ಲತಾ ಮಂಗೇಶ್ಕರ್ ಅವರು ಭಾರತದ ಸರ್ವ ಶ್ರೇಷ್ಠ ಗಾಯಕಿಯ ರಲ್ಲಿ ಒಬ್ಬರು .

ಲತಾ ಮಂಗೇಶ್ಕರ್ ಅವರು ಭಾರತದ ಸರ್ವ ಶ್ರೇಷ್ಠ ಗಾಯಕಿಯ ರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದ್ದು, ಅವರ ಅವರ ಸಹೋದರಿ ಆಶಾ ಭೋಂಸ್ಲೆ ಕೂಡ ಗಾನ ಕೋಗಿಲೆಯಾಗಿ ಅವರಷ್ಟೇ ಜನಪ್ರಿಯತೆಯನ್ನು ಕಂಡುಕೊಂಡವರು.ಗತಕಾಲದಲ್ಲಿ ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದರು ಎಂದು ಜನ ನಂಬಿದ್ದರು.ಇದಕ್ಕೆ ಮಂಗೇಶ್ಕರ್ ಕುಟುಂಬದಲ್ಲಿ ನಡೆದ ಒಂದು ಘಟನೆಯೇ ಕಾರಣ ಎಂದು ಲತಾ ಅವರು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದರು.ಲತಾ ಅವರಿಗೆ ನಾಲ್ವರು ಒಡಹುಟ್ಟಿದವರು, ಹಿರಿಯವರು ಮೀನಾ ಖಾಡಿಕರ್, ಆಶಾ ಭೋಂಸ್ಲೆ, ಉಷಾ ಮಂಗೇಶ್ಕರ್ ಮತ್ತು ಹೃದಯನಾಥ್ ಮಂಗೇಶ್ಕರ್.ಲತಾ ಮಂಗೇಶ್ಕರ್ ಅವರು ಬಾಲ್ಯದಿಂದಲೂ ಆಶಾ ಜತೆ ಬಹಳ ಬಲವಾದ ಬಂಧವನ್ನು ಹೊಂದಿದ್ದರು. ಆಶಾ ಅವರು ತನ್ನ ತಂಗಿ ಲತಾರನ್ನು “ಅಚ್ಚುಮೆಚ್ಚಿನ ಗಾಯಕಿ” ಎಂದು ಕರೆದಿದ್ದರು.1949 ರಲ್ಲಿ ಆಶಾ ಅವರು 16 ವರ್ಷದವರಾಗಿದ್ದಾಗ 31 ವರ್ಷದ ಗಣಪತರಾವ್ ಭೋಂಸ್ಲೆ ಅವರೊಂದಿಗೆ ಏಕಾಏಕಿ ಮನೆ ಬಿಟ್ಟು ತೆರಳಿ ಕುಟುಂಬದ ವಿರೋಧದ ನಡುವೆ ವಿವಾಹವಾಗಿದ್ದರು. ಆದಾಗ್ಯೂ, ದಂಪತಿಗಳು 1960 ರಲ್ಲಿ ಬೇರ್ಪತ್ತಿದ್ದರು. . ಆಶಾಅವರಿಗೆ ಗಣಪತ್ರಾವ್ ಅವರೊಂದಿಗಿನ ದಾಂಪತ್ಯದಲ್ಲಿ ಮೂವರು ಮಕ್ಕಳಿದ್ದರು. ಬಳಿಕ ಆಶಾ 1980 ರಲ್ಲಿ ಸಂಗೀತಗಾರ ರಾಹುಲ್ ದೇವ್ ಬರ್ಮನ್ ಅವರನ್ನು ವಿವಾಹವಾದರು. ಆ ಬಳಿಕವೇ ಲತಾ ಮತ್ತು ಆಶಾ ಅವರ ಬಾಂಧವ್ಯ ಮತ್ತೆ ವೃದ್ಧಿಸಿತು ಎಂದು ಸಿನಿ ಲೋಕ ಹೇಳುತ್ತದೆ.ಗಣಪತರಾವ್ ಭೋಂಸ್ಲೆ ಅವರು ಆಶಾ ಅವರಿಗೆ ಮಂಗೇಶ್ಕರ್ ಕುಟುಂಬದೊಂದಿಗೆ ಮಾತನಾಡಲೂ ಅವಕಾಶ ನೀಡುತ್ತಿರಲಿಲ್ಲವಂತೆ. ಲತಾ ಅವರ ಜೊತೆಗೆ ಹಾಡಲೂ ಅವಕಾಶ ನೀಡುತ್ತಿರಲಿಲ್ಲವಂತೆ. ಒಂದೊಮ್ಮೆ ಡುಯೆಟ್ ಸಾಂಗ್ ಹಾಡಲು ಅವಕಾಶ ಬಂದರೂ ಅಕ್ಕ-ತಂಗಿಗೆ ಮಾತನಾಡುವ ಅವಕಾಶವೂ ಇರುತ್ತಿರಲಿಲ್ಲ. ಈ ನೋವಿನ ಸಂಗತಿಯನ್ನು ಲತಾ ಅವರೇ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದರು. ನಮ್ಮಿಬ್ಬರಲ್ಲಿ ಅತೀವವಾದ ಪ್ರೀತಿ ವಾತ್ಸಲ್ಯವಿತ್ತು, ಆದರೆ ಅದಕ್ಕೆ ಗಣಪತರಾವ್ ಭೋಂಸ್ಲೆ ಅವರೇ ಅಡ್ಡಿಯಾಗಿದ್ದರು. ಜನ ಅದನ್ನು ತಪ್ಪಾಗಿ ತಿಳಿದು ನಮ್ಮಿಬ್ಬರ ನಡುವೆ ಪೈಪೋಟಿ ಇತ್ತು, ದ್ವೇಷ ಹುಟ್ಟಿಕೊಂಡಿತ್ತು ಎಂದು ಬಣ್ಣ ನೀಡಿದ್ದರು ಮತ್ತು ಜನ ಅದನ್ನೇ ನಂಬಿದ್ದರು ಎಂದು ಹೇಳಿಕೊಂಡಿದ್ದಾರೆ.ಲತಾ ಮತ್ತು ಆಶಾ ಬಾಲ್ಯದಿಂದಲೂ ಬಹಳ ಬಲವಾದ ಬಂಧವನ್ನು ಹೊಂದಿದ್ದರು. ಎಷ್ಟರಮಟ್ಟಿಗೆ ಎಂದರೆ ಶಾಲೆಯ ಮೊದಲ ದಿನದಂದು ಲತಾ ತನ್ನ ಸಹೋದರಿ ಆಶಾರನ್ನು ತನ್ನೊಂದಿಗೆ ಕರೆತರಲು ಅನುಮತಿಸದ ಕಾರಣ ಆವರಣವನ್ನು ತೊರೆದಿದ್ದರಂತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಕ್ಷಿಣ ಆಫ್ರಿಕಾದ ಐಸ್ ಬ್ರೇಕರ್ ಅಂಟಾರ್ಕ್ಟಿಕಾದಿಂದ ಅರ್ನೆಸ್ಟ್ ಶಾಕಲ್ಟನ್ ಅವರ ಧ್ವಂಸಗೊಂಡ ಹಡಗು ಎಂಡ್ಯೂರೆನ್ಸ್ ಅನ್ನು ಹುಡುಕಲು ದಂಡಯಾತ್ರೆಯನ್ನು ಪ್ರಾರಂಭಿಸುತ್ತದೆ

Sun Feb 6 , 2022
  ಅರ್ನೆಸ್ಟ್ ಶಾಕಲ್ಟನ್ ಅವರ ಧ್ವಂಸಗೊಂಡ ಹಡಗು ಎಂಡ್ಯೂರೆನ್ಸ್‌ಗಾಗಿ ಹುಡುಕಾಟ ಪ್ರಾರಂಭವಾಗಿದೆ. ಪ್ರಯತ್ನದಲ್ಲಿ, ದಕ್ಷಿಣ ಆಫ್ರಿಕಾದ ಐಸ್ ಬ್ರೇಕರ್ ಈಗಾಗಲೇ ನಿರ್ಗಮಿಸಿದೆ. 1915 ರಲ್ಲಿ, ಎಂಡ್ಯೂರೆನ್ಸ್ ಅಂಟಾರ್ಕ್ಟಿಕಾದ ಕರಾವಳಿಯಲ್ಲಿ ಮುಳುಗಿತು. ಪ್ಯಾಕ್ ಐಸ್ನಿಂದ ನಿಧಾನವಾಗಿ ಪುಡಿಮಾಡಿದ ನಂತರ ಇದು ಸಂಭವಿಸಿತು. ಅಂಟಾರ್ಟಿಕಾದ ಮೊದಲ ಭೂ ದಾಟುವಿಕೆಯನ್ನು ಮಾಡಲು ಶ್ಯಾಕಲ್ಟನ್ ತಂಡವು ಪ್ರಯತ್ನಿಸುತ್ತಿದೆ. ಇದು 1914 ರಿಂದ 1917 ರವರೆಗೆ ಪ್ರಖ್ಯಾತ ಧ್ರುವ ಪರಿಶೋಧಕರ ಇಂಪೀರಿಯಲ್ ಟ್ರಾನ್ಸ್-ಅಂಟಾರ್ಕ್ಟಿಕ್ ಎಕ್ಸ್‌ಪೆಡಿಶನ್‌ನ ಒಂದು ಭಾಗವಾಗಿತ್ತು. […]

Advertisement

Wordpress Social Share Plugin powered by Ultimatelysocial