ಆರ್.ಸಿ.ಹಿರೇಮಠ

ಈ ದಿನ ನಮ್ಮ ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಮುಖ ಸಂಶೋಧಕ ಶರಣ ಸಂಸ್ಕೃತಿಯ ಚಿಂತಕ ಆರ್.ಸಿ.ಹಿರೇಮಠ ಅವರ ಜನುಮ ದಿನ.
ಅವರ ಕುರಿತ ಈ ಮುಂದಿನ ಮಾಹಿತಿಯ ಮೂಲಕ ಅವರಿಗೆ ನನ್ನ ಈ ನುಡಿ ನಮನಗಳು
ಡಾ. ಆರ್.ಸಿ. ಹಿರೇಮಠ (೧೫.೦೧.೧೯೨೦, ೦೩.೧೧.೧೯೯೮) ಪ್ರಾಧ್ಯಾಪಕ, ಕುಲಪತಿ, ಲೇಖಕ , ಸಂಶೋಧಕ, ಭಾಷಾವಿಜ್ಞಾನಿ, ಶರಣ ಸಂಸ್ಕೃತಿಯ ಚಿಂತಕರೆನಿಸಿದ್ದ ಹಿರೇಮಠ ರವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ಕುರುಡಗಿ ಎಂಬ ಸಣ್ಣ ಹಳ್ಳಿಯಲ್ಲಿ, ೧೯೨೦ ರ ಜನವರಿ ೧೫ ರಂದು. ತಂದೆ ಚಂದ್ರಯ್ಯ, ತಾಯಿ ವೀರಮ್ಮ. ಬಡತನದಲ್ಲಿ ಬೆಂದು ಅರಳಿದ ಬದುಕು. ಒಂದೊಂದು ಹೊತ್ತಿನ ತುತ್ತಿಗೂ ಪಡಬಾರದ ಕಷ್ಟಪಟ್ಟು ಬೆಳೆದವರು. ಶಾಲೆಗೆ ಸೇರಿದರೂ ತೊಡಲು ಬಟ್ಟೆ, ಓದಲು ಪುಸ್ತಕ, ಬರೆಯಲು ಕಾಗದಕ್ಕೆ ತಾಪತ್ರಯ, ತರಗತಿಯಲ್ಲಿ ಕೇಳಿದ್ದಷ್ಟೆ. ಗದಗ ಶಾಲೆಯಲ್ಲಿ ಓದಿ ೧೯೩೪ ರಲ್ಲಿ ಮುಲ್ಕಿ ಪರೀಕ್ಷೆ, ೧೯೩೯ ರಲ್ಲಿ ಮ್ಯಾಟ್ರಿಕ್ ನಲ್ಲಿ ತೇರ್ಗಡೆಯಾದ ಹಿರೇಮಠರು ಸಿ.ಚ. ನಂದೀಮಠ ರವರ ಸಲಹೆಯಂತೆ ಬೆಳಗಾವಿಯ ಲಿಂಗರಾಜ ಕಾಲೇಜಿಗೆ ಸೇರಿ ೧೯೪೩ ರಲ್ಲಿ ಬಿ.ಎ. ಪದವಿ ಪಡೆದರು. ೧೯೪೫ ಎಂ.ಎ. ತೇರ್ಗಡೆಯಾದದ್ದು ಬಾಗಲ ಕೋಟೆ ಕಾಲೇಜಿನಿಂದ. ಎಂ.ಎ. ಪದವಿ ಪಡೆದ ನಂತರ ಬಾಗಲಕೋಟೆ ಬಸವೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಬೋಧನಾವೃತ್ತಿಯನ್ನಾರಂಭಿಸಿದರು. ಆರು ವರ್ಷಗಳ ತರುವಾಯ (೧೯೫೧) ಧಾರವಾಡದ ಕರ್ನಾಟಕ ಕಾಲೇಜಿಗೆ ಬಂದರು. ಆಗ ಎಂ.ಎ. ತರಗತಿಗಳ ಪ್ರಾರಂಭಾವಸ್ಥೆ . ತೀ.ನಂ. ಶ್ರೀಕಂಠಯ್ಯನವರು ಪ್ರಾಧ್ಯಾಪಕರಾಗಿದ್ದರು. ೧೯೫೫ ರಲ್ಲಿ ದ್ರಾವಿಡ – ಆರ್ಯಭಾಷೆಗಳ ಸಂಬಂಧವನ್ನು ಕುರಿತು ಇಂಗ್ಲಿಷ್ನಲ್ಲಿ ಬರೆದ ಅವರ ಮಹಾಪ್ರಬಂಧಕ್ಕೆ [Linguistic Investigations of some Problems on the Relationship of Indo-aryan and Dravidian Languages, the Structure of Kannada] ಡಾಕ್ಟರೇಟ್ ಪದವಿಯೂ ದೊರೆಯಿತು. ಆಧುನಿಕ ಭಾಷಾವಿಜ್ಞಾನದಲ್ಲಿ ಬರೆದ ಮೊಟ್ಟಮೊದಲ ಮಹಾಪ್ರಬಂಧ. ೧೯೫೭ ರಲ್ಲಿ ಆರ್.ಸಿ. ಯವರು ಕನ್ನಡ ವಿಭಾಗದ ಪ್ರಾಧ್ಯಾಪಕರು ಮುಖ್ಯಸ್ಥರೂ ಆದರು. ೧೯೫೮ ರಲ್ಲಿ ರಾಕ್ಫೆಲರ್ ಪ್ರತಿಷ್ಠಾನದ ಸೀನಿಯರ್ ಫೆಲೊಷಿಪ್ ದೊರೆತು ಅಮೆರಿಕಕ್ಕೆ ತೆರಳಿ ಎರಡು ವರ್ಷಗಳ ಕಾಲ ಭಾಷಾಶಾಸ್ತ್ರವನ್ನು ಅಭ್ಯಸಿಸಿದರು. ಐದು ವರ್ಷಗಳ ನಂತರ ಮತ್ತೊಮ್ಮೆ ಭಾಷಾಶಾಸ್ತ್ರದ ಗೌರವ ಪ್ರಾಧ್ಯಾಪಕರಾಗಿ ವೀರಶೈವ ತತ್ತ್ವಜ್ಞಾನದ ಬೋಧಕರಾಗಿ ಇಂಗ್ಲೆಂಡ್, ಅಮೆರಿಕಾ ದೇಶಗಳಿಗೆ ಭೇಟಿ ನೀಡಿದರು. ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮರಳಿ ಬಂದ ಆರ್.ಸಿ. ಯವರು ೧೯೬೬ ರಲ್ಲಿ ಹಿರಿಯ ಪ್ರಾಧ್ಯಾಪಕರೆನಸಿದರು. ೧೯೭೪ ರಲ್ಲಿ ಹಂಗಾಮಿ ಕುಲಪತಿಯಾಗಿ ೧೯೭೫ ರಲ್ಲಿ ಕುಲಪತಿಗಳಾಗಿ, ೧೯೭೮ ರಲ್ಲಿ ನಿವೃತ್ತರಾದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠವನ್ನು ಸ್ಥಾಪಿಸಿ ಎಂ.ಎ. ತರಗತಿಗಳಿಗೆ ಕನ್ನಡ ಸಾಹಿತ್ಯ ವಿಷಯವೊಂದೇ ಬೋಧನ ವಿಷಯವಾಗಿದ್ದು ಅದನ್ನು ವಿಸ್ತರಿಸಿ ಭಾಷಾಶಾಸ್ತ್ರ, ಸಂಪಾದನ ಶಾಸ್ತ್ರ, ಶಾಸನ ಶಾಸ್ತ್ರ, ಜನಪದ ಶಾಸ್ತ್ರ, ಜಾಗತಿಕಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಾ.ಎಂ.ಚಿದಾನಂದಮೂರ್ತಿ

Thu Mar 10 , 2022
ಈ ದಿನ ನಮ್ಮ ಕನ್ನಡ ನಾಡು ನುಡಿ ಸಂಸ್ಕೃತಿಯ ಶ್ರೇಷ್ಠ ಸಂಶೋಧಕರೂ, ಖ್ಯಾತ ಸಾಹಿತಿಗಳೂ, ಕವಿಗಳೂ, ಅಂಕಣಕಾರರೂ ಆದ ಡಾ.ಎಂ.ಚಿದಾನಂದಮೂರ್ತಿ ಅವರ ಕುರಿತು ಈ ಮುಂದಿನ ಮಾಹಿತಿಯ ಮೂಲಕ ಅವರಿಗೆ ನನ್ನ ಈ ನುಡಿನಮನಗಳು ಪ್ರಾಧ್ಯಾಪಕ, ಸಂಶೋಧಕ, ಸದಾ ಕನ್ನಡದ ಚಳವಳಿಯ ಮುಂಚೂಣಿಯಲ್ಲಿರುವ ಎಂ. ಚಿದಾನಂದ ಮೂರ್ತಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಚೆನ್ನಗಿರಿ ತಾಲ್ಲೂಕಿನ ಹಿರೇಕೋಗಲೂರಿನಲ್ಲಿ. ತಂದೆ ಕೂಲಿಸಾಲಿಯಲ್ಲಿ ಮೇಸ್ಟ್ರಾಗಿದ್ದ ಕೊಟ್ಟೂರಯ್ಯ, ತಾಯಿ ಪಾರ್ವತವ್ವ. ಕೋಗಲೂರಿನಲ್ಲೆ ಮಾಧ್ಯಮಿಕದವರೆಗೆ ಓದು. ಪ್ರೌಢಶಾಲೆ, […]

Advertisement

Wordpress Social Share Plugin powered by Ultimatelysocial