ನಟಿ ಸಂಯುಕ್ತಾ ಹೆಗ್ಡೆಗೆ, ಸಿನಿಮಾ ಚಿತ್ರೀಕರಣದ ವೇಳೆ ಭಾರಿ ಪೆಟ್ಟಾಗಿದೆ.

 

ಸ್ಯಾಂಡಲ್‌ವುಡ್‌ಗೆ `ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಿತರಾದ ನಟಿ ಸಂಯುಕ್ತಾ ಹೆಗ್ಡೆಗೆ, ಸಿನಿಮಾ ಚಿತ್ರೀಕರಣದ ವೇಳೆ ಭಾರಿ ಪೆಟ್ಟಾಗಿದೆ. ಫೈಟಿಂಗ್ ಸೀಕ್ವೆನ್ಸ್ ಮಾಡುವ ಸಂದರ್ಭದಲ್ಲಿ ನಟಿ ಸಂಯುಕ್ತಾಗೆ ಈ ಅವಘಡ ನಡೆದಿದೆ.

ಕನ್ನಡ ಮತ್ತು ಸೌತ್ ಸಿನಿಮಾರಂಗದಲ್ಲಿ ಛಾಪೂ ಮೂಡಿಸುತ್ತಿರುವ ನಟಿ ಸಂಯುಕ್ತ ಹೆಗ್ಡೆಗೆ `ಕ್ರೀಮ್’ ಚಿತ್ರೀಕರಣದ ವೇಳೆ ಭಾರಿ ಪೆಟ್ಟಾಗಿದೆ. ಫೈಟಿಂಗ್ ಸೀಕ್ವೆನ್ಸ್ ಚಿತ್ರೀಕರಿಸುವಾಗ ಈ ಅವಘಡ ನಡೆದಿದೆ.

ಡ್ಯೂಪ್ ಬಳಸಿ ಚಿತ್ರೀಕರಣ ಮಾಡೋಣ ಎಂದು ಚಿತ್ರತಂಡ ಒತ್ತಾಯಿಸಿದರೂ ಸಂಯುಕ್ತಾ ಒಪ್ಪದಿದ್ದ ಕಾರಣ ಚಿತ್ರೀಕರಣ ವೇಳೆ ನಟಿಗೆ ಪೆಟ್ಟಾಗಿದೆ. ಸಂಯುಕ್ತಾ ಕಾಲು ಟ್ವಿಸ್ಟ್ ಆಗಿದೆ. ಇದೀಗ ನಟಿಗೆ ಹೆಚ್ಚುವರಿ ಚಿಕಿತ್ಸೆ ನೀಡಲಾಗುತ್ತಿದೆ. ಅಭಿಷೇಕ್ ಬಸಂತ್ ನಿರ್ದೇಶನದ ʻಕ್ರೀಮ್ʼ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಡಿ ಕೆ. ದೇವೇಂದ್ರ, ಫೈಟ್ ಮಾಸ್ಟರ್ ಪ್ರಭು ಹಾಗೂ ಛಾಯಾಗ್ರಾಹಕ ಸುನೋಜ್ ವೇಲಾಯುಧನ್ ರವರು ಡ್ಯೂಪ್ ಬಳಸಲು ಒತ್ತಾಯಿಸಿದರೂ ನಾಯಕಿ ಒಪ್ಪಲಿಲ್ಲ ಇದರ ಪರಿಣಾಮ ನಾಯಕಿ ಸಂಯುಕ್ತಾ ಕಾಲು ಟ್ವಿಸ್ಟ್ ಆಗಿದೆ. ಈ ಸಿನಿಮಾದ ಚಿತ್ರೀಕರಣವನ್ನು ಮುಂದೂಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಂಜನಗೂಡು ಕಿಚ್ಚ ಸುದೀಪ್ ಅವರ ಬಹ ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಇಂದು ಬಿಡುಗಡೆ ಅಭಿಮಾನಿಗಳ ಅಬ್ಬರ

Thu Jul 28 , 2022
ಚಿತ್ರ ಬಿಡುಗಡೆ ಹಿನ್ನೆಲೆ ನಂಜನಗೂಡಿನಲ್ಲಿ ಅಭಿಮಾನಿಗಳ ಅಬ್ಬರ ಜೋರಾಗಿದ್ದು ಕಿಚ್ಚನ ಚಿತ್ರಕ್ಕೆ ಗ್ರಾಂಡ್ ಎಂಟ್ರಿ ಕೊಡಲಾಯಿತು ಪಟ್ಟಣದ ಶಾರದಾ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವ ವಿಕ್ರಾಂತ್ ರೋಣ ಇಂದು ಬೆಳಿಗ್ಗೆ ಇಂದಲೇ ಸುದೀಪ್ ಅಭಿಮಾನಿಗಳಿಂದ ಸಂಭ್ರಮಾಚರಣೆ ನಂಜನಗೂಡು ತಾಲೂಕು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿ ವತಿಯಿಂದ ಬೃಹತ್ ಪಾದಯಾತ್ರೆ ಬೈಕ್ ಮತ್ತು ಆಟೋ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೊರಟ ಮೆರವಣಿಗೆಗೆ ಬಿಜೆಪಿ […]

Advertisement

Wordpress Social Share Plugin powered by Ultimatelysocial