ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಷ್ಯಾ-ಉಕ್ರೇನ್ ಪರಿಸ್ಥಿತಿ ಭಾರತ,

 

ನವದೆಹಲಿ,ಏ.8-ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಷ್ಯಾ-ಉಕ್ರೇನ್ ಪರಿಸ್ಥಿತಿ ಭಾರತ, ಚೀನಾ ನಡುವೆ ಸಂಭವಿಸಲಿದೆ ಎಂದು ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೊನೆಟಸ್ಕ್ ಮತ್ತು ಲೂಹಾನ್‍ಸಕ್ ಪ್ರಾಂತ್ಯಗಳನ್ನು ಉಕ್ರೇನ್‍ನ ಭಾಗ ಎಂದು ಒಪ್ಪಿಕೊಳ್ಳಲು ರಷ್ಯಾ ನಿರಾಕರಿಸುತ್ತಿತ್ತು.

ಈಗ ಅದೇ ಕಾರಣಕ್ಕೆ ಆಕ್ರಮಣ ಮಾಡಿದೆ. ಇದರ ಹಿಂದೆ ನ್ಯಾಟೋ-ಉಕ್ರೇನ್-ಅಮೆರಿದ ನಡುವಿನ ಮೈತ್ರಿಯನ್ನು ಮುರಿಯುವ ಉದ್ದೇಶವೂ ಇದೆ.

ಅದೇ ಮಾದರಿಯಲ್ಲಿ ಚೀನಾ, ಭಾರತದ ವಿಷಯದಲ್ಲಿ ನಡೆದುಕೊಳ್ಳುತ್ತಿದೆ ನಮ್ಮ ನೆಲೆಯಾಗಿರುವ ಲಡಾಕ್ ಅರುಣಾಚಲ ಪ್ರದೇಶವನ್ನು ಭಾರತೀಯ ಪ್ರಾಂತ್ಯ ಎಂದು ಒಪ್ಪಿಕೊಳ್ಳಲು ಚೀನಾ ನಿರಾಕರಿಸುತ್ತಿದೆ. ಎರಡೂ ಭಾಗಗಳಲ್ಲಿ ತನ್ನ ಸೇನೆಯನ್ನು ನಿಯೋಜಿಸಿದೆ. ಭಾರತೀಯ ಸರ್ಕಾರ ಈ ವಿಷಯವನ್ನು ನಿರ್ಲಕ್ಷಿಸುತ್ತಿದೆ.

ಉಕ್ರೇನ್ ರಷ್ಯಾ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದಿದ್ದಾರೆ. ನಮ್ಮ ಸರ್ಕಾರ ವಾಸ್ತವವನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ. ನಾನು ಮೊದಲಿನಿಂದಲೂ ವಾಸ್ತವವನ್ನು ಒಪ್ಪಿಕೊಳ್ಳಿ ಎಂದು ಹೇಳುತ್ತಲೇ ಇದ್ದೇನೆ. ಒಂದು ವೇಳೆ ಅವರು ಒಪ್ಪಿಕೊಳ್ಳದಿದ್ದರೆ ಸ್ವಯಂ ಸಿದ್ದತೆ ಕೈಗೊಳ್ಳುವಲ್ಲಿ ವಿಫಲರಾಗುತ್ತಾರೆ. ಪರಿಸ್ಥಿತಿ ದುರ್ಬಲವಾಗ ಪ್ರತಿಕ್ರಿಯಿಸಲು ಅಸಾಧ್ಯವಾಗಬಹುದು ಎಂದು ರಾಹುಲ್ ಎಚ್ಚರಿಸಿದ್ದಾರೆ.

ಕಳೆದ ಎರಡುಮೂರು ವರ್ಷಗಳಿಂ ಮಾಧ್ಯಮ, ಸಂಸ್ಥೆಗಳು, ಬಿಜೆಪಿ ನಾಯಕರು, ಸಂಘ ಪರಿವಾರ, ಗುಪ್ತ ಕಾರ್ಯಸೂಚಿ ಯನ್ನು ಹೊಂದಿವೆ. ನಿಧಾನವಾಗಿ ಸತ್ಯಾಂಶ ಹೊರಬರುತ್ತಿದೆ. ಶ್ರೀಲಂಕಾದಲ್ಲೂ ಇದೇ ಆಗಿತ್ತು. ಈಗ ಅಲ್ಲಿ ಸತ್ಯ ಹೊರಬಂದಿದೆ. ಭಾರತದಲ್ಲೂ ಅದೇ ರೀತಿಯ ಸತ್ಯ ನಿಧಾನವಾಗಿ ಹೊರಬರುತ್ತದೆ. ಈ ಮೊದಲು ಭಾರತದಲ್ಲಿ ಒಂದೇ ದೇಶ ಇತ್ತು.

ಈಗ ಇವರು ದೇಶದೊಳಗೆ ಬೇರೆ ಬೇರೆ ದೇಶಗಳನ್ನು ವಿಭಜಿಸಿದ್ದಾರೆ. ಒಬ್ಬರಿಗೊಬ್ಬರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ವಿಭಜನೆ ಮತ್ತು ವ್ಯತ್ಯಾಸಗಳೊಂದಿಗೆ ಗುಂಪುಗಳು ನಿರ್ಮಾಣವಾಗುತ್ತಿವೆ. ಇದು ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ, ಉದ್ಯೋಗ ನಷ್ಟದ ಬಗ್ಗೆ ಚರ್ಚೆಯಾಗುತ್ತಿಲ್ಲ.

ಅಧಿಕಾರಿಗಳು, ಆರ್ಥಿಕ ತಜ್ಞರು ಬೇರೆ ದೇಶಗಳನ್ನು ನೋಡಿ ಆರ್ಥಿಕತೆಯನ್ನು ವಿಶ್ಲೇಷಿಸುತ್ತಿದ್ದಾರೆ. ಪ್ರಧಾನಿ ಕೂಡ ನಾವು ಅವರಂತಾಗಬೇಕೆಂಬ ಮಾತುಗಳನ್ನು ಆಡುತ್ತಿದ್ದಾರೆ. ಮೊದಲು ನಾವು ಇಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥೈಸಿಕೊಳ್ಳಲಾಗಿದೆ. ಈಗಾಗಲೇ ಬೆನ್ನು ಮೂಳೆ ಮುರಿಯಲಾಗಿದೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಭಯನಾಯಕ ಪರಿಣಾಮಗಳನ್ನು ಅನುಸರಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದರು. ಇದೇ ವೇಳೆ ಆರ್‍ಜೆಡಿ ನಾಯಕರ್ ಶರದ್ ಯಾದವ್ ಮತ್ತು ರಾಹುಲ್ ಗಾಂಧಿ ಪರಸ್ಪರ ಭೇಟಿಯಾಗಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ನಾಯಕರು ಈಗ ಪ್ರತಿಭಟನೆ ಮಾಡ್ತಿದ್ದಾರೆ.!

Fri Apr 8 , 2022
ಬೆಂಗಳೂರು: ಸರಿಯಾದ ರೀತಿಯಲ್ಲಿ ಕಾಂಗ್ರೆಸ್ ನಾಯಕರು ( Congress Leader ) ನಡೆದುಕೊಂಡಿದ್ರೆ, ಅಪ ಮಾರ್ಗದಲ್ಲಿ ಬಿಜೆಪಿ ಸರಕಾರ ಬರ್ತಿರಲಿಲ್ಲ. ಈ ಸರ್ಕಾರ ಬರಲು BJPಯಷ್ಟೆ ಕಾಂಗ್ರೆಸ್ ನಾಯಕರ ಕೊಡುಗೆ ಇದೆ. ನಾನು ಮುಖ್ಯ ಮಂತ್ರಿ ಆದಾಗ ವೆಸ್ಟ್ ಎಂಡ್ ನಲ್ಲಿ ಇದ್ದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಈಗ ಪ್ರತಿಭಟನೆ ಮಾಡ್ತಿದ್ದಾರೆ. ಈ ಸರ್ಕಾರ ಬರಲು ಕಾಂಗ್ರೆಸ್ ನಾಯಕರು ಕಾರಣ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ  […]

Advertisement

Wordpress Social Share Plugin powered by Ultimatelysocial