ವಸಂತ ಕಲ್‍ಬಾಗಲ್ ವಿಸ್ಮಯ ಮೂಡಿಸುವ ಅಪಾರ ಸಾಧನೆಯ ವ್ಯಕ್ತಿ.

ವಸಂತ ಕಲ್ಬಾಗಲ್ ವಿಸ್ಮಯ ಮೂಡಿಸುವ ಅಪಾರ ಸಾಧನೆಯ ವ್ಯಕ್ತಿ. ಒಂದೆಡೆ ಖ್ಯಾತ ಬರಹಗಾರ್ತಿ ಎಂ. ಆರ್. ಕಮಲ Metikurke Ramaswamy Kamala ಹೇಳುತ್ತಾರೆ: “ಈ ‘ವಸಂತ’ ಇದ್ದ ಕಡೆಯೆಲ್ಲ ಸದಾ ವಸಂತ ಮಾಸ, ಇಲ್ಲವಾದರೆ ವಸಂತ ಸ್ಮೃತಿ!”.ವಸಂತ ಕಲ್ಬಾಗಲ್ ನನಗೆ ಕಂಡದ್ದು ಅವರ ಫೇಸ್ಬುಕ್ನಲ್ಲಿನ ನಳನಳಿಸುವ ಕನ್ನಡದ ಬರಹಗಳಿಂದ. ಅವರ ಬಗ್ಗೆ ಅಲ್ಲಲ್ಲಿ ಓದುತ್ತಾ ಹೋದಂತೆ ಇವರ ಬಗ್ಗೆ ಅರಿಯುವುದು ಬರೆಯವುದು ಸುಲಭವಲ್ಲ ಎಂಬ ಅರಿವಂತೂ ಆಯ್ತು. ನಾನು ನನ್ನ ಸೀಮಿತ ಬೊಗಸೆಯಲ್ಲಿ ಎಷ್ಟು ಸಾಧ್ಯವೊ ಹೇಳುತ್ತೇನೆ. ಇದು ಅವರ ಸಾಧನೆಗಳನ್ನು ಇನ್ನಷ್ಟು ಅರಿಯುವಲ್ಲಿ ಹೆಜ್ಜೆಯಾಗಲಿ ಎಂಬುದು ಈ ಬರಹದ ಆಶಯ ಅಷ್ಟೇ. ಅದು ಅವರನ್ನು ಕುರಿತ ಸಂಪೂರ್ಣ ವ್ಯಕ್ತಿ ಚಿತ್ರಣ ಆಗಲಾರದು.ಮೇಲ್ನೋಟಕ್ಕೆ ವಸಂತ ಕಲ್ಬಾಗಲ್ ಅವರು ಇಂದು ನಮಗೆ ಕಾಣುತ್ತಿರುವುದು ಫೇಸ್ಬುಕ್ಕಿನ್ನಲ್ಲಿ ಅಪ್ಯಾಯಮಾನವೆಂಬಂತೆ ಬರೆಯುವವರಾಗಿ. ಆದರೆ, ಅವರು ಸಾಹಿತ್ಯ ಲೋಕದಲ್ಲಿ ವಸಂತಲೋಕವನ್ನು ಕಾಣಿಸಿದವರಷ್ಟೇ ಅಲ್ಲ. ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾದ ಉದ್ಯಮಗಳಲ್ಲಿ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದವರು. ಇಡೀ ವಿಶ್ವವೇ ತಂತ್ರಜ್ಞಾನದ ಅವಕಾಶವಾಗಿ ಕಂಡಿರುವ ನಮ್ಮ ಬೆಂಗಳೂರಿನ ‘ಐಟಿಪಿಎಲ್’ ಅಥವಾ ಅಂತರರಾಷ್ಟ್ರೀಯ ಟೆಕ್ನಾಲಜಿ ಪಾರ್ಕ್ ಎಂಬ ಸ್ಥಾವರವು ಬೃಹತ್ ಸಾಧ್ಯತೆಗಳ ಸಾಕಾರದ ವಸಂತವನವಾಗುವುದರಲ್ಲಿ ಪ್ರಮುಖ ಕಾರ್ಯಮಾಡಿದವರು. ಅಂತರರಾಷ್ಟ್ರೀಯ ಸಂಸ್ಥೆಗಳ ಅಭಿವೃದ್ಧಿಗೆ ಅವಶ್ಯಕವಾದ ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರಕ್ಕೆ ಹೊಸ ಹೊಸ ರೀತಿಯ ನೀಲಿ ನಕ್ಷೆಗಳನ್ನು ರೂಪಿಸಿ – ಕಾರ್ಯರೂಪಕ್ಕೆ ತಂದು ಯಶಸ್ಸು ಗಳಿಸಿದವರು. ಅವರ ‘Monday Blues’ ಪರಿಕಲ್ಪನೆ ‘ಸಖತ್ ಸೋಮವಾರ’ ಎಂದೇ ಜನಪ್ರಿಯವಾಗಿ ಹೋಯ್ತು.ಉದ್ಯಮಗಳು ಮತ್ತು ಉದ್ಯೋಗಿಗಳ ಹಿತರವೆರಡನ್ನೂ ಪೂರಕವಾಗಿಸುವ ‘ಮಾನವ ಸಾಮರ್ಥ್ಯ ಪೋಷಣೆ ಮತ್ತು ಮಾನವೀಯ ಸೌಹಾರ್ದ ಸಂಬಂಧ ವಾತಾವರಣ ನಿರ್ಮಾಣ’ (Performance Governance System and Human Relations) ಕ್ಷೇತ್ರದಲ್ಲಿ ವಸಂತ ಕಲ್ಬಾಗಲ್ ಅವರ ಸಾಧನೆ ವಿಶಿಷ್ಡವಾದದ್ದು. 2004-2005ರಲ್ಲಿ ಅವರಿಗೆ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿನ ಸೃಜನಶೀಲ ಕಾರ್ಯಪದ್ಧತಿಗಳ ಅನುಷ್ಠಾನಕ್ಕಾಗಿ ‘ಪಿಜಿಎಸ್ ಅಸ್ಕರ್ ಡೆಕ್ಕನ್ ಹೆರಾಲ್ಡ್’ ಪ್ರಶಸ್ತಿ ಸಂದಿತು. ಐಟಿಪಿಎಲ್‌ನಲ್ಲಿ ‘ನೂನ್ ಟೈಮ್ ಬಿಂಜ್’ ಮತ್ತು ‘ಮೂನಲೈಟಿಂಗ್’ ಸಹಾ ಅವರ ಕಲ್ಪನೆಯ ಕೂಸು.
ವಸಂತ ಕಲ್ಬಾಗಲ್ ‌ ಅವರ ಜನ್ಮದಿನ ಫೆಬ್ರವರಿ 19. ಅವರ ತಾಯಿ ಜಯಾ ಕಲ್ಬಾಗಲ್. ತಂದೆ ಎನ್.ಜಿ. ಕಲ್ಬಾಗಲ್. ಇವರು ಕರ್ನಾಟಕದ ಅಯ್ಯಂಗಾರ್ ಸಂಪ್ರದಾಯಸ್ಥ ಕುಟುಂದವರಾಗಿರುವಾಗ ಕಲಬಾಗಲ್ ಎಂದು ಹೆಸರು ಬಂದದ್ದು ಹೇಗೆ? ಸಿರ್ಸಿಯಲ್ಲಿ ವೈದ್ಯರಾಗಿದ್ದ ಇವರ ಅಜ್ಜ, ಅಲ್ಲಿರುವ ಪ್ರತಿಯೊಬ್ಬರಿಗೂ ವಿನೋದಪೂರ್ಣ ಉಪನಾಮ ಸೃಷ್ಟಿಸುತ್ತಿದ್ದರಂತೆ. ಮೆಲ್ಕೋಟೆಯಲ್ಲಿ ಅವರ ಪೂರ್ವಜರ ಸ್ಥಳದಲ್ಲಿ ಕಲ್ಲಿನ ಬಾಗಿಲು ಇದ್ದುದರಿಂದ ಅವರು ತಮ್ಮ ಹೆಸರಿಗೆ – ಕಲ್ಬಾಗಲ್ ಎಂದು ಸೇರಿಸಿದರಂತೆ. ಇವರ ಕುಟುಂಬದಲ್ಲಿನ ಹಿರಿಯ ಸಂಬಂಧಿಕರಲ್ಲಿ ಪ್ರಧಾನಿ ನೆಹರೂ ಅವರ ಕಾರ್ಯದರ್ಶಿಗಳೂ, ರಿಜರ್ವ್ ಬ್ಯಾಂಕಿನ ಗೌರ್ನರರೂ ಆಗಿದ್ದ ಎಚ್.ವಿ. ಆರ್. ಅಯ್ಯಂಗಾರ್, ಪು. ತಿ. ನರಸಿಂಹಾಚಾರ್ಯ ಅಂತ ಮಹನೀಯರಿದ್ದಾರೆ. ಇವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕುಟುಂಬದ ಆಪ್ತ ಸಾನ್ನಿಧ್ಯವನ್ನೂ ಅನುಭವಿಸಿ ಬೆಳೆದವರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಲಾಯ ತಸ್ಮೈ ನಮಃ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಸವಾಲು ಹಾಕಿದ್ದಾರೆ.

Sun Feb 19 , 2023
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ಯುದ್ಧ ತಾರಕಕ್ಕೇರಿದೆ. ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಟಕ್ಕರ್​ ಕೊಡಲು ಸಾಹುಕಾರ್ ಸಜ್ಜಾಗಿದ್ರೆ ಅದು ಬೆಂಕಿ ಜೊತೆ ಸರಸವಾಡಿದಂತೆ ಎಂದು ಹೆಬ್ಬಾಳ್ಕರ್ ಸವಾಲಿಗೆ ಸವಾಲು ಹಾಕುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕ್ರಮವನ್ನು ವಿರೋಧಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶಿವಾಜಿ ಪ್ರತಿಮೆ ಅನಾವರಣ ರಾಜ್ಯ ಸರ್ಕಾರದ ವತಿಯಿಂದಲೇ ನಡೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮಾರ್ಚ್ 5ರ ಕಾರ್ಯಕ್ರಮದ ವಿರುದ್ಧ […]

Advertisement

Wordpress Social Share Plugin powered by Ultimatelysocial