ಪಿ.ಆರ್.ಆಚಾರ‍್ಯ ಚಿತ್ರಕಲಾವಿದ, ನಾಟಕಕಾರ ಹೀಗೆ ಬಹುಮುಖ ಪ್ರತಿಭೆಯಾಗಿ ಹೆಸರಾದವರು.

 

 

ಪಿ.ಆರ್.ಆಚಾರ್ಯ ಚಿತ್ರಕಲಾವಿದ, ಸಾಹಿತಿ, ನಾಟಕಕಾರ ಹೀಗೆ ಬಹುಮುಖ ಪ್ರತಿಭೆಯಾಗಿ ಹೆಸರಾದವರು. ಕಲಾಲೋಕದಲ್ಲಿ ಪ್ರಸಿದ್ಧಿಯೊಡನೆ ‘ಆರ್ಯ’ ಎಂಬ ಹೆಸರಿನಿಂದ ಅನೇಕ ರೀತಿಯ ಬರಹಗಳನ್ನು ಮಾಡಿದರು.
ಪಿ. ಆರ್. ಆಚಾರ್ಯ 1945ರ ಡಿಸೆಂಬರ್ 7ರಂದು ಉಡುಪಿಯಲ್ಲಿ ಜನಿಸಿದರು. ತಂದೆ ಪಿ. ವಿಠಲಾಚಾರ್ಯ. ತಾಯಿ ರುಕ್ಮಿಣಿ. ಪ್ರಾರಂಭಿಕ ಶಿಕ್ಷಣ ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ ನಡೆಯಿತು. ಮುಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಸಂಸ್ಕೃತ ಎಂ.ಎ. ಪದವಿ ಪಡೆದರು. ಹಿಂದಿ ಭಾಷೆಯಲ್ಲಿ ರತ್ನ ಪರೀಕ್ಷೆ ಉತ್ತೀರ್ಣತೆ ಗಳಿಸಿದರು.
ಪಿ. ಆರ್. ಆಚಾರ್ಯರು ಎಸ್.ಎಸ್.ಎಲ್.ಸಿ. ಪಾಸಾಗುತ್ತಿದ್ದಂತೆ ಜೀವನದ ಸಾರ್ಥಕ್ಯದ ಹುಡುಕಾಟದಲ್ಲಿ ಆಯ್ದುಕೊಂಡದ್ದು ಉಡುಪಿಯ ಅಷ್ಟಮಠಗಳಲ್ಲೊಂದಾದ ಶಿರೂರು ಮಠದ ಸ್ವಾಮೀಜಿ ಪಟ್ಟವನ್ನು. ಜಡ್ಡು ಕಟ್ಟಿದ ಸಂಪ್ರದಾಯವಿದು ಎಂಬ ಭಾವ ಮೂಡಿ ಪೀಠ ತ್ಯಾಗ ಮಾಡಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿಯಾದರು.
ಪಿ. ಆರ್. ಆಚಾರ್ಯ ಅವರಿಗೆ ಚಿತ್ರಕಲೆ ಮತ್ತು ಸಾಹಿತ್ಯ ಪ್ರೀತಿಯ ಪ್ರಕಾರಗಳಾಗಿದ್ದವು. ಗುರುವಿಲ್ಲದೆ ಗೆರೆ ಎಳೆದು ಚಿತ್ರಕಲೆಯನ್ನು ಸಾಧಿಸಿದರು. ಮನೋಹರ ಗ್ರಂಥಮಾಲೆಯ ಹಲವಾರು ಕೃತಿಗಳ ರಕ್ಷಾಪುಟಗಳಿಗೆ ಕಲಾ ರಚನೆ ಮಾಡಿದರು.
ಧಾರವಾಡವನ್ನು ತಮ್ಮ ಕರ್ಮಭೂಮಿಯಾಗಿ ಮಾಡಿಕೊಂಡ ಆಚಾರ್ಯ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳು ಮಂಗಳೂರು, ಬೆಂಗಳೂರು, ಮುಂಬಯಿ, ಜರ್ಮನಿ, ಇಟಲಿ, ಪ್ಯಾರಿಸ್, ನೆದರ್ ಲ್ಯಾಂಡ್ ಮತ್ತು ಫಿನ್ಲೆಂಡ್‌ಗಳಲ್ಲಿ ಅನೇಕ ಬಾರಿ ನಡೆದವು. ಅವರು ಇತರರೊಡನೆಯೂ ಮುಂಬಯಿ, ಜರ್ಮನಿ, ಬೆಂಗಳೂರಿನಲ್ಲಿ ಹಲವಾರು ಬಾರಿ ಕಲಾ ಪ್ರದರ್ಶನಗಳಲ್ಲಿ ಪಾಲ್ಗೊಂಡರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಟಿ. ಎನ್. ಸೀತಾರಾಂ ಪತ್ರಕರ್ತ, ಕತೆಗಾರ, ನಾಟಕಕಾರ, ಚಿತ್ರ ನಟ.

Sat Dec 24 , 2022
    ಸದಭಿರುಚಿ, ಸೃಜನಶೀಲತೆ, ಜನಪ್ರಿಯತೆ, ಪ್ರಗತಿಪರ ಚಿಂತನೆ, ಪ್ರಯೋಗಶೀಲತೆ ಇವೆಲ್ಲ ಒಟ್ಟಿಗೆ ಮೇಳೈಸಲು ಸಾಧ್ಯವೇ ಎಂಬ ಪ್ರಶ್ನೆಗೆ ನಮ್ಮ ಕನ್ನಡಿಗರ ರೆಡೀಮೇಡ್ ಉತ್ತರವಾಗಿ ಸದಾ ನೆನಪಿಗೆ ಬರುವವರು ಕಿರುತೆರೆಯ ಮೂಲಕ ಮನೆ ಮನೆಗಳ, ಮನಗಳ ಆಪ್ತ ಮಾತಾಗಿರುವ ಟಿ. ಎನ್. ಸೀತಾರಾಂ. ತಳಗವಾರ ನಾರಾಯಣರಾವ್ ಸೀತಾರಾಂ ಅವರು 1948ರ ಡಿಸೆಂಬರ್ 6ರಂದು ಜನಿಸಿದರು. ಇಂದು ಕಿರುತೆರೆಯ ಧಾರಾವಾಹಿಗಳ ನಿರ್ಮಾಣ ಮತ್ತು ನಿರ್ದೇಶನಗಳ ಮೂಲಕ ಜನಪ್ರಿಯರಾಗಿರುವ ಸೀತಾರಾಂ ಪತ್ರಕರ್ತ, ಕತೆಗಾರ, […]

Advertisement

Wordpress Social Share Plugin powered by Ultimatelysocial