ಹೂಡಿಕೆ ಬಂಡವಾಳವನ್ನು ಸಂಪೂರ್ಣವಾಗಿ ಸಮತೋಲನಗೊಳಿಸಲು ಟರ್ಮ್ ಇನ್ಶೂರೆನ್ಸ್ ಒಂದು ಉತ್ತಮ ಆಯ್ಕೆಯಾಗಿದೆ.

ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ, ಹಿಂದಿನ ವರ್ಷ ನೀವು ತೆಗೆದುಕೊಂಡ ನಿರ್ಣಾಯಕ ನಿರ್ಧಾರಗಳನ್ನು ಹಿಂತಿರುಗಿ ನೋಡುವುದು ಮುಖ್ಯವಾಗಿದೆ. ನಿಮ್ಮ ವೃತ್ತಿಯ ಆಯ್ಕೆಗಳನ್ನು ಮೌಲ್ಯಮಾಪನ ಮಾಡುವುದರಿಂದ ಹಿಡಿದು ನಿಮ್ಮ ಫಿಟ್‌ನೆಸ್ ಗುರಿಗಳನ್ನು ಸಾಧಿಸುವವರೆಗೆ, ಉತ್ತಮ ಆರ್ಥಿಕ ಕ್ರಮಗಳನ್ನು ತೆಗೆದುಕೊಳ್ಳುವವರೆಗೆ – ನೀವು ಸರಿಯಾದ ಹಾದಿಯಲ್ಲಿದ್ದೀರಿ ಎಂದು ತಿಳಿಯಲು ಕೆಲವು ಹಂತಗಳನ್ನು ಮರುಪರಿಶೀಲಿಸಬೇಕಾಗಿದೆ. ಹಣಕಾಸು ಯೋಜನೆಗೆ ಸಂಬಂಧಿಸಿದಂತೆ ಹಣಕಾಸಿನ ವಿಷದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಷಯಕ್ಕೆ ಬಂದಾಗ, ನಾವು ಸಾಮಾನ್ಯವಾಗಿ ಎಫ್‌ಡಿಗಳು, ಮ್ಯೂಚುಯಲ್ ಫಂಡ್‌ಗಳು, ಎನ್‌ಪಿಎಸ್ ಮತ್ತು ಆರ್‌ಡಿಗಳ ಮೊರೆ ಹೋಗುತ್ತೇವೆ. ಮತ್ತು ವಿಮೆಯ ವಿಷಯಕ್ಕೆ ಬಂದರೆ, ಅನೇಕರು ಜೀವ ವಿಮೆಯನ್ನು ಕೇವಲ ಜೀವನಕ್ಕಾಗಿ ಮಾತ್ರವಲ್ಲದೆ ಉತ್ತಮವಾದ ತೆರಿಗೆ ಉಳಿತಾಯ ಹೂಡಿಕೆಯ ಆಯ್ಕೆಯಾಗಿಯೂ ಅವಲಂಬಿಸಿದ್ದಾರೆ. ಆದರೆ ಹೂಡಿಕೆ ಬಂಡವಾಳವನ್ನು ಸಂಪೂರ್ಣವಾಗಿ ಸಮತೋಲನಗೊಳಿಸಲು ಟರ್ಮ್ ಇನ್ಶೂರೆನ್ಸ್ ಒಂದು ಉತ್ತಮ ಆಯ್ಕೆಯಾಗಿದೆ ಎಂದು ಹಲವರಿಗೆ ತಿಳಿದಿರುವುದಿಲ್ಲ.ಯಾವುದೇ ಸಂಕೀರ್ಣತೆ ಇಲ್ಲದೆ ಒಂದು ದೊಡ್ಡ ಮೊತ್ತದ ಪಾವತಿಯ ಆಯ್ಕೆ ಅಥವಾ ವಿವಿಧ ಹಂತಗಳಲ್ಲಿ ಹೆಚ್ಚಿನ ಮೊತ್ತದ ಪಾವತಿಯ ಆಯ್ಕೆಯೊಂದಿಗೆ ನಿಮ್ಮ ಹಣಕಾಸು ಪೋರ್ಟ್‌ಫೋಲಿಯೊವನ್ನು ಪ್ರಬಲವಾಗಿಸಲು ಟರ್ಮ್ ಪ್ಲಾನ್ ಸಹಾಯ ಮಾಡುತ್ತದೆ. ಟರ್ಮ್ ಇನ್ಶೂರೆನ್ಸ್ ಅನೇಕ ಪ್ರಯೋಜನಗಳನ್ನು ಹೊಂದಿದ್ದು ದೃಢವಾದ ಹೂಡಿಕೆಗಾಗಿ ಇದನ್ನು ಹೂಡಿಕೆ ಪೋರ್ಟ್‌ಫೋಲಿಯೋದಲ್ಲಿ ಸೇರಿಸಿಕೊಳ್ಳಲೇಬೇಕಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಅಕ್ರಮ 'PSI' ನೇಮಕಾತಿ ಪ್ರಕರಣ

Thu Jan 5 , 2023
ಅಕ್ರಮ ಪಿಎಸ್‌ಐ ನೇಮಕಾತಿ ಪರೀಕ್ಷೆ ( PSI Recruitment Scam ) ಪ್ರಕರಣಕ್ಕೆ ಸಂಬಂಧಿಸಿದಂತೆ 26 ಆರೋಪಿಗಳಿಗೆ ಕೋರ್ಟ್ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.ಕಲಬುರಗಿ ಸೆಷನ್ಸ್ ಕೋರ್ಟ್ ಈ ಕುರಿತು ಆದೇಶ ಹೊರಡಿಸಿದ್ದು, ಕಿಂಗ್ ಪಿನ್ ದಿವ್ಯಾ ಹಾಗರಗಿ, ಡಿವೈಎಸ್ಪಿ ಮಲ್ಲಿಕಾರ್ಜುನ ಸೇರಿದಂತೆ ಒಟ್ಟು 26 ಆರೋಪಿಗಳಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.ಈ ಮೂಲಕ ಇದುವರೆಗೆ 36 ಜನರಿಗೆ ಜಾಮೀನು ಸಿಕ್ಕಂತಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಅಕ್ರಮ ಪಿಎಸ್‌ಐ ನೇಮಕಾತಿ ಪರೀಕ್ಷೆ […]

Related posts

Advertisement

Wordpress Social Share Plugin powered by Ultimatelysocial