ಜಾತಿ, ಮತ ಧರ್ಮ ಬದಿಗಿಟ್ಟು ಕರೋನಾ ವಿರುದ್ಧ ನಿಲ್ಲಬೇಕು

ಜನತೆಯು ಜಾತಿ, ಮತ ಧರ್ಮವನ್ನು ಬದಿಗಿಟ್ಟು ಕೋವಿಡ್-19 ವೈರಸ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕೆಂದು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ,ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆಯಂತೆ ರವಿವಾರ ರಾತ್ರಿ 9 ಗಂಟೆಗೆ ದೀಪವನ್ನು ಬೆಳಗಿಸಬೇಕು. ನಮ್ಮ ರಾಜ್ಯದ ಕೆಲವು ಜನರು ದೆಹಲಿಯಲ್ಲಿ ಧಾರ್ಮಿಕ ಸಮಾವೇಶಕ್ಕೆ ತೆರಳಿದ್ದರು. ಆ ಸಮಾವೇಶದಲ್ಲಿ ವಿದೇಶ ರಾಷ್ಟ್ರದಿಂದಲೂ ಸದಸ್ಯರು ಬಂದಿದ್ದರು. ಕೆಲವರು ವೈರಸ್ ಸೋಂಕಿಗೆ ಒಳಗಾಗಿದ್ದು, ಅಲ್ಲಿಂದ ವೈರಸ್ ಹರಡಿದೆ. ಆದರೆ, ವೈರಸ್ ಹರಡುವಿಕೆಗೆ ಒಂದು ನಿರ್ದಿಷ್ಟ ಸಮುದಾಯವನ್ನು ಹೊಣೆಯಾಗಿಸುವುದಕ್ಕೆ ಯಾವುದೇ ಕಾರಣವಿಲ್ಲ. ದೆಹಲಿಯಲ್ಲಿ ದುರದೃಷ್ಟಕರ ಘಟನೆಯೊಂದು ನಡೆದುಹೋಗಿದೆ. ಇದು ಎಲ್ಲಿ ನಡೆಯಬಾರದು. ಉದ್ದೇಶಪೂರ್ವಕವಾಗಿ ವೈರಸ್ ಹರಡದೇ ಇರುವ ಕಾರಣ ಬೇಧಭಾವ ಮಾಡುವುದಕ್ಕೂ ಯಾವುದೇ ಕಾರಣವಿಲ್ಲ ಎಂದು ಹೇಳಿದರು.

ವರದಿ: ಪೊಲಿಟಿಕಲ್ ಬ್ಯೂರೊ ಸ್ಪೀಡ್ ನ್ಯೂಸ್ ಕನ್ನಡ

Please follow and like us:

Leave a Reply

Your email address will not be published. Required fields are marked *

Next Post

ರೂಲ್ಸ್ ಪಾಲಿಸಬೇಕಾದ ಸಚಿವರೇ ರೂಲ್ಸ್ ಗಳನ್ನ ಮರೆತ್ತಿದ್ದಾರೆ

Sun Apr 5 , 2020
ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣಕ್ಕೆ ಇಂದು ಆರೋಗ್ಯ ಸಚಿವ ಶ್ರೀರಾಮುಲು ಭೇಟಿ ನೀಡಿ ಕೊರೊನಾ ತಡೆಗೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ, ಸಾರ್ವಜನಿಕರಿಗೆ ಮಾಸ್ಕ್ ವಿತರಿಸಲಾಯಿತು. ಈ ಸಂದರ್ಭ ಆರೋಗ್ಯ ಸಚಿವರು ಸಾಮಾಜಿಕ ಅಂತರದ ನಿಯಮವನ್ನು ಗಾಳಿಗೆ ತೂರಿದರು. ತಾವು ಮಾಸ್ಕ್ ಧರಿಸದೇ, ಸ್ಯಾನಿಟೈಸರ್ ಬಳಸದೇ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿದರು. ಈ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಸಚಿವರೇ ನಿಯಮ ಉಲ್ಲಂಘಿಸಿದ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ […]
shri ramul

Advertisement

Wordpress Social Share Plugin powered by Ultimatelysocial