ಮಲಗುವ ಮೊದಲು ವೈನ್‌ ಕುಡಿದ್ರೆ ಹೀಗೆಲ್ಲಾ ಆಗುತ್ತಾ?

ದ್ರಾಕ್ಷಾರಸ ಅಥವಾ ವೈನ್‌ ಅನಾದಿ ಕಾಲದಿಂದಲೂ ಜನರಿಗೆ ಪ್ರೀಯವಾದ ಪಾನಿಯ ಅಂದ್ರೆ ತಪ್ಪಾಗೋದಿಲ್ಲ. ವೈನ್‌ ಕೇವಲ ಮನೋರಂಜನಾ ಉದ್ದೇಶದಿಂದ ಮಾತ್ರ ಕುಡಿಯೋದಲ್ಲ. ಇದರಿಂದ ಅನೇಕ ರೀತಿಯ ಆರೋಗ್ಯಕರ ಲಾಭಗಳು ಕೂಡ ಇದೆ.ನಮೆಗೆಲ್ಲಾ ಗೊತ್ತಿರುವ ಹಾಗೆ ದ್ರಾಕ್ಷಿಯನ್ನು ಹುದುಗಿಸಿ ವೈನ್‌ ತಯಾರಿಸಲಾಗುತ್ತದೆ.ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳು ಕೂಡ ಇದೆ. ಆದ್ರೆ ಮಲಗುವ ಮೊದಲು ವೈನ್‌ ಕುಡಿಯುವ ಅಭ್ಯಾಸ ಒಳ್ಳೆಯದಾ? ಅಷ್ಟಕ್ಕೂ ರಾತ್ರಿ ಮಲಗುವ ಮೊದಲು ಎರಡು ಲೋಟ ವೈನ್‌ ಕುಡಿದ್ರೆ ಏನಾಗುತ್ತೆ ಗೊತ್ತಾ? ಇದರಿಂದ ಏನಾದ್ರು ಅಡ್ಡ ಪರಿಣಾಮಗಳಾಗುತ್ತಾ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಅನ್ನೋದನ್ನ ತಿಳ್ಕೊಳ್ಳೋಣ.ರಾತ್ರಿ ವೈನ್‌ ಕುಡಿದ್ರೆ ನಿದ್ದೆ ಚೆನ್ನಾಗಿ ಬರುತ್ತಾ?ಅನೇಕರಲ್ಲಿ ಒಂದು ತಪ್ಪು ಕಲ್ಪನೆ ಇದೆ. ಅದೇನೆಂದರೆ ರಾತ್ರಿ ಮಲಗುವ ಮೊದಲು ಒಂದು ಅಥವಾ ಎರಡು ಲೋಟ ವೈನ್‌ ಕುಡಿದ್ರೆ ಒತ್ತಡ ಕಡಿಮೆಯಾಗುತ್ತೆ ಮತ್ತು ಹಾಯಾಗಿ ನಿದ್ದೆ ಮಾಡಬಹುದು ಅಂದುಕೊಂಡಿರ್ತಾರೆ. ಆದರೆ ತಜ್ಞರು ಮತ್ತು ಸಂಶೋದಕರು ಹೇಳುವ ಪ್ರಕಾರ ಇದು ಸುಳ್ಳು.ಹೌದು, ಅನೇಕರು ಚೆನ್ನಾಗಿ ನಿದ್ದೆ ಬರುತ್ತೆ ಅಂತ ದ್ರಾಕ್ಷಾರಸವನ್ನು ಕುಡಿಯುತ್ತಾರೆ. ಆದ್ರೆ ವೈನ್‌ ಕುಡಿದ್ರೆ ನಿದ್ರೆಯ ಹೋಮಿಯೋಸ್ಟಾಸಿಸ್‌ಗೆ (homeostasis) ಅಡ್ಡಿಪಡಿಸುತ್ತಂತೆ. ವೈನ್‌ನಲ್ಲಿ ನಿದ್ರೆ ಮತ್ತು ಎಚ್ಚರವನ್ನು ನಿಯಂತ್ರಿಸುವ ಗುಣ ಇದೆಯಂತೆ. ಹಾಗಾಗಿ ವೈನ್‌ ಕುಡಿದರೆ ಹಾಯಾಗಿ ನಿದ್ದೆ ಬರುತ್ತೆ ಅನ್ನುವ ನಿಮ್ಮ ಕಲ್ಪನೆ ತಪ್ಪು.ರಾತ್ರಿ ಮಲಗುವ ಮೊದಲು ಎರಡು ಲೋಟ ವೈನ್‌ ಕುಡಿದರೆ ಏನಾಗುತ್ತೆ?ನಿವೇನಾದರೂ ಒಂದು ಲೋಟ ವೈನ್‌ ಕುಡಿದರೆ ಅದು ನಿಮ್ಮ ನಿದ್ರೆ ಮತ್ತು ಜಾಗರೂಕತೆಯನ್ನು ನಿಯಂತ್ರಿಸುವ ಕಾರ್ಯವಿಧಾನದ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿಯೊಬ್ಬ ಬೇಗನೆ ನಿದ್ರೆಗೆ ಜಾರಿದರೆ ನಿದ್ರೆಯ ಹೋಮಿಯೋಸ್ಟಾಸಿಸ್ ಹಾರ್ಮೋನು ಜಾಗೃತಗೊಳ್ಳುತ್ತದೆ. ಇದರಿಂದಾಗಿ ಆತ ಮಧ್ಯರಾತ್ರಿ ಅಥವಾ ಮುಂಜಾನೆ ಎಚ್ಚರಗೊಳ್ಳುವ ಸಾಧ್ಯತೆ ಹೆಚ್ಚು. ವೈನ್‌ ಕುಡಿದ ವ್ಯಕ್ತಿಗೆ ನಿದ್ರಿಸಲು ಒತ್ತಡ ಹೇರುತ್ತದೆ.ವೈನ್‌ ಸೇವಿಸುವುದರಿಂದ ದೇಹದಿಂದ ಆಗಾಗ್ಗೆ ಮೂತ್ರ ಹೊರಹಾಕುತ್ತಲೇ ಇರಬೇಕು. ಈ ವೇಳೆ ವ್ಯಕ್ತಿಯ ನಿದ್ರಿಸುವ ದಿನನಿತ್ಯದ ವಿಧಾನಕ್ಕೆ ಅಡ್ಡಿಯುಂಟಾಗುತ್ತದೆ. ಸಂಶೋಧನೆಯ ಪ್ರಕಾರ ವೈನ್‌ ಕುಡಿದ್ರೆ ಆದಷ್ಟು ಬೇಗ ನಿದ್ದೆಗೆ ಜಾರಬಹುದು ಅನ್ನೋದು ಎಷ್ಟು ಸತ್ಯವೋ ಇದರ ಪರಿಣಾಮ ಮಧ್ಯರಾತ್ರಿ ಅಥವಾ ಬೆಳ್ಳಂಬೆಳಗ್ಗೆ ಎಚ್ಚರವಾಗುತ್ತದೆ. ಇದಾದ ಬಳಿಕ ಮತ್ತೆ ನಿದ್ರೆಗೆ ಜಾರುವುದು ತುಂಬಾನೇ ಕಷ್ಟ. ಇನ್ನೊಂದು ವಿಚಾರ ಅಂದ್ರೆ ದಿನನಿತ್ಯ ಮಲಗುವ ಮೊದಲು ವೈನ್‌ ಕುಡಿಯುವವರು ಒಂದು ಪಕ್ಷ ವೈನ್‌ ಕುಡಿಯುವುದನ್ನು ಬಿಟ್ಟರೆ ನಿದ್ರಾಹೀನತೆಯಂತ ಸಮಸ್ಯೆಯನ್ನು ಅನುಭವಿಸಬೇಕಾಗುತ್ತಂತೆ.ವೈನ್‌ ಬದಲಾಗಿ ಬೇರೆ ಏನನ್ನು ಸೇವಿಸಿದರೆ ಚೆನ್ನಾಗಿ ನಿದ್ದೆ ಬರುತ್ತದೆವೈನ್‌ ಸೇವಿಸದರೆ ನಿದ್ದೆ ಬರುತ್ತದೆ ನಿಜ. ಆದರೆ ಅದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಖಂಡಿತ ಒಳ್ಳೆಯದಲ್ಲ. ನಿಮ್ಮನ್ನು ಒತ್ತಾಯ ಪೂರ್ವಕವಾಗಿ ಮಲಗಲು ಪ್ರೇರೆಪಿಸುತ್ತದೆ. ಒಂದು ವೇಳೆ ನಿಮಗೆ ರಾತ್ರಿ ವೇಳೆ ನಿದ್ದೆ ಬರುವುದಿಲ್ಲ ಅಂತಾದರೆ ಖಂಡಿತ ನೀವು ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆದುಕೊಳ್ಳಿ.ಸುಖನಿದ್ದೆಗೆ ಈ ಟಿಪ್ಸ್‌ನ ಪಾಲೋ ಮಾಡಿ ವಾಲ್‌ನಟ್‌ ನಿದ್ರಾಹೀನತೆಗೆ ಸಹಾಯ ಮಾಡುತ್ತದೆ. ಏಕೆಂದರೆ ಇದು ಪ್ರೋಟಿನ್‌ ಮತ್ತು ಪೊಟ್ಯಾಷಿಯಂ ಅನ್ನು ಒಳಗೊಂಡಿರುತ್ತದೆ. ಮತ್ತು ನೈಸರ್ಗಿಕವಾಗಿ ನಿದ್ರಿಸಲು ಸಹಕರಿಸುತ್ತದೆ.* ಸಂಜೆ ಸಲಾಡ್‌ ಸೇವಿಸುವುದರಿಂದ ನಿಮ್ಮ ಮೆದುಳಿಗೆ ವಿಶ್ರಾಂತಿ ನೀಡಲು ನೆರವಾಗುತ್ತದೆ* ಸರಿಯಾಗಿ ನಿದ್ದೆ ಮಾಡಲು ನಮ್ಮ ದೇಹಕ್ಕೆ ವಿಟಮಿನ್‌ ಬಿ6 ನ ಅಗತ್ಯವಿದೆ. ಇದು ಮೆಲಟೋನಿನ್‌ ಮತ್ತು ಸೆರಟೋನಿನ್‌ ಅನ್ನು ಬಿಡುಗಡೆಗೊಳಿಸುತ್ತದೆ. ಬಾಳೆಹಣ್ಣು ಮತ್ತು ಬಿಸಿಯಾದ ಹಾಲು ಕುಡಿಯುವುದರಿಂದ ದೇಹವು ವಿಶ್ರಾಂತಿದಾಯಕವಾಗಿ ನಿದ್ರಿಸಲು ಸಹಕರಿಸುತ್ತದೆ.* ಬ್ರೆಡ್‌, ಪಾಸ್ತಾದಂತಹ ಆಹಾರಗಳು ಕೂಡ ನಿದ್ರಿಸಲು ಸಹಕರಿಸುತ್ತದೆ. ಇದನ್ನು ಸೇವಿಸಿದ ಮೇಲೆ ರಕ್ತದಲ್ಲಿನ ಸಕ್ಕರೆ ಹಾಗೂ ಇನ್ಸುಲಿನ್‌ ಮಟ್ಟ ಹೆಚ್ಚಾಗುತ್ತದೆ. ಮತ್ತು ಇದು ನಮ್ಮನ್ನು ದಣಿಯುವಂತೆ ಮಾಡುತ್ತದೆ. ಸರಿಯಾದ ನಿದ್ರಾಕ್ರಮ ನಿಮ್ಮದಾಗಬೇಕೆಂದರೆ ನೀವು ನಿದ್ರೆಗೆ ಜಾರುವ ಒಂದು ಗಂಟೆಯ ಮೊದಲು ಟಿವಿ, ಕಂಪ್ಯೂಟರ್‌, ಮೊಬೈಲ್‌ ಅನ್ನು ದೂರವಿಡಬೇಕು. ಇದರಿಂದ ಪ್ರತಿನಿತ್ಯ ಆರೋಗ್ಯಕರ ನಿದ್ದೆ ನಿಮ್ಮದಾಗುತ್ತದೆ.* ವ್ಯಾಯಾಮ ಮತ್ತು ಯೋಗ ಪ್ರತಿನಿತ್ಯ ಮಾಡುವುದರಿಂದ ಕೂಡ ಆರೋಗ್ಯಕರವಾಗಿ ನಿದ್ರಿಸಬಹುದು.* ಬಿಸಿ ನೀರಿನಿಂದ ಸ್ನಾನ ಮಡುವುದರಿಂದ ನಮ್ಮ ದೇಹದ ಉಷ್ಣತೆ ಕಡಿಮೆಯಾಗಿ ಆದಷ್ಟು ಬೇಗ ನಮ್ಮನ್ನು ನಿದ್ರೆಗೆ ತಳ್ಳುತ್ತದೆ.ಕೊನೆಯದಾಗಿ ಏನೆಂದರೆ ಪ್ರತಿನಿತ್ಯ ಮಲಗುವ ಮೊದಲು ವೈನ್‌ ಕುಡಿಯುವುದು ಖಂಡಿತ ಆರೋಗ್ಯಕರ ಅಭ್ಯಾಸವಲ್ಲ. ಇದು ನಿಮ್ಮನ್ನು ಮಧ್ಯವ್ಯಸನಿಗಳನ್ನಾಗಿ ಮಾಡಬಹುದು. ಅಷ್ಟೇ ಅಲ್ಲ, ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ಇದರಿಂದಾಗಿ ಆರೋಗ್ಯದ ಸಮಸ್ಯೆಯೂ ಎದುರಾಗಬಹುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ನಿತ್ಯಾನಂದನ ಸುಂದರಿಯರು!.

Mon Feb 27 , 2023
  ಜಿನಿವಾ ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಪಾಶ್ಚಿಮಾತ್ಯ ರಾಷ್ಟ್ರಗಳ ಸಮ್ಮೇಳನವೊಂದರಲ್ಲಿ ಸ್ವಾಮಿ ನಿತ್ಯಾನಂದನ ಶಿಷ್ಯೆಯರು ಭಾಗವಹಿಸಿದ್ದಾರೆಂದು ಕೆಲವು ಮೂಲಗಳು ತಿಳಿಸಿವೆ. ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಲ್ಲಿಸುವ ಸಲುವಾಗಿ ಈ ಸಮ್ಮೇಳನವನ್ನು ಕರೆಯಲಾಗಿತ್ತು. ಅದರಲ್ಲಿ ಅಮೆರಿಕ, ಯುನೈಟೆಡ್ ಕಿಂಗ್ ಡಮ್, ಸ್ಲೊವೇನಿಯಾ, ಫ್ರಾನ್ಸ್ ಮುಂತಾದ ಕಡೆಗಳಲ್ಲಿ ನಿತ್ಯಾನಂದ ಆಶ್ರಮಗಳನ್ನು ನಡೆಸುತ್ತಿರುವ ಮಹಿಳೆಯರು ಭಾಗವಹಿಸಿದ್ದರೆಂದು 24-7 ಪ್ರೆಸ್ ರಿಲೀಸ್ ಎಂಬ ಆಂಗ್ಲ ಜಾಲತಾಣ ವರದಿ ಮಾಡಿದೆ.ವಿಶ್ವಸಂಸ್ಥೆಯ ಪ್ರಕಟಣೆಯೆಂದೇ ಪ್ರಕಟಿಸಲಾಗಿರುವ […]

Advertisement

Wordpress Social Share Plugin powered by Ultimatelysocial