ದೇವೆಗೌಡರನ್ನು ಕುಂತಂತ್ರದಿಂದ ಸೋಲಿಸಿದ್ದು ನಂಬಿಕೆಗೆ ಮಾಡಿದ ದ್ರೋಹ :

ಕುಣಿಗಲ್, ಮೇ 1- ಜಿಲ್ಲಾಗೆ ಹೇಮಾವತಿ ನೀರು ಹರಿಯಲು ಪ್ರಮುಖ ಕಾರಣರಾದ ದೇವೆಗೌಡರನ್ನು ಕುತಂತ್ರದಿಂದ ಸೋಲಿಸಿದ್ದು ನಂಬಿಕೆಗೆ ಮಾಡಿದ ದ್ರೋಹ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಜಿ.ಕೆ.ಬಿ.ಎಂ.ಎಸ್ ಶಾಲಾ ಮೈದಾನದಲ್ಲಿ ಜನತಾ ಜಲಾಧಾರೆ ಕಾರ್ಯಕ್ತಮ ಉದ್ಘಾಟಿಸಿ ಮಾತನಾಡಿ, 1962 ರಿಂದ 2022 ರವರೆಗಿನ ಸುದೀರ್ಘ ಹೋರಾಟ ನಡೆಸಿ ನೀರಾವರಿಗೆ ರಾಜ್ಯದಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ರಾಜ್ಯದ ಉಳಿವಿಗಾಗಿ ತಮ್ಮ ಇಳಿ ವಯಸ್ಸಿನಲ್ಲಿ ಶ್ರಮಿಸುತಿದ್ದಾರೆ. ಆದ್ದರಿಂದ ಜೆ.ಡಿ.ಎಸ್. ಪಕ್ಷವನ್ನು ಸಂಪೂರ್ಣ ಬಹುಮತದೊಂದಿಗೆ ಅವಕಾಶ ಕೊಡಿ ಎಂದು ಮನವಿ ಮಾಡಿ ಕೊಂಡರು.

ರಾಜ್ಯದ ಲ್ಲಿ ಸರ್ಕಾರ ವಿಧಾನಸೌಧವನ್ನು ಭ್ರಷ್ಟಾಚಾರದಿಂದ ಕಲುಷಿತಗೊಳಿಸಿದ್ದು ಈ ದೇಶ ಮತ್ತು ರಾಜ್ಯವನ್ನಾಳಿದ ಬಿ.ಜೆ.ಪಿ. ಹಾಗೂ ಕಾಂಗ್ರೆಸ್ ಭ್ರಷ್ಟಾಚಾರ ಹುಟ್ಟು ಹಾಕಿದ ಕೂಸುಗಳು ಅದಕ್ಕಾಗಿ ಬಡವರ , ದೀನರ, ರೈತರ ಉಳಿವಿಗಾಗಿ ಜೆ.ಡಿ.ಎಸ್ ನನ್ನು ಬೆಂಬಲಿಸಿ ಎಂದರು.

ಪ್ರಾಮಾಣಿಕ ರಾಜಕಾರಣಿ, ಡಿ.ನಾಗರಾಜಣ್ಣನವರು ನಮ್ಮ ತಂದೆಯ ಸಮಕಾಲೀನರು ಅವರದ್ದು, ಕೂಡ ಇದು ಕೊನೆಯ ಚುನಾವಣೆ ಆದ್ದರಿಂದ ಅವರ ಮಕ್ಕಳು ಟಿಕೆಟ್ ಗಾಗಿ ಪೈಪೋಟಿ ನಡೆಸದೆ ನಿಮ್ಮ ತಂದೆಯವರನ್ನು ಗೆಲ್ಲಿಸಿಕೊಳ್ಳಿ ಅವರನ್ನು ಮಂತ್ರಿ ಯನ್ನಾಗಿ ನೋಡಿ ಎಂದರು.
ಯುವ ಜೆ.ಡಿ.ಎಸ್.ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಮಾಜಿ ಸಚಿವ ಡಿ.ನಾಗರಾಜಯ್ಯ ಮಾಜಿ ಶಾಸಕ ಎಮï.ಟಿ.ಕೃಷ್ಣಪ್ಪ, ಸುಧಾಕರ್ ಲಾಲ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜಿಪಂ ಮಾಜಿ ಅಧಕ್ಷ ರವಿ, ಡಿ.ನಾಗರಾಜಯ್ಯ, ಜೆ.ಡಿ.ಎಸ್.ಬ್ಲಾಕ್ ಅದ್ಯಕ್ಷ ಬಿ.ಎನ್.ಜಗದೀಶ್ ಮತ್ತಿತರರು ಹಾಜರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ 3.58 ಲಕ್ಷ ಅನರ್ಹ ಪಿಂಚಣಿದಾರರನ್ನು ಪತ್ತೆ!

Sun May 1 , 2022
ಬೆಂಗಳೂರು: ರಾಜ್ಯದಲ್ಲಿ 3.58 ಲಕ್ಷ ಅನರ್ಹ ಪಿಂಚಣಿದಾರರನ್ನು ಪತ್ತೆ ಮಾಡಲಾಗಿದ್ದು, ಸೌಲಭ್ಯ ಕಡಿತಗೊಳಿಸಲಾಗಿದೆ. ಇದರಿಂದ 430 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ರಾಜ್ಯ ಸರ್ಕಾರ 9 ಮಾಸಿಕ ಪಿಂಚಣಿಗಳನ್ನು ನೀಡುತ್ತಿದೆ. ಅರ್ಹತೆಯಿಲ್ಲದ ಅನೇಕರು ಪಿಂಚಣಿ ಪಡೆಯುತ್ತಿದ್ದು, ಅಂಥವರನ್ನು ಗುರುತಿಸಲಾಗಿದೆ. ಅಕ್ರಮವಾಗಿ ಪಿಂಚಣಿ ಪಡೆಯುತ್ತಿದ್ದವರ ಗುರುತಿಸಿ ಸೌಲಭ್ಯ ರದ್ದು ಮಾಡಲಾಗಿದೆ. ಈ ರೀತಿ 3.58 ಲಕ್ಷ ಅನರ್ಹ ಪಿಂಚಣಿದಾರರ ಪತ್ತೆ ಮಾಡಲಾಗಿದ್ದು 430 ಕೋಟಿ ರೂಪಾಯಿ […]

Advertisement

Wordpress Social Share Plugin powered by Ultimatelysocial