ಕಾಂಗ್ರೆಸ್ ನಾಯಕರು ಈಗ ಪ್ರತಿಭಟನೆ ಮಾಡ್ತಿದ್ದಾರೆ.!

ಬೆಂಗಳೂರು: ಸರಿಯಾದ ರೀತಿಯಲ್ಲಿ ಕಾಂಗ್ರೆಸ್ ನಾಯಕರು ( Congress Leader ) ನಡೆದುಕೊಂಡಿದ್ರೆ, ಅಪ ಮಾರ್ಗದಲ್ಲಿ ಬಿಜೆಪಿ ಸರಕಾರ ಬರ್ತಿರಲಿಲ್ಲ. ಈ ಸರ್ಕಾರ ಬರಲು BJPಯಷ್ಟೆ ಕಾಂಗ್ರೆಸ್ ನಾಯಕರ ಕೊಡುಗೆ ಇದೆ. ನಾನು ಮುಖ್ಯ ಮಂತ್ರಿ ಆದಾಗ ವೆಸ್ಟ್ ಎಂಡ್ ನಲ್ಲಿ ಇದ್ದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಈಗ ಪ್ರತಿಭಟನೆ ಮಾಡ್ತಿದ್ದಾರೆ. ಈ ಸರ್ಕಾರ ಬರಲು ಕಾಂಗ್ರೆಸ್ ನಾಯಕರು ಕಾರಣ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ   ಕಾಂಗ್ರೆಸ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸದಾ ಕಾಲ ಬಿಜೆಪಿ ಸರಕಾರ ಇರಲ್ಲ, ಅಧಿಕಾರಿಗಳು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಿ, BJP ಸಚಿವರು, ಶಾಸಕರು ನಿಮಗೆ ಸಂಬಳ ಕೊಡಲ್ಲ. ಬಿಜೆಪಿ ಗುಲಾಮರಾಗಿ ಕೆಲಸ ಮಾಡಬೇಡಿ, ನಾನೂ ಮುಖ್ಯ ಮಂತ್ರಿ ಆಗಿದ್ದವನು. ಶೋಭಯಾತ್ರೆಗೆ ಅನುಮತಿ ಇದೆ, ನಮಗೆ ಗಾಂಧಿ ಪ್ರತಿಮೆ ಗೆ ಹಾರ ಹಾಕಿ, ಮೆರವಣಿಗೆಗೆ ಅನುಮತಿ ಇಲ್ಲ ಎಂದು ಕಿಡಿಕಾರಿದರು.

ನಿಮ್ಮ ಸರ್ಕಾರದ ಕಳಪೆ ಕಾಮಗಾರಿಯಿಂದ ನಾಗರೀಕರು ಸಾಯ್ತಿದ್ದಾರೆ. ಮೋಹನದಾಸ್ ಪೈ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. BJPಯ ಹಣೆಬರಹ ಎಲ್ಲಿಗೆ ಬಂದಿದೆ ನೋಡಿ. ಈ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಚೀಮಾರಿ ಕೂಡ ಹಾಕಿದೆ. ಯಾವ ಮೇಕೆದಾಟಿನ ಪಾದಯಾತ್ರೆ ಮಾಡ್ತಿರಾ…..!? ಬೆಂಗಳೂರಿನ ಜನ ಬುದ್ದಿವಂತರಾಗದಿದ್ದಲ್ಲಿ ಕುಡಿಯುವ ನೀರು ಸಿಗಲ್ಲ ಎಂದರು.

ಯಾವ ವಿಶ್ವ ಹಿಂದೂ ಪರಿಷತ್ತು,? RSS? ನಮ್ಮನ್ನ ದೇಶ ದ್ರೋಹಿಗಳು ಅಂತೀರಾ? ಹಲಾಲ್ ಮಾಂಸ ತಿನ್ಬೇಡಿ ಅಂತಿರ? ಹಸಿರು ಟವಲ್ ಹಾಕಿಕೊಂಡು ಬನ್ನಿ ನಾವೂ ಬರ್ತಿವಿ. ಬಿಗ್ ಬುಲೆಟಿನ್ ಅಂತೆ, ನೀವು ಒಬ್ಬರೆ ಏನ್ರೀ ದೇಶಕ್ಕೆ ಬುದ್ದಿ ಹೇಳುವವರು..? ಎಷ್ಟು ದಿನ ಚಡ್ಡಿ ಹಾಕಿದ್ರೋ ಗೋತ್ತಿಲ್ಲ. RSS ಅಂತ ಹೇಳಿ ನನಗೆ ಬುದ್ದಿ ಹೇಳಲು ಬರ್ತಾರೆ. ಬಿಗ್ ಬುಲೆಟ್ ಇಂದ ಜನರ ಕಷ್ಟಗಳು ಪರಿಹಾರ ಆಗಲ್ಲ. ಬೆಲೆ ಏರಿಕೆ ಬಗ್ಗೆ ಬಿಗ್ ಬುಲೆಟಿನ್ ನಲ್ಲಿ ಮಾತಾಡಿ. ನಮ್ಮ ಗಳನ್ನ ಪ್ರಶ್ನೆ ಮಾಡ್ತಿರಾ? ಯಾವುದೋ ಮತಗಳ ಓಲೈಕೆಗಾಗಿ ನಾನು ಮಾತಾಡ್ತಿಲ್ಲ ಎಂಬುದಾಗಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿನ ಎಲ್‍ಪಿಜಿ ಬೆಲೆ ಜಗತ್ತಿನಲ್ಲಿಯೇ ಗರಿಷ್ಠ:

Fri Apr 8 , 2022
ಹೊಸದಿಲ್ಲಿ: ದೇಶೀಯ ಮಾರುಕಟ್ಟೆಯಲ್ಲಿ ಆಯಾಯ ದೇಶಗಳ ಕರೆನ್ಸಿಗಳ ಖರೀದಿ ಸಾಮರ್ಥ್ಯವನ್ನು ಪರಿಗಣಿಸಿದರೆ, ಭಾರತದಲ್ಲಿ ತಲಾ ಲೀಟರ್ ಎಲ್‍ಪಿಜಿ ಬೆಲೆ ಜಗತ್ತಿನಲ್ಲಿಯೇ ಅತ್ಯಧಿಕವಾಗಿದೆ. ಅಂತೆಯೇ ಗರಿಷ್ಠ ಪೆಟ್ರೋಲ್ ಬೆಲೆಯಲ್ಲಿ ಭಾರತ ಜಗತ್ತಿನಲ್ಲಿಯೇ ಮೂರನೇ ಸ್ಥಾನದಲ್ಲಿದ್ದರೆ ಡೀಸೆಲ್ ಬೆಲೆ ಜಗತ್ತಿನಲ್ಲಿಯೇ ಗರಿಷ್ಠ ಬೆಲೆಗಳಲ್ಲಿ ಎಂಟನೇ ಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ. 54 ದೇಶಗಳ ಎಲ್‍ಪಿಜಿ ಬೆಲೆಗಳನ್ನು ಪರಿಗಣಿಸಿದಾಗ ಭಾರತದಲ್ಲಿ ತಲಾ ಲೀಟರ್ ಬೆಲೆ 3.5 ಡಾಲರ್ ಆಗಿದ್ದು ಇದು ಗರಿಷ್ಠವಾಗಿದ್ದರೆ ನಂತರದ ಅತ್ಯಧಿಕ […]

Advertisement

Wordpress Social Share Plugin powered by Ultimatelysocial