YUVARAJ SINGH:ಮತ್ತೆ ಅಂಗಳಕ್ಕೆ ಸೆಹ್ವಾಗ್, ಯುವಿ ಸಹಿತ ದಿಗ್ಗಜರ ದಂಡು;

ವಿಶ್ವ ಕ್ರಿಕೆಟ್‌ನಲ್ಲಿ ಮೆರೆದು ನಿವೃತ್ತಿಯನ್ನು ಪಡೆದ ಕ್ರಿಕೆಟಿಗರ ಆಟದ ವೈಖರಿಯನ್ನು ಅಭಿಮಾನಿಗಳು ಆಗಾಗ ನೆನಪಿಸಿಕೊಳ್ಳುವುದು ಸಾಮಾನ್ಯ. ಆ ಆಟಗಾರರು ಮತ್ತೆ ಆಡಲು ಕಣಕ್ಕಿಳಿದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಕೂಡ ಸಾಕಷ್ಟು ಅಭಿಮಾನಿಗಳು ಮನದಲ್ಲೇ ಅಂದುಕೊಂಡಿರುತ್ತಾರೆ.

ಇದೀಗ ಅಂತಾದ್ದೊಂದು ವಿಶೇಷ ಕ್ಷಣ ಬಂದಿದೆ. ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದಿರುವ ದಿಗ್ಗಜ ಆಟಗಾರರ ಕ್ರಿಕೆಟ್ ಲೀಗ್‌ಗೆ ಇಂದಿನಿಂದ ಚಾಲನೆ ದೊರೆಯುತ್ತಿದೆ.

ವಿಶ್ವ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ಹಲವಾರು ದಿಗ್ಗಜ ಆಟಗಾರರು ಮೂರು ತಂಡಗಳ ಪರವಾಗಿ ‘ಲೆಜೆಂಡ್ಸ್ ಕ್ರಿಕೆಟ್‌ ಲೀಗ್’ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದ್ದು ಈ ಲೀಗ್‌ನ ಮೊದಲ ಆವೃತ್ತಿ ಜನವರಿ 20ರಂದು ಚಾಲನೆ ಪಡೆದುಕೊಳ್ಳುತ್ತಿದೆ. ಈ ಲೆಜೆಂಡ್ಸ್ ಕ್ರಿಕೆಟ್ ಲೀಗ್‌ನಲ್ಲಿ ಮೂರು ತಂಡಗಳು ಮುಖಾಮುಖಿಯಾತ್ತಿದೆ. ಇಂಡಿಯಾ ಮಹಾರಾಜಾಸ್, ಏಷ್ಯಾ ಲಯನ್ಸ್ ಹಾಗೂ ವರ್ಲ್ಡ್ ಜೈಂಟ್ಸ್ ತಂಡಗಳು ಸ್ಪರ್ಧೆಗಿಳಿಯುತ್ತಿದೆ.

ಇಂಡಿಯಾ ಮಹಾರಾಜಾಸ್ ತಂಡ ಭಾರತೀಯ ಆಟಗಾರರನ್ನು ಒಳಗೊಂಡಿರುವ ತಂಡವಾಗಿದ್ದರೆ ಏಷ್ಯಾ ಲಯನ್ಸ್ ತಂಡ ಭಾರತವನ್ನು ಹೊರತುಪಡಿಸಿ ಉಪಖಂಡದ ಉಳಿದ ದೇಶಗಳ ಆಟಗಾರರನ್ನು ಹೊಂದಿರುವ ತಂಡವಾಗಿದೆ. ಇನ್ನು ವರ್ಲ್ಡ್ ಜೈಂಟ್ಸ್ ತಂಡದಲ್ಲಿ ವಿಶ್ವದ ಇತರ ದೇಶಗಳ ನಿವೃತ್ತ ದಿಗ್ಗಜ ಕ್ರಿಕೆಟಿಗರನ್ನು ಒಳಗೊಂಡಿದೆ. ಹೀಗಾಗಿ ಈ ಲೀಗ್ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಈ ಟೂರ್ನಿ ರೌಂಡ್ ರಾಬಿನ್ ಮಾದರಿಯಲ್ಲಿ ಆಯೋಜನೆಯಾಗಲಿದೆ.

ಮೊದಲ ಪಂದ್ಯದ ಸಮಯ: ಈ ಲೀಗ್ ಟೂರ್ನಿಯ ಮೊದಲ ಪಂದ್ಯ ಇಂಡಿಯಾ ಮಹಾರಾಜಾಸ್ ಹಾಗೂ ಏಷ್ಯಾ ಲಯನ್ಸ್ ತಂಡಗಳ ಮಧ್ಯೆ ನಡೆಯಲಿದೆ. ಜನವರಿ 20 ಗುರುವಾರ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.

ಪಂದ್ಯದ ನೇರಪ್ರಸಾರ, ಲೈವ್ ಸ್ಟೀಮಿಂಗ್: ಲೆಜೆಂಡ್ಸ್ ಲೀಗ್ ಕ್ರಿಕೆಟ್ ಲೀಗ್‌ನ ಮೊದಲ ಪಂದ್ಯವನ್ನು ಅಭಿಮಾನಿಗಳು ವೀಕ್ಷಿಸಲು ಅವಕಾಶವಿದೆ. ಭಾರತದಲ್ಲಿ ಈ ಪಂದ್ಯಗಳು ಸೋನಿ ಟೆನ್ 1 ಹಾಗೂ ಸೋನಿ ಟೆನ್ 3 ಚಾನೆಲ್‌ನಲ್ಲಿ ನೇರಪ್ರಸಾರವಾಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

CRICKET:ಕೊಹ್ಲಿಯ ಈ ತಪ್ಪಿಗೆ ಕೋಪಗೊಂಡ ಸುನಿಲ್ ಗವಾಸ್ಕರ್!

Thu Jan 20 , 2022
ನವದೆಹಲಿ : ಟೀಮ್ ಇಂಡಿಯಾದಲ್ಲಿ ಸಧ್ಯ ಭಾರೀ ಅಲ್ಲೋಲ ಕಲ್ಲೋಲ ಸೃಷ್ಠಿಯಾಗಿದೆ. ಮೊದಲಿಗೆ, ವಿರಾಟ್ ಕೊಹ್ಲಿ ಎಲ್ಲಾ ಮೂರು ಸ್ವರೂಪಗಳ ನಾಯಕತ್ವವನ್ನು ತ್ಯಜಿಸಿದರು, ಇದನ್ನು ಹೊರತುಪಡಿಸಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಸೋಲನ್ನು ಎದುರಿಸಬೇಕಾಯಿತು. ಇದಾದ ಬಳಿಕ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿಯೂ ಟೀಂ ಇಂಡಿಯಾ 31 ರನ್‌ಗಳಿಂದ ಸೋಲು ಕಂಡಿತ್ತು. ವಿರಾಟ್ ಕೊಹ್ಲಿ ಪರಿಸ್ಥಿತಿಯೂ ಇದೇ ಆಗಿದೆ. ಕೊಹ್ಲಿ 2 ವರ್ಷಗಳಿಂದ ಗ್ರೌಂಡ್ […]

Advertisement

Wordpress Social Share Plugin powered by Ultimatelysocial