬೊಮ್ಮಾಯಿಯವರ ಕಾರ್ಯಕ್ರಮದಲ್ಲಿ ಒಡವೆ ಕಳೆದುಕೊಂಡ ಮಹಿಳೆ

Sat Dec 3 , 2022
ಸಿಎಂ ಬೊಮ್ಮಾಯಿಯವರ ಕಾರ್ಯಕ್ರಮದಲ್ಲಿ ಬಂಗಾರದ ಮಂಗಳಸೂತ್ರ ಕಳೆದುಕೊಂಡು ಮಹಿಳೆ ಬಿಕ್ಕಿ ಬಿಕ್ಕಿ ಅತ್ತ ಘಟನೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಸಿ ಎಂ ಬಸವರಾಜ ಬೊಮ್ಮಾಯಿಯವರ ಕಾರ್ಯಕ್ರಮಕ್ಕೆ ಬಂದಿರುವ ಮಹಿಳೆಯು ಕೊರಳಿನಲ್ಲಿರುವ 40ಗ್ರಾಂ ಬಂಗಾರದ ಮಂಗಳ ಸೂತ್ರ ಕಳೆದುಕೊಂಡಿದ್ದಾಳೆಮಂಗಳ ಸೂತ್ರ ಕಳೆದುಕೊಂಡ ಮಹಿಳೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಶಾಂತಾಬಾಯಿ ಬೊಮ್ಮನವರ ಮಾಜಿ ತಾಲೂಕು ಪಂಚಾಯತ ಅಧ್ಯಕ್ಷ ಯಾಗಿದ್ದಾಳೆ ಕಾರ್ಯಕ್ರಮ ಮುಗಿದ ನಂತರ ಎದ್ದು ಬರುವಾಗ ಕೊರಳ್ಳಲ್ಲಿ […]

Advertisement

Wordpress Social Share Plugin powered by Ultimatelysocial