ಯಾರು ಕಾನೂನನ್ನು ಗೌರವಿಸುವುದಿಲ್ಲವೋ ಅವರಿಗೆ ಕಾನೂನಿನ ರುಚಿ ತೋರಿಸಿ..!

ದೇಶಾದ್ಯಂತ ಕೊರೋನಾ ಹಬ್ಬಿಸುವ ದುಷ್ಕೃತ್ಯ ನಡೆದಿದ್ದು, ಇದರ ಹಿಂದೆ ಜೆಹಾದಿ ವಾಸನೆ ಕಂಡುಬರುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು. ಚಿಕ್ಕಮಗಳೂರನಲ್ಲಿ ಮಾತನಾಡಿದ ಅವರು, ದೆಹಲಿ ಸಮಾವೇಶದಲ್ಲಿ ಭಾಗ ವಹಿಸಿದ್ದವರನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಬೆಂಗಳೂರಿನ ಸಾದಿಕ್ ನಗರದ ಕೋವಿಡ್ 19 ಪೀಡಿತರ ಮಾಹಿತಿ ಕಲೆ ಹಾಕಲು ಆಶಾ ಕಾರ್ಯಕರ್ತೆ ಹೋದ ಸಂದರ್ಭ ಅವರ ಮೇಲೆ ಹಲ್ಲೆ ನಡೆದಿರುವುದು ಒಂದು ಸಮುದಾಯ ಕೊರೊನಾ ತಡೆಗೆ ಸಹಕಾರ ನೀಡುತ್ತಿಲ್ಲ ಎಂಬುದನ್ನು ಸಾಬೀತು ಮಾಡಿದೆ. ಯಾರು ಈ ನೆಲದ ಕಾನೂನನ್ನು ಗೌರವಿಸುವುದಿಲ್ಲವೋ ಅವರಿಗೆ ಮುಂದಿನ ದಿನಗಳಲ್ಲಿ ಕಾನೂನಿನ ರುಚಿ ತೋರಿಸಬೇಕಾಗುತ್ತದೆ. ನಮ್ಮ ನೆಲದ ಕಾನೂನು ಪಾಲನೆ ಮಾಡುವುದಿಲ್ಲ ಎಂದರೆ ಅದರ ಹಿಂದೆ ಯಾವುದೋ ಷಡ್ಯಂತ್ರ ನಡೆಯುತ್ತಿದೆ ಎಂದು ಅರ್ಥ. ಯಾರು ಕೋವಿಡ್ 19 ಸೋಂಕು ಇನ್ನೊಬ್ಬರಿಗೆ ಹಬ್ಬಿಸುತ್ತಿದ್ದಾರೋ ಅವರನ್ನು ಪತ್ತೆ ಮಾಡಿ ಸರಕಾರ ಉಗ್ರ ಶಿಕ್ಷೆಗೆ ಗುರಿಪಡಿಸುತ್ತದೆ ಎಂದು ಹೇಳಿದರು.

 

ವರದಿ: ಪೊಲಿಟಿಕಲ್ ಬ್ಯೂರೊ ಸ್ಪೀಡ್ ನ್ಯೂಸ್ ಕನ್ನಡ

Please follow and like us:

Leave a Reply

Your email address will not be published. Required fields are marked *

Next Post

ಜಾತಿ, ಮತ ಧರ್ಮ ಬದಿಗಿಟ್ಟು ಕರೋನಾ ವಿರುದ್ಧ ನಿಲ್ಲಬೇಕು

Sun Apr 5 , 2020
ಜನತೆಯು ಜಾತಿ, ಮತ ಧರ್ಮವನ್ನು ಬದಿಗಿಟ್ಟು ಕೋವಿಡ್-19 ವೈರಸ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕೆಂದು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ,ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆಯಂತೆ ರವಿವಾರ ರಾತ್ರಿ 9 ಗಂಟೆಗೆ ದೀಪವನ್ನು ಬೆಳಗಿಸಬೇಕು. ನಮ್ಮ ರಾಜ್ಯದ ಕೆಲವು ಜನರು ದೆಹಲಿಯಲ್ಲಿ ಧಾರ್ಮಿಕ ಸಮಾವೇಶಕ್ಕೆ ತೆರಳಿದ್ದರು. ಆ ಸಮಾವೇಶದಲ್ಲಿ ವಿದೇಶ ರಾಷ್ಟ್ರದಿಂದಲೂ ಸದಸ್ಯರು ಬಂದಿದ್ದರು. ಕೆಲವರು ವೈರಸ್ ಸೋಂಕಿಗೆ ಒಳಗಾಗಿದ್ದು, ಅಲ್ಲಿಂದ ವೈರಸ್ ಹರಡಿದೆ. ಆದರೆ, ವೈರಸ್ ಹರಡುವಿಕೆಗೆ ಒಂದು […]
jagn mohan reddy

Advertisement

Wordpress Social Share Plugin powered by Ultimatelysocial