ಟಿಕೆಟ್ ಖರೀದಿಸಿ ಎಂದಿದ್ಕೆ ವಿಮಾನ ನಿಲ್ದಾಣದಲ್ಲೇ ಮಗುವನ್ನು ಬಿಟ್ಟುಹೋದ ಪೋಷಕರು!

ವಿಮಾನದಲ್ಲಿ ಪ್ರಯಾಣಿಸಲು ಮಗುವಿಗೂ ಟಿಕೆಟ್‌ ತೆಗೆದುಕೊಳ್ಳಲು ಹಿಂಜರಿದ ಪೋಷಕ ದಂಪತಿಗಳು ತಮ್ಮ ಮಗುವನ್ನು ವಿಮಾನ ನಿಲ್ದಾನದಲ್ಲೇ ಬಿಟ್ಟುಹೋದ ಘಟನೆ ಕಳೆದ ಮಂಗಳವಾರ ರಾತ್ರಿ ಇಸ್ರೇಲ್‌ನ ಟೆಲ್ ಅವಿವ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ದಂಪತಿಗಳು ತಮ್ಮ ಮಗುವುನೊಂದಿಗೆ ಮಂಗಳವಾರ ರಾತ್ರಿ ಇಸ್ರೇಲ್‌ನ ಟೆಲ್ ಅವಿವ್ ವಿಮಾನ ನಿಲ್ದಾಣದಿಂದ ದಂಪತಿಗಳು ಬೆಲ್ಜಿಯಂನ ಬ್ರಸೆಲ್ಸ್‌ಗೆ ಹೋಗುತ್ತಿದ್ದರು. ಅವರು ಅವರು Ryanair ವಿಮಾನ ಹತ್ತಬೇಕಿತ್ತು. ಇದಕ್ಕಾಗಿ ದಂಪತಿಗಳು ಅವರಿಗೆ ಮಾತ್ರ ಟಿಕೆಟ್‌ ಬುಕ್‌ ಮಾಡಿಕೊಂಡಿದ್ದು, ಮಗುವಿನ ಟಿಕೆಟ್ ಬುಕ್ ಮಾಡಿರಲಿಲ್ಲ.

ದಂಪತಿಗಳು ತಮ್ಮ ಪಾಸ್‌ಪೋರ್ಟ್‌ಗಳೊಂದಿಗೆ ವಿಮಾನ ನಿಲ್ದಾಣದ ಟರ್ಮಿನಲ್ 1 ಅನ್ನು ತಲುಪಿದ್ದಾರೆ. ಈ ವೇಳೆ, ಅಲ್ಲಿನ ಸಿಬ್ಬಂದಿಗಳು ಮಗುವಿನ ಟಿಕೆಟ್‌ ಕೇಳಿದ್ದಾರೆ. ಮಗುವಿಗೆ ಟಿಕೆಟ್‌ ಬುಕ್‌ ಮಾಡಿಲ್ಲ ಎಂದ ದಂಪತಿಗಳು ಮಗುವನ್ನು ಅಲ್ಲೇ ಬಿಟ್ಟು ದಂಪತಿಗಳು ವಿಮಾನ ಹತ್ತಲು ನಿರ್ಧರಿಸಿ ಸೆಕ್ಯೂರಿಟಿ ಚೆಕ್ ಕಡೆಗೆ ಓಡಿದ್ದಾರೆ.

ಈ ವಿಷಯ ಗೊತ್ತಾಗುತ್ತಿದ್ದಂತೆ ಚೆಕ್-ಇನ್ ಕೌಂಟರ್‌ನಲ್ಲಿದ್ದ ಅಧಿಕಾರಿ ವಿಮಾನ ನಿಲ್ದಾಣದ ಭದ್ರತೆಯನ್ನು ಎಚ್ಚರಿಸಿದ್ದಾರೆ. ಅವರು ಆ ಪೋಷಕ ದಂಪತಿಗಳನ್ನು ಹಿಡಿದು ವಿಮಾನ ಹತ್ತದಂತೆ ತಡೆದಿದ್ದಾರೆ. ಕೊನೆಗೆ ವಿಮಾನ ಹತ್ತಲು ಪೋಷಕರು ವಿಫಲರಾದರು. ಕೊನೆಗೆ ಈ ಸಮಸ್ಯೆಯನ್ನು ಪರಿಹರಿಸಿದ್ದ ಇಸ್ರೇಲ್ ಪೊಲೀಸರು ಮಗುವನ್ನು ಪೋಷಕರ ಕೈಗೆ ಒಪ್ಪಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾಹುಕಾರ್ ಗೆ ಸವಾಲು ಹಾಕಿದ ಡಿಕೆಶಿ.

Fri Feb 3 , 2023
ರಮೇಶ್ ಜಾರಕಿಹೊಳೆಯವರು ಮರು ಪ್ರಾರಂಭ ಮಾಡಿರುವ ಈ ಸಿಡಿ ಪ್ರಕರಣ ಈಗ ಹೈಕಮಾಂಡ್‌ಮಟ್ಟದಲ್ಲಿ ಚರ್ಚೆ ಮಾಡುತಿದ್ದಾರೆ.ಡಿಕೆಶಿ ವಿರುದ್ದ ಮಾಡುತ್ತಿರುವ ಈ ಸಿಡಿ ಆರೋಪವನ್ನು ಕೇಂದ್ರ ಸಚಿವ ಅಮಿತ್ ಷಾ ಅವರ ಜೊತೆ ಚರ್ಚೆಸಿದ ಸಾಹುಕಾರ ಡಿಕೆಶಿಅವರನ್ನು ತನಿಖೆಗೆ ಒಳಪಡಿಸಬೇಕು ಅವರ ವಿರುದ್ದ ಕಠಿಣ ತ್ರಮ ಕೈಗೊಳ್ಳಬೇಕು ಎಂದು ಬೆಳಿಗ್ಗೆ ವಾಕಿಂಗ್ ಹೋಗುವ ಸಮಯದಲ್ಲಿ ಸಿಡಿ ಬಗ್ಗೆ ತಿಳಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಮನವಿ ಮಾಡಿದರ ಇದಕ್ಕೆ ಪ್ರಿಕ್ರಿಯಡ ನೀಡಿದ Pಕೇಂದ್ರ ಗೃಹ […]

Advertisement

Wordpress Social Share Plugin powered by Ultimatelysocial