ಅಂಬೇಡ್ಕರ್ ನಗರದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ.

ಚಿಕ್ಕಬಳ್ಳಾಪುರ, ಫೆಬ್ರವರಿ 3: ಚಿಕ್ಕಬಳ್ಳಾಪುರ ನಗರದ 30ನೇ ವಾರ್ಡ್ ಅಂಬೇಡ್ಕರ್ ನಗರದಲ್ಲಿ ಕಸ ವಿಲೇವಾರಿ ವ್ಯವಸ್ಥೆ ಹಳಿ ತಪ್ಪಿದ್ದು ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

ಅಂಬೇಡ್ಕರ್ ನಗರದಲ್ಲಿ ಆರ್ಥಿಕವಾಗಿ ಹಿಂದುಳಿದ ಕೆಲವು ಕುಟುಂಬಳು ವಾಸವಿದ್ದು, ಅಧಿಕಾರಿಗಳು ಸಕಾಲದಲ್ಲಿ ಕಸ ವಿಲೇವಾರಿ ಮಾಡುತ್ತಿಲ್ಲ.

ಹೀಗಾಗಿ ನಿವಾಸಿಗಳು ಕಸವನ್ನು ಎಲ್ಲಂದರಲ್ಲಿ ರಾಶಿ ಹಾಕುತ್ತಿದ್ದಾರೆ. ಇನ್ನು ಅಂಗಡಿ, ಹೋಟೆಲ್ ಮಾಲೀಕರು ವೈದ್ಯನಿಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ. ತಂದು ಚರಂಡಿ ಸುರಿಯುತ್ತಿದ್ದಾರೆ ಎಂದು ಬಡಾವಣೆಯ ಸ್ಥಳೀಯ ವೆಂಕಟೇಶ್ ಆರೋಪಿಸಿದ್ದಾರೆ.

ಇನ್ನು ನಗರಸಭೆಯ ಪೌರ ಕಾರರ್ಮಿಕರು ಪ್ರತಿನಿತ್ಯ ಮನೆ ಮನೆಗೆ ಭೇಟಿ ನೀಡಿ ಕಸ ಸಂಗ್ರಹ ಮಾಡುವ ಪದ್ದತಿ ಇಲ್ಲಿ ಮರೀಚಿಕೆಯಾಗಿದೆ. ಇದರಿಂದಾಗಿ ನಿವಾಸಿಗಳು ಚರಂಡಿ, ರಸ್ತೆ ಬದಿ, ಖಾಲಿ ನಿವೇಶನಗಳಿಗೆ ಎಸೆಯುತ್ತಿದ್ದಾರೆ. ಕಸವನ್ನು ಚರಂಡಿಗೆ ಹಾಕುವುದರಿಂದ ಕೊಳಚೆ ನೀರು ಸರಾಗವಾಗಿ ಹರಿಯದೆ ಚರಂಡಿಯಲ್ಲಿ ಶೇಖರಣೆಯಾಗುತ್ತಿದೆ. ಇದರಿಂದಾಗಿ ದುರ್ವಾಸನೆ ಬರುತ್ತಿದ್ದು, ಸೊಳ್ಳೆ, ನೋಣಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳ ಭೀತಿ ಮನೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಡಾವಣೆಯು ಅತ್ಯಂತ ಹಿಂದುಳಿದಿದೆ. ಕುಡಿಯುವ ನೀರು, ಸ್ವಚ್ಚತೆ, ಚರಂಡಿ ವ್ಯವಸ್ಥೆಯಿಲ್ಲ. ನಿವಾಸಿಗಳು ನಿಗದಿತ ಸ್ಥಳದಲ್ಲಿ ಕಸ ಹಾಕಬೇಕು. ಇಲ್ಲದಿದ್ದರೆ ಪೌರಕಾರ್ಮಿಕರಿಗೆ ನೀಡಬೇಕು ಎಂದು ನಗರಸಭೆಯು ಸೂಚನೆ ನೀಡಿದೆ. ಆದರೆ ಪೌರಕಾರ್ಮಿಕರು ಮನೆ ಮನೆಗೆ ಸಕಾಲದಲ್ಲಿ ಬಾರದೆ ಇರುವುದರಿಂದ ಸ್ವಚ್ಛತೆ ಮರೀಚಿಕೆಯಾಗಿದೆ ಎಂದು ಬಡಾವಣೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕಸದ ಸಮಸ್ಯೆ ಬಗ್ಗೆ ಸ್ಥಳೀಯ ನಗರಸಭೆ ಸದಸ್ಯರಿಗೆ, ನಗರಸಭೆ ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ರೀತಿ ಕ್ರಮಕೈಗೊಂಡಿಲ್ಲ. ನಾಯಿ, ಹಂದಿ, ಹಸುಗಳ ಹಾವಳಿ ಹೆಚ್ಚಾಗಿದ್ದು ಮಕ್ಕಳು, ವೃದ್ಧರು ರಸ್ತೆಯಲ್ಲಿ ಓಡಾಡಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ನಗರಸಭೆ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟಿಕೆಟ್ ಖರೀದಿಸಿ ಎಂದಿದ್ಕೆ ವಿಮಾನ ನಿಲ್ದಾಣದಲ್ಲೇ ಮಗುವನ್ನು ಬಿಟ್ಟುಹೋದ ಪೋಷಕರು!

Fri Feb 3 , 2023
ವಿಮಾನದಲ್ಲಿ ಪ್ರಯಾಣಿಸಲು ಮಗುವಿಗೂ ಟಿಕೆಟ್‌ ತೆಗೆದುಕೊಳ್ಳಲು ಹಿಂಜರಿದ ಪೋಷಕ ದಂಪತಿಗಳು ತಮ್ಮ ಮಗುವನ್ನು ವಿಮಾನ ನಿಲ್ದಾನದಲ್ಲೇ ಬಿಟ್ಟುಹೋದ ಘಟನೆ ಕಳೆದ ಮಂಗಳವಾರ ರಾತ್ರಿ ಇಸ್ರೇಲ್‌ನ ಟೆಲ್ ಅವಿವ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ದಂಪತಿಗಳು ತಮ್ಮ ಮಗುವುನೊಂದಿಗೆ ಮಂಗಳವಾರ ರಾತ್ರಿ ಇಸ್ರೇಲ್‌ನ ಟೆಲ್ ಅವಿವ್ ವಿಮಾನ ನಿಲ್ದಾಣದಿಂದ ದಂಪತಿಗಳು ಬೆಲ್ಜಿಯಂನ ಬ್ರಸೆಲ್ಸ್‌ಗೆ ಹೋಗುತ್ತಿದ್ದರು. ಅವರು ಅವರು Ryanair ವಿಮಾನ ಹತ್ತಬೇಕಿತ್ತು. ಇದಕ್ಕಾಗಿ ದಂಪತಿಗಳು ಅವರಿಗೆ ಮಾತ್ರ ಟಿಕೆಟ್‌ ಬುಕ್‌ ಮಾಡಿಕೊಂಡಿದ್ದು, ಮಗುವಿನ […]

Advertisement

Wordpress Social Share Plugin powered by Ultimatelysocial