ಗುಜರಾತ್ ರಾಜ್ಯದ ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಘೇಲಾ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ. ಶಂಕರ್ ಸಿಂಗ್ ವಘೇಲಾ ಅವರಿಗೆ ತೀವ್ರ ಜ್ವರ ಕಂಡುಬಂದು ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಅವರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದ್ದು, ವರದಿ ಪಾಸಿಟಿವ್ ಬಂದಿದೆ. ಶಂಕರ್ ಸಿಂಗ್ ವಘೇಲಾ ಅವರಿಗೆ ಕೋವಿಡ್ -19 ಸೋಂಕು ದೃಢವಾದ ಮಾಹಿತಿ ತಿಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Please follow and like us:
Sun Jun 28 , 2020
ಕೊರೊನಾವೈರಸ್ ಭೀತಿ ನಡುವೆಯೇ ಮದುವೆ ಸಮಾರಂಭಕ್ಕೆ 50ಕ್ಕಿಂತ ಹೆಚ್ಚು ಮಂದಿ ಅತಿಥಿಗಳನ್ನು ಆಹ್ವಾನಿಸಿದ್ದರು. ಈ ಕುರಿತಂತೆ ಕುಟುಂಬಕ್ಕೆ ಜಿಲ್ಲಾಡಳಿತ 6 ಲಕ್ಷಕ್ಕಿಂತಲೂ ಹೆಚ್ಚು ದಂಡ ವಿಧಿಸಿದ ಘಟನೆ ರಾಜಾಸ್ಥಾನದಲ್ಲಿ ನಡೆದಿದೆ. ಹೌದು ರಾಜಸ್ಥಾನದ ಭಿಲ್ವಾರ ಜಿಲ್ಲೆಯ ಭಡಡಾ ಮೊಹಲ್ಲಾ ನಿವಾಸಿ ಘೀಸುಲಾಲ್ ರಾಠಿ ಎಂಬವರ ಮಗನ ಮದುವೆ ಜೂನ್ 13ರಂದು ನಡೆದಿತ್ತು. ಕೊರೊನಾ ಸೋಂಕು ಹರಡುತ್ತಿರುವ ಇಂತಹ ಸಮಯದಲ್ಲಿ ಮದುವೆ ಕಾರ್ಯಕ್ರಮಗಳಲ್ಲಿ 50ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ ಎಂದು ಸರ್ಕಾರ […]