ಅತ್ಯಾಧುನಿಕ ಕ್ಯಾಮೆರಾಗಳಲ್ಲಿ ಪತ್ತೆಯಾಗುತ್ತಿವೆ ದಿನಕ್ಕೆ 14,000 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ!

 

 

ಬೆಂಗಳೂರು, ಡಿ. 23: ಸಿಲಿಕಾನ್ ಸಿಟಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ಬಹಳಷ್ಟು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಕ್ಯಾಮೆರಾಗಳನ್ನು ಬಳಸಿಕೊಂಡು ಬೆಂಗಳೂರು ಸಂಚಾರ ಪೊಲೀಸರು ಪ್ರತಿದಿನ ಸರಿಸುಮಾರು 14,000 ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮತ್ತು ಟ್ರಾಫಿಕ್ ವಿಶೇಷ ಪೊಲೀಸ್ ಆಯುಕ್ತ ಎಂಎ ಸಲೀಂ ಮಾಹಿತಿ ನೀಡಿದ್ದಾರೆ.ಈ ಡಿಸೆಂಬರ್ 20 ರಂದು ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ ಕ್ಯಾಮೆರಾ ಸುಮಾರು 30,000 ಪ್ರಕರಣಗಳನ್ನು ದಾಖಲಿಸಿದೆ ಎಂದು ಹೇಳಿದ್ದಾರೆ. 250 ಎಐ ಅಳವಡಿಸಲಾದ ಎಎನ್‌ಪಿಆರ್ ಕ್ಯಾಮೆರಾಗಳು ಮತ್ತು ಎಂಟು ಕೆಂಪು ದೀಪ ಉಲ್ಲಂಘನೆ ಕ್ಯಾಮೆರಾಗಳನ್ನು ಅಳವಡಿಸಿದ್ದರು.”ನಮ್ಮ ಗಮನ ತಂತ್ರಜ್ಞಾನದ ಮೇಲಿದೆ. ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಈ ಪ್ರಕರಣಗಳಲ್ಲಿ ನೇರವಾಗಿ ಭಾಗಿಯಾಗದಂತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಿಕೊಂಡು ಪ್ರಕರಣ ದಾಖಲು ಮಾಡಬೇಕು ಎಂದು ನಾವು ಬಯಸುತ್ತೇವೆ. ಇದು ಪ್ರಕರಣಗಳ ದಾಖಲಾಗುವಿಕೆಯಲ್ಲಿ ಸಾಕಷ್ಟು ಪಾರದರ್ಶಕತೆಯನ್ನು ತಂದಿದೆ. ನಾವು ಪ್ರತಿದಿನ ಸರಾಸರಿ 13,000 ರಿಂದ 14,000 ಪ್ರಕರಣಗಳು ದಾಖಲಾಗುತ್ತುವೆ ಎಂದು ಸಲೀಂ ಹೇಳಿದ್ದಾರೆ.ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ITMS)ನ ಈ ಕ್ಯಾಮೆರಾಗಳು ಏಳು ವಿಧದ ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಮಾಡುತ್ತವೆ. ಅವುಗಳೆಂದರೆ ಅತಿವೇಗ, ರೆಡ್ ಲೈಟ್ ಉಲ್ಲಂಘನೆ, ಸ್ಟಾಪ್ ಲೇನ್ ಉಲ್ಲಂಘನೆ, ಹೆಲ್ಮೆಟ್ ಧರಿಸದೆ ನಿಯಮ ಉಲ್ಲಂಘನೆ, ತ್ರಿಬಲ್ ರೈಡಿಂಗ್ ಮಾಡುವುದು, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮತ್ತು ಸೀಟ್ ಬೆಲ್ಟ್ ಇಲ್ಲದೆ ವಾಹನ ಚಲಾಯಿಸುವುದು ಸೇರಿವೆ.”ಜಂಕ್ಷನ್‌ನಲ್ಲಿ ಟ್ರಾಫಿಕ್ ಪೊಲೀಸರು ಇದ್ದಾಗ, ಜನರು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದಿಲ್ಲ. ಆದರೆ ಟ್ರಾಫಿಕ್ ಅನ್ನು ಮೇಲ್ವಿಚಾರಣೆ ಮಾಡಲು ಯಾರೂ ಇಲ್ಲದಿದ್ದಾಗ, ಜನರು ಸಿಗ್ನಲ್ ಜಂಪ್ ಮಾಡುತ್ತಾರೆ. ಆದರೆ ಈಗ ಅವುಗಳೆಲ್ಲಾ ಕ್ಯಾಮೆರಾಗಳಲ್ಲಿ ನೋಂದಣಿಯಾಗುತ್ತಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ತಮ್ಮನ್ನು ಕಡೆಗಣಿಸಿದ ಮಕ್ಕಳಿಂದ ಆಸ್ತಿ ವಾಪಸ್ ಪಡೆದ ಪೋಷಕರು

Fri Dec 23 , 2022
    ಶಹಾಪುರದ ರವೀಂದ್ರನಾಥ ಹಿರೇಮಠ ಅವರು, ತಮ್ಮ ಮಕ್ಕಳಿಗೆ ನೀಡಿದ್ದ 10 ಎಕರೆ 12 ಗುಂಟೆ ಜಮೀನು ಹಾಗೂ ಗುರುಮಠಕಲ್ ತಾಲೂಕಿನ ಧರ್ಮಪುರ ಗ್ರಾಮದ ಶಂಕ್ರಮ್ಮ ಅವರು, ತಮ್ಮ ನಾಲ್ವರು ಮಕ್ಕಳು ತಮ್ಮನ್ನು ಪೋಷಿಸದ ಕಾರಣಕ್ಕೆ 4 ಎಕರೆ ಜಮೀನನ್ನು ತಮಗೆ ಮರಳಿ ನೀಡುವಂತೆ ಉಪವಿಭಾಗಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಹೆತ್ತ ತಂದೆ-ತಾಯಿಯನ್ನು ಮಕ್ಕಳು ಪೋಷಿಸದ ಕಾರಣ ಪೋಷಕರಿಗೇ ಆಸ್ತಿ ವರ್ಗಾವಣೆ ಮಾಡಿದ ಪ್ರಕರಣ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. […]

Advertisement

Wordpress Social Share Plugin powered by Ultimatelysocial