ಕೊರೊನಾ ಕರಿನೆರಳು ಚುನಾವಣೆ ಮೇಲೆಯೂ ಬಿದ್ದಿದೆ. ಗ್ರಾಮ ಪಂಚಾಯಿತಿ ಚುನಾವಣೆ ಈಗಾಗಲೇ ಮೂಂದೂಡಿದ್ದು, ಈಗ ಬಿಬಿಎಂಪಿಯ ಸರದಿ. ಬಿಬಿಎಂಪಿ ಚುನಾವಣೆಯನ್ನು ಮುಂದೂಡುವುದಾಗಿ ಪಕ್ಕಾ ಮಾಹಿತಿ ಹೊರಬಂದಿದೆ. ಸೆಪ್ಟೆಂಬರ್ಗೆ ಬಿಬಿಎಂಪಿ ಅವಧಿ ಅಂತ್ಯಗೊAಡು, ಆಗಸ್ಟ್ ತಿಂಗಳಿಗೆ ಪುನಃ ಚುನಾವಣೆ ನಡೆಯಬೇಕಿತ್ತು ಆದರೆ ಕೊರೊನಾದಿಂದ ಈಗಾಗಲೇ ಬೆಂಗಳೂರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಹಾಗೂ ಲಾಕ್ಡೌನ್ ಸಮಸ್ಯೆಯಿಂದ ಚುನಾವಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆಗಸ್ಟ್ನಲ್ಲಿ ನಡೆಯಬೇಕಿರುವ ಚುನಾವಣೆಯನ್ನು ಫೆಬ್ರುವರಿಗೆ ಮುಂದೂಡಲಾಗಿದೆ. ಎಂದು ಬಿಬಿಎಂಪಿ ಕಮೀಷನರ್ ಅನಿಲ್ ಕುಮಾರ್ ತಿಳಿಸಿದ್ದಾರೆ.
ಬಿಬಿಎಂಪಿ ಚುನಾವಣೆ ಮುಂದೂಡಿಕೆ
Please follow and like us: