ಡಾ.ಎಂ.ಚಿದಾನಂದಮೂರ್ತಿ

ಈ ದಿನ ನಮ್ಮ ಕನ್ನಡ ನಾಡು ನುಡಿ ಸಂಸ್ಕೃತಿಯ ಶ್ರೇಷ್ಠ ಸಂಶೋಧಕರೂ, ಖ್ಯಾತ ಸಾಹಿತಿಗಳೂ, ಕವಿಗಳೂ, ಅಂಕಣಕಾರರೂ ಆದ ಡಾ.ಎಂ.ಚಿದಾನಂದಮೂರ್ತಿ
ಅವರ ಕುರಿತು ಈ ಮುಂದಿನ ಮಾಹಿತಿಯ ಮೂಲಕ ಅವರಿಗೆ ನನ್ನ ಈ ನುಡಿನಮನಗಳು
ಪ್ರಾಧ್ಯಾಪಕ, ಸಂಶೋಧಕ, ಸದಾ ಕನ್ನಡದ ಚಳವಳಿಯ ಮುಂಚೂಣಿಯಲ್ಲಿರುವ ಎಂ. ಚಿದಾನಂದ ಮೂರ್ತಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಚೆನ್ನಗಿರಿ ತಾಲ್ಲೂಕಿನ ಹಿರೇಕೋಗಲೂರಿನಲ್ಲಿ. ತಂದೆ ಕೂಲಿಸಾಲಿಯಲ್ಲಿ ಮೇಸ್ಟ್ರಾಗಿದ್ದ ಕೊಟ್ಟೂರಯ್ಯ, ತಾಯಿ ಪಾರ್ವತವ್ವ. ಕೋಗಲೂರಿನಲ್ಲೆ ಮಾಧ್ಯಮಿಕದವರೆಗೆ ಓದು. ಪ್ರೌಢಶಾಲೆ, ಇಂಟರ್ಮೀಡಿಯೆಟ್ ಓದಿದ್ದು ದಾವಣಗೆರೆಯಲ್ಲಿ. ಇವರಿಗೆ ಸಾಹಿತ್ಯಲೋಕ ಪ್ರವೇಶಿಸಲು ಪ್ರೇರಕ ಶಕ್ತಿಗಳು ಜಿ.ಎಸ್.ಎಸ್. ಮತ್ತು ಡಾ. ಎಲ್. ಬಸವರಾಜುರವರು. ಮೈಸೂರಿನ ಮಹಾರಾಜ ಕಾಲೇಜು ಸೇರಿ ಆರಿಸಿಕೊಂಡಿದ್ದು ಬಿ.ಎ. ಕನ್ನಡ (ಆನರ್ಸ್) ಪರೀಕ್ಷೆಯಲ್ಲಿ ರ್ಯಾಂಕ್ ಗಿಟ್ಟಿಸಿದ ಚಿ.ಮೂ.ರವರು ಬೆಂಗಳೂರಿನ ಇಂಟರ್ಮೀಡಿಯೆಟ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭ. “ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ” ಪ್ರೌಢ ಪ್ರಬಂಧಕ್ಕೆ ಪಿಎಚ್.ಡಿ. ಪದವಿ. ಅಮೆರಿಕದ ಶಿಕಾಗೊ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ ಕನ್ನಡ ಅಧ್ಯಾಪಕರಾಗಿ ಸೇವೆ. ೧೯೬೮ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿ ಸೇರಿ ೧೯೯೦ರಲ್ಲಿ ಸ್ವಯಂ ನಿವೃತ್ತಿ. ಶ್ರೇಷ್ಠ ಸಂಶೋಧಕರಾಗಿ, ಭಾಷಾ ತಜ್ಞರಾಗಿ ಸಾವಿರಾರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಸ್ಟ್ರು. ಹಿಡಿದಿದ್ದನ್ನು ಸಾಸಿ ತೋರಿಸುವ ಛಲ. ಸಂಶೋಧನೆ, ಚಳವಳಿ ಎರಡೂ ಕರ್ನಾಟಕದ ಉನ್ನತಿಗಾಗಿ ಎಂಬ ವಾದ ಚಿ.ಮೂ.ರವರದು. ಪ್ರಾಧ್ಯಾಪಕವೃತ್ತಿ, ಸಂಶೋಧನೆಯನ್ನು ತೊರೆದು ಚಳವಳಿಗೆ ಧುಮುಕಿದರು. ಶೂನ್ಯ ಸಂಪಾದನೆ, ಭಾಷಾ ವಿಜ್ಞಾನದ ಮೂಲತತ್ತ್ವಗಳು, ಸಂಶೋಧನಾ ತರಂಗ, ಬಸವಣ್ಣನವರು, ವೀರಗಲ್ಲು ಮತ್ತು ಮಾಸ್ತಿ ಕಲ್ಲುಗಳು, ಶಾಸನಗಳಲ್ಲಿ ಸಂಗೀತ ವಿಚಾರ, ಹೊಸತು-ಹೊಸತು, ವಚನ ಸಾಹಿತ್ಯ, ಕರ್ನಾಟಕ ಸಂಸ್ಕೃತಿ, ಪಾಂಡಿತ್ಯ ರಸ ಮುಂತಾದ ಐವತ್ತಕ್ಕೂ ಹೆಚ್ಚು ಕೃತಿ ರಚನೆ. ಇವರನ್ನು ಅರಸಿ ಬಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ, ಅ.ನ.ಕೃ. ಪ್ರತಿಷ್ಠಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ ಮುಖ್ಯವಾದುವು. ಕನ್ನಡದ ಜನತೆ ಪ್ರೀತಿಯಿಂದ ಅರ್ಪಿಸಿದ ಗೌರವ ಗ್ರಂಥ ‘ಸಂಶೋಧನೆ.’ ಸಂಶೋಧಕರಿಗೆ ಇವರ ಹೆಸರಿನಲ್ಲಿ ಚಿದಾನಂದ ಪ್ರಶಸ್ತಿ. ಇದೇ ದಿನ ಹುಟ್ಟಿದ ಸಾಹಿತಿಗಳು : ಬಿ.ಎಸ್. ಕೇಶವನ್ – ೧೯೦೯-೧೬.೨.೨೦೦೦ ಸಿಂಧುವಳ್ಳಿ ಅನಂತಮೂರ್ತಿ – ೧೯೩೧-೧೩.೮.೯೮ ಮತಿಘಟ್ಟ ಕೃಷ್ಣಮೂರ್ತಿ – ೧೯೧೩ ಜಿ. ಬ್ರಹ್ಮಪ್ಪ – ೧೯೨೪ ಎಲ್.ಆರ್. ಅನಂತರಾಮಯ್ಯ – ೧೯೩೭ ಈಶ್ವರಚಂದ್ರ ಚಿಂತಾಮಣಿ – ೧೯೨೬

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತವು 4 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳ ಏಕದಿನ ಏರಿಕೆಯನ್ನು ದಾಖಲಿಸಿದೆ, ಸಕ್ರಿಯ ಕ್ಯಾಸೆಲೋಡ್ ಇಳಿಕೆ

Thu Mar 10 , 2022
ಗುರುವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಒಂದೇ ದಿನದಲ್ಲಿ 4,184 ಕರೋನವೈರಸ್ ಸೋಂಕುಗಳು ಏರಿಕೆಯಾಗಿದ್ದು, ಒಟ್ಟು COVID-19 ಪ್ರಕರಣಗಳ ಸಂಖ್ಯೆಯನ್ನು 4,29,80,067 ಕ್ಕೆ ತಲುಪಿದೆ, ಆದರೆ ಸಕ್ರಿಯ ಪ್ರಕರಣಗಳು 44,488 ಕ್ಕೆ ಇಳಿದಿದೆ 104 ಹೊಸ ಸಾವುಗಳೊಂದಿಗೆ ಸಾವಿನ ಸಂಖ್ಯೆ 5,15,459 ಕ್ಕೆ ಏರಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಡೇಟಾ ತಿಳಿಸಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.10 ಪ್ರತಿಶತವನ್ನು ಒಳಗೊಂಡಿವೆ, ಆದರೆ […]

Advertisement

Wordpress Social Share Plugin powered by Ultimatelysocial