RRR ತಂಡದಲ್ಲಿ ಜೋರಾಗಿದೆ ಒಳಜಗಳ.. ಆಸ್ಕರ್‌ ಬಳಿಕ ಹೊರಬಿತ್ತು ಅಸಲಿ ವಿಷ್ಯ!

ಮೊನ್ನೆ ನಡೆದ ಆಸ್ಕರ್‌ 2023 ಅಲ್ಲಿ RRR ಚಿತ್ರದ ನಾಟು ನಾಟು ಹಾಡು ಈ ವರ್ಷ ಅತ್ಯುತ್ತಮ ಮೂಲ ಗೀತೆಯನ್ನು ಗೆದ್ದಿದೆ. ಇದರ ಜೊತೆಗೆ, ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ಎಲಿಫೆಂಟ್ ವಿಸ್ಪರರ್ಸ್ ಪ್ರಶಸ್ತಿ ಬಾಚಿಕೊಂಡಿದೆ.

ಸದ್ಯ RRR ತಂಡ ಆಸ್ಕರ್‌ ಗೆದ್ದ ಖುಷಿಯನ್ನು ಸಂಭ್ರಮಿಸುತ್ತಿದೆ. ಆದರೆ ನಿರ್ಮಾಪಕ ದಾನಯ್ಯ ಮಾತ್ರ ಈ ಸಂತಸದ ಭಾಗವಾಗದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಇಡೀ ವಿಶ್ವವೇ ಇಷ್ಟೊಂದು ಬಿಗ್ ಬಜೆಟ್ ಸಿನಿಮಾವನ್ನು ಕುತೂಹಲದಿಂದ ನೋಡುತ್ತಿರುವ ಹೊತ್ತಿನಲ್ಲಿ ದಾನಯ್ಯ ಮಾತ್ರ ಎಲ್ಲೂ ತಂಡದ ಜೊತೆ ಕಾಣಿಸಿಕೊಂಡಿಲ್ಲ. ಈ ಸಮಾರಂಭದಲ್ಲಿ ರಾಜಮೌಳಿ ಅವರ ಕುಟುಂಬ, ಚಿತ್ರತಂಡ ಮತ್ತು ನಾಯಕರು ಭಾಗವಹಿಸಿದ್ದರು. ಆದರೆ ದಾನಯ್ಯ ಮಾತ್ರ ದೂರ ಉಳಿದಿದ್ದಾರೆ. ಅಸಲಿಗೆ ಏನಾಯ್ತು.. ದಾನಯ್ಯ ಯಾಕೆ ದೂರವಾದರು ಅನ್ನೋದು ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಾಧ್ಯಮಗಳ ಒಂದು ವಿಭಾಗವೂ ಇದನ್ನು ಹೈಲೈಟ್ ಮಾಡುತ್ತಿದೆ.

ರಾಜಮೌಳಿಗೆ ಏನಾದರೂ ಸಮಸ್ಯೆ ಇದೆಯಾ ಅಥವಾ ಆಸ್ಕರ್ ವಿಚಾರಕ್ಕೆ ಸಂಬಂಧಿಸಿದಂತೆ ಹಣ ಖರ್ಚು ಮಾಡುತ್ತಿಲ್ಲವೇ?ಬಾಹುಬಲಿ ನಿರ್ಮಾಪಕ ಶೋಭು ಅವರ ಜೊತೆಗಿದ್ದಾರೆ. ಅವರು ಅದನ್ನು ಇಷ್ಟಪಡುವುದಿಲ್ಲವೇ? ಹೀಗೆ ಹತ್ತು ಹಲವು ಪ್ರಶ್ನೆಗಳು ಹುಟ್ಟುಕೊಂಡಿವೆ. ಅವರು ದೂರ ಉಳಿಯಲು ನಿಜವಾದ ಕಾರಣವೇನು? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ.

RRR ಸಿನಿಮಾ ಆಸ್ಕರ್​ ಪ್ರಶಸ್ತಿ ಗೆಲ್ಲಲು ನಡೆಸಿದ ಪ್ರಯತ್ನಗಳ ಬಗ್ಗೆ ಹಲವು ಮಾತುಗಳು ಶುರುವಾಗಿವೆ. ಈ ಚಿತ್ರವನ್ನು ಸ್ವತಂತ್ರವಾಗಿ ಆಸ್ಕರ್​ ಸ್ಪರ್ಧೆಗೆ ಕಳಿಸಲು ನಿರ್ದೇಶಕ ರಾಜಮೌಳಿ ಸಾಕಷ್ಟು ಹಣ ವ್ಯಯಿಸಿದ ವಿಚಾರವೂ ಹರಿದಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ನಿರ್ಮಾಪಕ ಡಿವಿವಿ ದಾನಯ್ಯ ಚಿತ್ರತಂಡ ಸಂಪರ್ಕದಲ್ಲೇ ಇಲ್ಲ ಎಂಬ ಸತ್ಯ ಇದೀಗ ಬಟಾ ಬಯಲಾಗಿದೆ.

ಇದೀಗ ಎಎನ್​ಐ ಸುದ್ದಿ ಸಂಸ್ಥೆಗೆ ನಿರ್ಮಾಪಕ ಡಿವಿವಿ ದಾನಯ್ಯ ಪ್ರತಿಕ್ರಿಯೆ ನೀಡಿದ್ದಾರೆ. “ಪ್ರಶಸ್ತಿ ಬಂದಿದ್ದಕ್ಕೆ ಸಂತಸವಾಗಿದೆ. ಆದರೆ ನಾನು ಯಾರ ಜೊತೆಯೂ ಸಂಪರ್ಕದಲ್ಲಿಲ್ಲ” ಎಂದು ಹೇಳಿದ್ದಾರೆ.

 ಈ ಎಲ್ಲಾ ಘಟನೆಗಳ ನಡುವೆ, ನಿರ್ಮಾಪಕ ದಾನಯ್ಯ ಚಿತ್ರ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆದ ನಂತರ ಬಹುತೇಕ ದೂರ ಉಳಿದಿರುವುದಕ್ಕೆ ಮತ್ತೊಂದು ಕಾರಣವಿದೆಯಂತೆ. ಆಸ್ಕರ್ ಪ್ರಚಾರಕ್ಕಾಗಿ ಯಾವುದೇ ಮೊತ್ತವನ್ನು ಖರ್ಚು ಮಾಡಲು ದಾನಯ್ಯ ಆಸಕ್ತಿ ತೋರಲಿಲ್ಲ ಎಂಬುದು ಉದ್ಯಮದ ಸುದ್ದಿ. ವಿಶಿಷ್ಟವಾದ ಆಸ್ಕರ್ ಅಭಿಯಾನಕ್ಕೆ ಭಾರೀ ಮಾರ್ಕೆಟಿಂಗ್, ಟೂರಿಂಗ್ ಮತ್ತು ಔಟ್‌ರೀಚ್ ಚಟುವಟಿಕೆಗಳ ಅಗತ್ಯವಿರುತ್ತದೆ, ಅದರಲ್ಲಿ ದಾನಯ್ಯ ಹೆಚ್ಚು ಆಸಕ್ತಿ ತೋರಿಸಲಿಲ್ಲ ಎಂಬ ಆರೋಪವೂ ಇದೆ.

ದಾನಯ್ಯ ಎಲ್ಲಿಯೂ ಹಾಜರಾಗದೇ ಇರುವುದಕ್ಕೆ ಇದೂ ಕೂಡ ಮುಖ್ಯ ಕಾರಣವಾಗಿತ್ತು ಎನ್ನಲಾಗ್ತಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಿರ್ಮಾಪಕರು ಆರ್‌ಆರ್‌ಆರ್ ತಂಡದ ಬಗ್ಗೆ ಹೆಮ್ಮೆಪಡುತ್ತೇನೆ ಮತ್ತು ಅವರ ಚಿತ್ರಕ್ಕೆ ಆಸ್ಕರ್ ಸಿಗುತ್ತಿದೆ ಎಂದು ಹೇಳಿದ್ದರು (ಆಸ್ಕರ್‌ಗೂ ಮೊದಲು ನಡೆದ ಸಂದರ್ಶನದಲ್ಲಿ). ಆಸ್ಕರ್ ವೇದಿಕೆಗೆ ಹೋಗುವ ಮೊದಲು ರಾಜಮೌಳಿ, ಎನ್‌ಟಿಆರ್ ಅಥವಾ ರಾಮ್ ಚರಣ್ ಮೂವರಲ್ಲಿ ಯಾರೂ ಅವರನ್ನು ಸಂಪರ್ಕಿಸಿಲ್ಲ ಎಂದು ದಾನಯ್ಯ ಹೇಳಿದ್ದಾರೆ ಎನ್ನಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉದ್ಘಾಟನೆಗೊಂಡ ಮರುದಿನವೇ ಕಿತ್ತು ಬಂದ ರಸ್ತೆ!

Wed Mar 15 , 2023
ಬಹು ನಿರೀಕ್ಷಿತ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ನೆರವೇರಿಸಿದ್ದು, ಇದರ ಮಧ್ಯೆ ಬಿಡದಿ ಬೈಪಾಸ್ ಸೇತುವೆ ಮೇಲಿನ ರಸ್ತೆ ಕಿತ್ತು ಬಂದಿರುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಮನಗರ ಕಡೆಯಿಂದ ಪ್ರಯಾಣಿಸುವಾಗ ಸಿಗುವ ಬಿಡದಿ ಬೈಪಾಸ್ ಮುಕ್ತಾಯದ ಜಾಗದಲ್ಲಿ ಸೇತುವೆ ಮೇಲಿನ ರಸ್ತೆ ಕಿತ್ತು ಬಂದಿದ್ದು, ಇದೀಗ ಒಂದು ಭಾಗದಲ್ಲಿ ವಾಹನಗಳು ಓಡಾಡದಂತೆ ಬ್ಯಾರಿಕೇಡ್ ಅಳವಡಿಸಿ ಇದರ […]

Advertisement

Wordpress Social Share Plugin powered by Ultimatelysocial