ಚಾಲಕನೊಂದಿಗೆ ಪ್ರೇಮಾ ಮದುವೆಯಾದ 6 ವರ್ಷದ ಬಳಿಕ ಮಹಿಳೆ.

ಚಾಮರಾಜನಗರ ತಾಲೂಕಿನ ಗ್ರಾಮವೊಂದರ ದೀಪಾ ಎಂಬುವವರಿಗೆ ಮದುವೆಯಾಗಿ 6 ವರ್ಷಗಳಾಗಿದ್ದು, 5 ವರ್ಷದ ಒಬ್ಬಳು ಮಗಳಿದ್ದಾಳೆ. ಆದರೆ, ಕಳೆದ 7- 8 ತಿಂಗಳುಗಳ ಹಿಂದೆ ಆಟೋ ಚಾಲಕನೊಬ್ಬನ ಪರಿಚಯವಾಗಿತ್ತು. ಆ ಪರಿಚಯ ಈಗ ಪ್ರೇಮಕ್ಕೆ ತಿರುಗಿದ್ದು, ಲಿವಿಂಗ್ ಟುಗೆದರ್ ನಲ್ಲಿ ಜೀವಿಸುವ ಹಂಬಲ ಮಹಿಳೆಯದ್ದಾಗಿದೆ.ಚಾಮರಾಜನಗರ: ಮದುವೆಯಾದ 6 ವರ್ಷದ ಬಳಿಕ ಬೇರೊಬ್ಬನೊಂದಿಗೆ ಪ್ರೇಮಾಂಕುರವಾಗಿ ಪತಿ ಹಾಗೂ ಮಗುವನ್ನು ಬಿಟ್ಟು ತೆರಳಿರುವ ಘಟನೆ ಚಾಮರಾಜನಗರ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಗ್ರಾಮವೊಂದರ ದೀಪಾ (ಹೆಸರು ಬದಲಿಸಲಾಗಿದೆ) ಎಂಬುವವರಿಗೆ ಮದುವೆಯಾಗಿ 6 ವರ್ಷಗಳಾಗಿದ್ದು, 5 ವರ್ಷದ ಒಬ್ಬಳು ಮಗಳಿದ್ದಾಳೆ. ಆದರೆ, ಕಳೆದ 7-8 ತಿಂಗಳುಗಳ ಹಿಂದೆ ಆಟೋ ಚಾಲಕನೊಬ್ಬ ಪರಿಚಯವಾಗಿತ್ತು. ಆ ಪರಿಚಯ ಈಗ ಪ್ರೇಮಕ್ಕೆ ತಿರುಗಿದ್ದು, ಈಗ ಸಂಸಾರವನ್ನೇ ಬಿಡುವಷ್ಟರ ಮಟ್ಟಿಗೆ ಅವರಿಬ್ಬರ ಬಾಂಧವ್ಯ ಗಟ್ಟಿಯಾಗಿದೆ.ಪತಿ ಬೇಡ..ಲಿವಿಂಗ್ ಟುಗೆದರ್​​ನಲ್ಲಿ ಇರಬಲ್ಲೆಆಟೋ ಚಾಲಕನ ಸ್ನೇಹ ಗಟ್ಟಿಯಾದ ಹಿನ್ನೆಲೆ ಈಕೆ ಕಳೆದ 6 ತಿಂಗಳ ಹಿಂದೆ ಮನೆ ಬಿಟ್ಟು ಪರಾರಿಯಾಗಿದ್ದರು. ಈ ಸಂಬಂಧ ಮಹಿಳಾ ಠಾಣೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ನಾಪತ್ತೆಯಾಗಿದ್ದ ಮಹಿಳೆಯನ್ನು ಮೈಸೂರಿನ ಬೆಳವಾಡಿಯಲ್ಲಿ ಪತ್ತೆ ಹಚ್ಚಿ ಕರೆತಂದಿದ್ದಾರೆ. ಆದರೆ ಮಹಿಳೆ, ಪತಿಯೊಂದಿಗೆ ತನಗೆ ಬಾಳಲು ಇಷ್ಟವಿಲ್ಲ. ಆಟೋ ಚಾಲಕನೊಂದಿಗೆ ಲಿವಿಂಗ್ ಟುಗೆದರ್ ನಲ್ಲಿದ್ದು ಆತನನ್ನೇ ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾಳೆ ಎನ್ನಲಾಗ್ತಿದೆ.ದೀಪಾಳ ಈ ನಿಲುವಿಗೆ ಪತಿ – ಮಗು ಕಂಗಲಾಗಿದ್ದಾರೆ‌. ಮಹಿಳಾ ಠಾಣೆ ಪೊಲೀಸರು ಸಾಕಷ್ಟು ಕೌನ್ಸೆಲಿಂಗ್ ನಡೆಸಿದರೂ ಮಹಿಳೆ ಒಪ್ಪಿಲ್ಲ. ಪ್ರಕರಣ ಸುಖಾಂತ್ಯ ನಿರೀಕ್ಷೆಯಲ್ಲಿ ಪತಿ ಇದ್ದರೆ, ಲಿವಿಂಗ್ ಟುಗೆದರ್ ನಲ್ಲಿ ಜೀವಿಸುವ ಹಂಬಲ ಮಹಿಳೆಯದ್ದಾಗಿದೆ. ಸದ್ಯ,ಈ ಪ್ರಕರಣ ಮಹಿಳಾ ಠಾಣೆಯಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಅಕ್ಷಯ್ ಕುಮಾರ್ ಅಭಿನಯದ ಬಚ್ಚನ್ ಪಾಂಡೆಯ ಟ್ರೈಲರ್ ಫೆಬ್ರವರಿ 18 ರಂದು ಹೊರಡಲಿದೆಯೇ?

Mon Jan 31 , 2022
ಅಕ್ಷಯ್ ಕುಮಾರ್ ಅಭಿನಯದ ಬಚ್ಚನ್ ಪಾಂಡೆಯ ಟ್ರೈಲರ್ ಫೆಬ್ರವರಿ 18 ರಂದು ಹೊರಡಲಿದೆಯೇ? ಅಕ್ಷಯ್ ಕುಮಾರ್ ಅಭಿನಯದ ಬಚ್ಚನ್ ಪಾಂಡೆ ಸೂಪರ್ ಸ್ಟಾರ್ ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಈಗ ಅದೇ ಸುತ್ತಲಿನ ಇತ್ತೀಚಿನ ಬೆಳವಣಿಗೆಯು ಖಂಡಿತವಾಗಿಯೂ ನಟನ ಅಭಿಮಾನಿಗಳನ್ನು ಉತ್ಸುಕರನ್ನಾಗಿಸುತ್ತದೆ. ಬಚ್ಚನ್ ಪಾಂಡೆ ಅವರ ಟ್ರೈಲರ್ ಫೆಬ್ರವರಿ 18, 2022 ರಂದು ಬಿಡುಗಡೆಯಾಗಲಿದೆ ಎಂಬುದು ಇತ್ತೀಚಿನ ಸುದ್ದಿ. ಮಾರ್ಚ್ 18, 2022 ರಂದು ಚಿತ್ರದ […]

Advertisement

Wordpress Social Share Plugin powered by Ultimatelysocial