ಫಟಾ ಫಟ್ ಅಂತ ಬೂದುಗುಂಬಳಕಾಯಿ ಹಲ್ವಾ ಮಾಡಬಹುದು.

ರುಚಿಯಾದ ಹಾಗೂ ಸಿಹಿಯಾದನ್ನು ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ.ಹೀಗಾಗಿ ನೀವು ಇಂದು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಅಂತ ಮಾಡಬಹುದು. ಕುಂಬಳಕಾಯಿ ಎಂದು ಮೂಗು ಮುರಿಯುವಂತಹ ಎಲ್ಲರಿಗೂ ಈ ಸಿಹಿಯಾದ ಬೂದುಕುಂಬಳಕಾಯಿ ಹಲ್ವಾ ಇಷ್ಟವಾಗುತ್ತದೆ.ಬೇಕಾಗುವ ಸಾಮಗ್ರಿಗಳು ಬೂದು ಕುಂಬಳಕಾಯಿ- 2 ಕಪ್ ತುಪ್ಪ- ಅರ್ಧ ಕಪ್ ಸಕ್ಕರೆ- 3 ಕಪ್ ಒಣ ದ್ರಾಕ್ಷಿ, ಗೋಡಂಬಿ- ಸ್ವಲ್ಪ ಏಲಕ್ಕಿ -2 ಹಾಲು- ಅರ್ಧ ಕಪ್ ಕೇಸರಿ- ಸ್ವಲ್ಪ
ಮಾಡುವ ವಿಧಾನ ಕೆಸರಿಯ ದಳಗಳನ್ನು ಹಾಲಿನಲ್ಲಿ ಸೇರಿಸಿ ಮತ್ತು ಸ್ವಲ್ಪ ಹೊತ್ತು ಅದನ್ನು ಹಾಲಿನಲ್ಲಿ ನೆನೆಯಲು ಬಿಡಿ. ಬೂದಗುಂಬಳ ಕಾಯಿಯನ್ನು ಕತ್ತರಿಸಿ ತುರಿದುಕೊಳ್ಳಿ.
ಒಂದು ಬಾಣಲೆಗೆ ತುರಿದ ಬೂದುಗುಂಬಳ ಕಾಯಿಯನ್ನು ಸೇರಿಸಿ, ಬೂದಗುಂಬಳಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶ ಇರುತ್ತದೆ. ಆ ನೀರು ಒಣಗುವವರೆಗೂ ಅದನ್ನು ಚೆನ್ನಾಗಿ ಹುರಿಯಿರಿ. ತದನಂತರದಲ್ಲಿ ಇದಕ್ಕೆ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇನ್ನು ಬಾಣಲೆಗೆ ಕೇಸರಿ ಮಿಶ್ರಿತ ಹಾಲನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ತುಪ್ಪ, ಗೋಡಂಬಿ, ದ್ರಾಕ್ಷಿ ಸೇರಿಸಿ. ಇವುಗಳನ್ನು ಕಂದುಬಣ್ಣ ಆಗುವವರೆಗೂ ಹುರಿಯಿರಿ. ನಂತರದಲ್ಲಿ ಅದನ್ನು ಹಲ್ವಾಕ್ಕೆ ಹಾಕಿ ಮಿಶ್ರಣ ಮಾಡಿ. ಈಗ ಇನ್ನೂ ಸ್ವಲ್ಪ ತುಪ್ಪ ಜೊತೆಗೆ ಏಲಕ್ಕಿ ಪುಡಿಯನ್ನು ಸೇರಿಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿದರೆ ಹಲ್ವಾ ಸವಿಯಲು ಸಿದ್ಧವಾಗುತ್ತದೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವ್ಯಾಪಕವಾಗಿ ಬಳಸಲಾಗುವ ಹಾರ್ಮೋನ್ ಔಷಧವು ಹೆಚ್ಚಿನ ಪ್ರಮಾಣದಲ್ಲಿ ಹಾನಿಕರವಲ್ಲದ ಮೆದುಳಿನ ಗೆಡ್ಡೆಯ ;

Sat Feb 5 , 2022
ಅತಿಯಾದ ಕೂದಲು ಬೆಳವಣಿಗೆ, ಆರಂಭಿಕ ಪ್ರೌಢಾವಸ್ಥೆ, ಪ್ರಾಸ್ಟೇಟ್ ಕ್ಯಾನ್ಸರ್ನಂತಹ ಪರಿಸ್ಥಿತಿಗಳ ಹಾರ್ಮೋನ್ ಚಿಕಿತ್ಸೆಯಲ್ಲಿ ವ್ಯಾಪಕವಾಗಿ ಬಳಸಲಾಗುವ ಔಷಧದ ಹೆಚ್ಚಿನ ಪ್ರಮಾಣಗಳು ಮೆನಿಂಜಿಯೋಮಾದ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಇತ್ತೀಚಿನ ಅಧ್ಯಯನವು ಕಂಡುಹಿಡಿದಿದೆ — ಸಾಮಾನ್ಯ ರೀತಿಯ ಹಾನಿಕರವಲ್ಲದ ಮೆದುಳಿನ ಗೆಡ್ಡೆ. . ಸಂಶೋಧನೆಯನ್ನು ‘ವೈಜ್ಞಾನಿಕ ವರದಿಗಳ ಜರ್ನಲ್’ನಲ್ಲಿ ಪ್ರಕಟಿಸಲಾಗಿದೆ. ವಿಶಿಷ್ಟವಾಗಿ ನಿಧಾನವಾಗಿ-ಬೆಳೆಯುವ, ಮೆನಿಂಜಿಯೋಮಾಗಳು ಹಾನಿಕರವಲ್ಲದ ಗೆಡ್ಡೆಗಳಾಗಿವೆ, ಅವು ಸಾಮಾನ್ಯವಾಗಿ ಚಿತ್ರಣದಿಂದ ಪ್ರಾಸಂಗಿಕವಾಗಿ ಬಹಿರಂಗಗೊಳ್ಳುತ್ತವೆ ಆದರೆ ಪಕ್ಕದ ಮೆದುಳು, ನರಗಳು ಮತ್ತು ನಾಳಗಳನ್ನು […]

Advertisement

Wordpress Social Share Plugin powered by Ultimatelysocial