ಅಗತ್ಯ ವಸ್ತುಗಳ ಪೊರೈಕೆ ಮನೆ ಬಾಗಿಲಿಗೆ

ಬೆಂಗಳೂರು : ಲಾಕ್ ಡೌನ್ ನಿಂದಾಗಿ ಅಗತ್ಯ ವಸ್ತುಗಳು ಸಿಗದೇ ಕಷ್ಟದಲ್ಲಿರುವ ನಗರದ ಜನತೆಗೆ ,ಮಹಾನಗರ ಪಾಲಿಕೆ ಸಿಹಿಸುದ್ದಿ ನೀಡಿದ್ದು, ಅಗತ್ಯ ವಸ್ತುಗಳನ್ನು ಪೂರೈಸುವ ಸಹಾಯವಾಣಿಯನ್ನು ಆರಂಭಿಸಿದೆ.
ಜನರು ಹೋಂ ಡೆಲಿವರಿ ಸಹಾಯವಾಣಿ ೦೮೦-೬೧೯೧೪೯೬೦ ಸಂಖ್ಯೆಗೆ ಕರೆ ಮಾಡಿದರೆ ದಿನಸಿ, ತರಕಾರಿ,ಔಷಧಿ ಮುಂತಾದ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸಲಾಗುತ್ತದೆ. ಇದಕ್ಕೆ ಹೆಚ್ಚುವರಿಯಾಗಿ ೧೦ ರೂ. ಸೇವಾಶುಲ್ಕ ಪಡೆಯಲಾಗುತ್ತದೆ.
ಖಾಸಗಿ ಏಜೆನ್ಸಿಯ ಸಹಯೋಗದಲ್ಲಿ ಅಗತ್ಯ ವಸ್ತುಗಳನ್ನು ನೀಡಲಾಗುತ್ತದೆ. ಇದಕ್ಕಾಗಿ ೫ ಸಾವಿರ ಜನರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಸೇವೆಯನ್ನು ಒದಗಿಸಲು ೧೮ ಸಾವಿರ ರ‍್ತಕರ ಜೊತೆಗೆ ಮಾತುಕತೆ ನಡೆಸಿ ನೋಂದಾಯಿಸಿಕೊಳ್ಳಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

425 ಕ್ಕೆ ಏರಿದ ಸೋಂಕಿತರ ಸಂಖ್ಯೆ

Wed Apr 22 , 2020
ಕರ್ನಾಟಕದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಒಂದೇ ದಿನ 7 ಜನರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 425 ಕ್ಕೆ ಏರಿಕೆಯಾಗಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ, ಕಲಬುರಗಿಯಲ್ಲಿ ಇಂದು 4 ತಿಂಗಳ ಮಗು ಸೇರಿದಂತೆ ಹೊಸದಾಗಿ 5 ಜನರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಕಲಬುರಗಿಯ ಐದು ಜನರಿಗೆ […]

Advertisement

Wordpress Social Share Plugin powered by Ultimatelysocial