ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ನಿತ್ಯಾನಂದನ ಸುಂದರಿಯರು!.

 

ಜಿನಿವಾ ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಪಾಶ್ಚಿಮಾತ್ಯ ರಾಷ್ಟ್ರಗಳ ಸಮ್ಮೇಳನವೊಂದರಲ್ಲಿ ಸ್ವಾಮಿ ನಿತ್ಯಾನಂದನ ಶಿಷ್ಯೆಯರು ಭಾಗವಹಿಸಿದ್ದಾರೆಂದು ಕೆಲವು ಮೂಲಗಳು ತಿಳಿಸಿವೆ. ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಲ್ಲಿಸುವ ಸಲುವಾಗಿ ಈ ಸಮ್ಮೇಳನವನ್ನು ಕರೆಯಲಾಗಿತ್ತು. ಅದರಲ್ಲಿ ಅಮೆರಿಕ, ಯುನೈಟೆಡ್ ಕಿಂಗ್ ಡಮ್, ಸ್ಲೊವೇನಿಯಾ, ಫ್ರಾನ್ಸ್ ಮುಂತಾದ ಕಡೆಗಳಲ್ಲಿ ನಿತ್ಯಾನಂದ ಆಶ್ರಮಗಳನ್ನು ನಡೆಸುತ್ತಿರುವ ಮಹಿಳೆಯರು ಭಾಗವಹಿಸಿದ್ದರೆಂದು 24-7 ಪ್ರೆಸ್ ರಿಲೀಸ್ ಎಂಬ ಆಂಗ್ಲ ಜಾಲತಾಣ ವರದಿ ಮಾಡಿದೆ.ವಿಶ್ವಸಂಸ್ಥೆಯ ಪ್ರಕಟಣೆಯೆಂದೇ ಪ್ರಕಟಿಸಲಾಗಿರುವ ಆ ವರದಿಯಲ್ಲಿ, ನಿತ್ಯಾನಂದನನ್ನು ಹಿಂದೂ ಧರ್ಮದ ಪರಮೋಚ್ಛ ಗುರು (ಸುಪ್ರೀಂ ಪಾಂಟಿಫ್ ಆಫ್ ಹಿಂದೂಯಿಸಂ – ಎಸ್ ಪಿಎಚ್) ಎಂದು ಹೇಳಲಾಗಿದೆ. ಜೊತೆಗೆ, ವಿಶ್ವಸಂಸ್ಥೆಯು ಫೆ. 23ರಂದು ಆಯೋಜಿಸಿದ್ದ, ವಿಶ್ವಸಂಸ್ಥೆಯ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಸಮಿತಿಯ 84ನೇ ಮಹಾಸಭೆಯಲ್ಲಿ ಪಾಲ್ಗೊಂಡಿದ್ದರೆಂದು ಹೇಳಲಾಗಿದೆ.ಈ ಮಹಾಸಭೆಯಲ್ಲಿ ವಿಶ್ವಸಂಸ್ಥೆಯಲ್ಲಿ ಕೈಲಾಸ ರಾಷ್ಟ್ರದ ಶಾಶ್ವತ ರಾಯಭಾರಿಯಾಗಿರುವ ಮಾತೆ ವಿಜಯಪ್ರಿಯ ನಿತ್ಯಾನಂದ, ಲಾಸ್ ಏಂಜಲೀಸ್ ನ ಕೈಲಾಸ ಶಾಖೆಯ ಮುಖ್ಯಸ್ಥೆಯಾದ ಮಾತೆ ಮುಕ್ತಿಕಾ ಆನಂದ, ಸೇಂಟ್ ಲೂಯಿಸ್ ನ ಕೈಲಾಸ ಶಾಖೆಯ ಮಾತೆ ಸೋನಾ ಕಾಮತ್, ಯುನೈಟೆಡ್ ಕಿಂಗ್ ಡಮ್ ನ ಕೈಲಾಸ ಶಾಖೆಯ ಮುಖ್ಯಸ್ಥೆ ಮಾತೆ ನಿತ್ಯ ಆತ್ಮದಾಯಕಿ, ಫ್ರಾನ್ಸ್ ನಲ್ಲಿರುವ ಕೈಲಾಸ ಶಾಖೆಯ ಮುಖ್ಯಸ್ಥೆ ಮಾತೆ ನಿತ್ಯ ವೆಂಕಟೇಶಾನಂದ ಹಾಗೂ ಸ್ಲೊವೇನಿಯ ಕೈಲಾಸ ಶಾಖೆಯ ಮುಖ್ಯಸ್ಥೆ ಮಾತೆ ಪ್ರಿಯಾ ಪ್ರೇಮ ಭಾಗವಹಿಸಿದ್ದರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಸೂರಿ ಲವ್ಸ್ ಸಂಧ್ಯಾ' ಸಿನಿಮಾದಲ್ಲಿ ಅಭಿಮನ್ಯು ಕಾಶೀನಾಥ್- ಅಪೂರ್ವ

Mon Feb 27 , 2023
ಕಿರಣ್ ಸೂರ್ಯ ನಿರ್ದೇಶನದ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ರಿಲೀಸ್ಗಾಗಿ ಕಾಯುತ್ತಿರುವ ಅಭಿಮನ್ಯು ಕಾಶಿನಾಥ್ ಈಗ ತಮ್ಮ ಮುಂದಿನ ಸಿನಿಮಾಗೆ ಸಹಿ ಹಾಕಿದ್ದಾರೆ. ಕಿರಣ್ ಸೂರ್ಯ ನಿರ್ದೇಶನದ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ರಿಲೀಸ್ಗಾಗಿ ಕಾಯುತ್ತಿರುವ ಅಭಿಮನ್ಯು ಕಾಶಿನಾಥ್ ಈಗ ತಮ್ಮ ಮುಂದಿನ ಸಿನಿಮಾಗೆ ಸಹಿ ಹಾಕಿದ್ದಾರೆ. ಸೂರಿ ಲವ್ಸ್ ಸಂಧ್ಯಾ ಎಂಬ ಟೈಟಲ್ ನ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯವನ್ನು ಚೊಚ್ಚಲ ನಿರ್ದೇಶಕ […]

Advertisement

Wordpress Social Share Plugin powered by Ultimatelysocial