ಶಾಲೆಗೆ ಒಂದು ಎಕರೆ ಜಮಿನು ದಾನಿ ನೀಡಿದ ಸುರೇಶ ಡಬಾಲಿ ಕುಟುಂಬಸ್ಥರು.

ಲಕ್ಷ್ಮೇಶ್ವರ : ಸುರೇಶ ಸಿದ್ದರಾಮಪ್ಪ ಡಬಾಲಿ ಕುಟುಂಬಸ್ಥರು ಸರಕಾರಿ ಕಿರಿಯ ಪ್ರಾಥಮಿಕ ಬೆಳಘಟ್ಟಿ ಶಾಲೆಗೆ ಒಂದು ಎಕರೆ ಶಾಲೆಗೆ ಅವಶ್ಯವಾಗಿರುವಂತಹ ಜಮೀನನ್ನು ದೇಣಿಗೆಯಾಗಿ ನೀಡಿದ್ದಾರೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.ಜಮೀನಿನ ಮಾಲಕರಾದ ಸುರೇಶ ಡಬಾಲಿ ಮತ್ತು ಅವರ ಪುತ್ರ ಡಾಕ್ಟರ ಅರುಣ ಡಬಾಲಿ ಮಾತನಾಡಿ ಮಕ್ಕಳಿಗೆ ಆಟದ ಮೈದಾನ ಇಲ್ಲದಿರುವು ನನ್ನ ಗಮನಕ್ಕೆ ಬಂತು, ಗ್ರಾಮದ ಹಿರಿಯರು ನನ್ನನ್ನು ಕೇಳಿಕೊಂಡಾಗ ಬಹಳ ಸಂತೋಷದಿಂದ ಒಪ್ಪಿಗೆ ನೀಡಿ ಜಮೀನನ್ನು ದೇಣಿಗೆ ನೀಡಿದ್ದೆವೆ. ಶಾಲೆಯ ಅಭಿವೃದ್ಧಿ ಜೊತೆಗೆ ಮಕ್ಕಳ ಉಜ್ವಲ ಭವಿಷ್ಯಕೋಸ್ಕರ ನಮ್ಮ ಕುಟುಂಬಸ್ಥರು ಶಾಲೆಗಳಗೆ ಹಿಂದಿನಿಂದಲೂ ಬಹಳಷ್ಟು ಸಹಾಯ ಸಹಕಾರ ನೀಡುತ್ತಾ ಬಂದಿದ್ದಾರೆ ಅದರಂತೆ ಬೆಳಗಟ್ಟಿ ಶಾಲೆಗೆ ಕೂಡಿಕೊಂಡಿರುವಂತ ಒಂದು ಎಕರೆ ಜಮೀನನ್ನು ದೇಣಿಗೆಯಾಗಿ ನೀಡಲು ಅಲ್ಲದೆ ಮಕ್ಕಳ ಶೈಕ್ಷಣಿಕ ಕಲ್ಯಾಣ ಗೋಸ್ಕರ ನೀಡುವಂತದ್ದು ನಮಗೆ ಬಹಳಷ್ಟು ಹೆಮ್ಮೆ ತಂದಿದೆ ಎಂದರು.ಗ್ರಾಮಸ್ಥರ ಸಮ್ಮುಖದಲ್ಲಿ ಒಪ್ಪಿಗೆಯನ್ನು ನೀಡಿ ಇಂದಿನಿಂದಲೇ ಒಂದು ಎಕರೆ ಜಮೀನು ಶಾಲೆಗೆ ಬಿಟ್ಟು ಕೊಡುತ್ತೇನೆ ಎಂದರಲ್ಲದೆ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಎಲ್ಲ ಪ್ರಕ್ರಿಯೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಒಪ್ಪಿಗೆಯನ್ನು ನೀಡಿರುತ್ತಾರೆ ಎಂದರು.ಇದೇ ಸಂದರ್ಭದಲ್ಲಿ ಗ್ರಾಮದವತಿಯಿಂದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎಂ. ಮುಂದಿನಮನಿ ಮಾತನಾಡಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರಲ್ಲದೇ ದಾನಿಗಳನ್ನು ನೆನೆಸಿ ಇಂತಹ ಜಮಿನು ದಾನಿಗಳೂ ಶೈಕ್ಷಣಿಕ ಪ್ರಗತಿಗೆ ಕಾರಣರಾಗುತ್ತಾರೆಂದು ಮಕ್ಕಳ , ಗ್ರಾಮದ ಭವಿಷ್ಯಕ್ಕೆ ಕಾರಣರಾಗುತ್ತಿರುವ ಇವರಿಗೆ ಶಿಕ್ಷಣ ಇಲಾಖೆ ಹಾಗೂ ಗ್ರಾಮದವರು ಚಿರರುಣಿ ಆಗಲಿದೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಪಿ.ಆರ್.ಆಚಾರ‍್ಯ ಚಿತ್ರಕಲಾವಿದ, ನಾಟಕಕಾರ ಹೀಗೆ ಬಹುಮುಖ ಪ್ರತಿಭೆಯಾಗಿ ಹೆಸರಾದವರು.

Sat Dec 24 , 2022
    ಪಿ.ಆರ್.ಆಚಾರ‍್ಯ ಚಿತ್ರಕಲಾವಿದ, ಸಾಹಿತಿ, ನಾಟಕಕಾರ ಹೀಗೆ ಬಹುಮುಖ ಪ್ರತಿಭೆಯಾಗಿ ಹೆಸರಾದವರು. ಕಲಾಲೋಕದಲ್ಲಿ ಪ್ರಸಿದ್ಧಿಯೊಡನೆ ‘ಆರ್ಯ’ ಎಂಬ ಹೆಸರಿನಿಂದ ಅನೇಕ ರೀತಿಯ ಬರಹಗಳನ್ನು ಮಾಡಿದರು. ಪಿ. ಆರ್. ಆಚಾರ‍್ಯ 1945ರ ಡಿಸೆಂಬರ್ 7ರಂದು ಉಡುಪಿಯಲ್ಲಿ ಜನಿಸಿದರು. ತಂದೆ ಪಿ. ವಿಠಲಾಚಾರ‍್ಯ. ತಾಯಿ ರುಕ್ಮಿಣಿ. ಪ್ರಾರಂಭಿಕ ಶಿಕ್ಷಣ ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ನಡೆಯಿತು. ಮುಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಸಂಸ್ಕೃತ ಎಂ.ಎ. ಪದವಿ ಪಡೆದರು. ಹಿಂದಿ ಭಾಷೆಯಲ್ಲಿ […]

Advertisement

Wordpress Social Share Plugin powered by Ultimatelysocial