ಬಪ್ಪಿ ಲಹಿರಿ ಅವರ ನಿಧನಕ್ಕೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತೀವ್ರ ದುಃಖ

ಮುಂಬೈ,ಫೆ.17- ತಮ್ಮ ಚಿತ್ರಗಳಿಗೆ ಇಂಪಾದ ಗೀತೆಗಳನ್ನು ಸಂಯೋಜಿಸಿ ಜನಪ್ರಿಯಗೊಳಿಸಿದ ಬಪ್ಪಿ ಲಹಿರಿ ಅವರ ನಿಧನಕ್ಕೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ನನ್ನ ಸಿನಿಮಾಗಳಿಗೆ ಬಪ್ಪಿ ಅವರು ನೀಡಿರುವ ಗೀತೆಗಳು ದಶಕಗಳಾಚೆಗೂ ಸಂತೋಷದಿಂದ ನೆನಪಿನಂಗಳದಲ್ಲಿರುತ್ತವೆ ಎಂದು ಅಮಿತಾಭ್ ಹೇಳಿದ್ದಾರೆ.ನನ್ನ ಸಿನಿಮಾಗಳಿಗೆ ಬಪ್ಪಿ ಅವರು ನೀಡಿರುವ ಗೀತೆಗಳು ದಶಕಗಳಾಚೆಗೂ ಸಂತೋಷದಿಂದ ನೆನಪಿನಂಗಳದಲ್ಲಿರುತ್ತವೆ ಎಂದು ಅಮಿತಾಭ್ ಹೇಳಿದ್ದಾರೆ.ನಗರದ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಿಧನರಾದ 69 ವರ್ಷ ವಯಸ್ಸಿನ ಬಪ್ಪಿ ಲಹರಿ ಅವರು ನಮಕ್‍ಹಲಾಲ್ (1982) ಮತ್ತು ಶರಾಬಿ (1984) ಮೊದಲಾದ ಅಮಿತಾಭ್ ನಟನೆಯ ಚಿತ್ರಗಳಿಗೆ ಹಿಟ್ ಗೀತೆಗಳನ್ನು ನೀಡಿದ್ದರು.ಅವರ ಸಂಗೀತ ಸಂಯೋಜನೆಯ ಹಿಟ್ ಗೀತೆಗಳಲ್ಲಿ ಪಗ್ ಘುಂಗ್ರೂ ಬಂಧ್, ಥೋಡೀ ಸೀ ಜೋ ಪೀಲಿ ಹೈ, ಆಜ್ ರಪಟ್ ಜಾಯೇ ತೋ, ಜಹಾ ಚಾರ್ ಯಾರ್, ದೇ ದೇ ಪ್ಯಾರ್ ದೇ, ಇಂತೆಹಾ ಹೋ ಗಯೀ ಇಂತೆಝಾರ್ ಕೀ ಮತ್ತು ರಾತ್ ಬಾಕಿ, ಬಾತ್ ಬಾಕಿ ಗೀತೆಗಳು ಸೇರಿವೆ.79 ವರ್ಷ ವಯಸ್ಸಿನ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ತಮ್ಮ ಬ್ಲಾಗ್‍ನಲ್ಲಿ ಬಪ್ಪಿ ಲಹರಿ ಅವರನ್ನು ಸ್ಮರಿಸಿಕೊಂಡಿದ್ದಾರೆ. ಬಪ್ಪಿ ಅವರ ಅಗಲಿಕೆ ತಮಗೆ ಆಘಾತ ಮತ್ತು ದಿಗ್ಭ್ರಮೆಯನ್ನುಂಟು ಮಾಡಿದೆ ಎಂದು ಅಮಿತಾಭ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಏಕೆ ಕುಡಿಯಬಾರದು ಎಂದು ತಿಳಿಯಿರಿ?

Thu Feb 17 , 2022
ಪೌಷ್ಟಿಕಾಂಶ-ಭರಿತ ಹಣ್ಣುಗಳು ನಮ್ಮ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಫಿಟ್ ಮತ್ತು ಆರೋಗ್ಯಕರವಾಗಿರಲು ಜನರು ತಮ್ಮ ಆಹಾರದ ಪ್ರಮುಖ ಭಾಗವೆಂದು ಪರಿಗಣಿಸುತ್ತಾರೆ. ಆದರೆ ನಮಗೆ ಅನಿಸಿದ್ದನ್ನು ತಿನ್ನುವುದು ಯಾವಾಗಲೂ ಸರಿಯಾಗದಿರಬಹುದು. ಕೆಲವು ಜನರು ತಮ್ಮ ಆಹಾರದಲ್ಲಿ ಜ್ಯೂಸ್ ಅನ್ನು ಸೇರಿಸುತ್ತಾರೆ ಏಕೆಂದರೆ ಇದು ದೇಹಕ್ಕೆ ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ನಾವು ಬೆಳಿಗ್ಗೆ ತಿನ್ನುವ ಮೊದಲ ಆಹಾರವು ದಿನದ ಕೋರ್ಸ್ ಅನ್ನು ಹೊಂದಿಸುತ್ತದೆಯಾದ್ದರಿಂದ, ನಾವು ಸೇವಿಸುವ ಯಾವುದೇ ವಿಷಯದಲ್ಲಿ ನಾವು […]

Advertisement

Wordpress Social Share Plugin powered by Ultimatelysocial