ಹಾಸ್ಟೆಲ್​ ಕಟ್ಟಡದಿಂದ ಜಿಗಿದು MBBS ವಿದ್ಯಾರ್ಥಿ ಶ್ರೀರಾಮ್ ಆತ್ಮಹತ್ಯೆ,

ನ್ನೇನು ಓದು ಮುಗಿದು ವೈದ್ಯನಾಗಬೇಕು ಎನ್ನುವಷ್ಟರಲ್ಲೇ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ ಸಾವಿನ ಮನೆ ಸೇರಿದ್ದಾನೆ.ಬೀದರ್: ಇನ್ನೇನು ಓದು ಮುಗಿದು ವೈದ್ಯನಾಗಬೇಕು ಎನ್ನುವಷ್ಟರಲ್ಲೇ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ ಸಾವಿನ ಮನೆ ಸೇರಿದ್ದಾನೆ.ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ ಶ್ರೀರಾಮ್ ಹಾಸ್ಟೆಲ್​ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಇಂದು (ಫೆಬ್ರುವರಿ 28) ಬೀದರ್​ನ(Bidar) ಬ್ರೀಮ್ಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಹತ್ಯೆಬೆಂಗಳೂರು: ನಗರದ ನಾಯಂಡಹಳ್ಳಿ ಪೆಟ್ರೊಲ್ ಬಂಕ್ ಬಳಿಯ ಮನೆಯಲ್ಲಿಯೊಂದರಲ್ಲಿ ವ್ಯಕ್ತಿಯೋರ್ವನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಹಣಕಾಸಿನ ವಿಚಾರಕ್ಕೆ ಮಾರಕಾಸ್ತ್ರಗಳಿಂದ ಲಿಯಾಖತ್ ಅಲಿಖಾನ್​ನನ್ನು( 44) ಕೊಚ್ಚಿ ಕೊಲೆಗೈದಿದ್ದಾರೆ. ಸ್ನೇಹಿತರಾದ ವಾಸೀಂ ಮತ್ತು ಜೋಹರ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಲೇಔಟ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜಗಳ ಕೊಲೆಯಲ್ಲಿ ಅಂತ್ಯ ಹಳೆಯ ದ್ವೇಷಕ್ಕೆ ಯುವಕನನ್ನು ಕತ್ತಿಯಿಂದ ಹಿರಿದು ಬರ್ಬರವಾಗಿ ಕೊಲೆಮಾಡಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ತ್ರಿಪುರಾಂತ ಬಳಿ ನಡೆದಿದೆ. ಆನಂದ್‌ ಪುಲೆ (26) ಭೀಕರವಾಗಿ ಕೊಲೆಯಾದ ದುರ್ದೈವಿ. ಇಬ್ಬರು ಯುವಕರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಉದಯ್ ಹಾಗೂ ಆತನ ಗುಂಪು ಸೇರಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಣ್ಣಿನ ಆರೋಗ್ಯಕ್ಕಾಗಿ ಈ ವ್ಯಾಯಾಮಗಳನ್ನು ಫಾಲೋ ಮಾಡಿ,

Wed Mar 1 , 2023
ಕಣ್ಣುಗಳ ಒತ್ತಡ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಮತ್ತು ದೃಷ್ಟಿ ಹೆಚ್ಚಿಸಲು ಕೆಲವು ಕಣ್ಣಿನ ಸ್ನಾಯು ವ್ಯಾಯಾಮಗಳು ಇಲ್ಲಿವೆ. ಇವುಗಳನ್ನು ನೀವು ಮನೆಯಲ್ಲಿಯೇ ಸುಲಭವಾಗಿ ಪ್ರಯತ್ನಿಸಬಹುದು.ಹೆಚ್ಚಿನ ಜನರು ಸಾಮಾನ್ಯವಾಗಿ ಉತ್ತಮ ಮತ್ತು ಆರೋಗ್ಯಕರಜೀವನಶೈಲಿಗಾಗಿ ವ್ಯಾಯಾಮದ ಮೂಲಕ ದೇಹವನ್ನು ದಂಡಿಸಲು ಮುಂದಾಗುತ್ತಾರೆ. ಆದರೆ ಉತ್ತಮ ಕಣ್ಣಿನ ದೃಷ್ಟಿಗಾಗಿ ಕಣ್ಣಿನಇದೆ ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಕಣ್ಣುಗಳನ್ನು ಆರೋಗ್ಯಗೊಳಿಸಲು ಈ ಕೆಳಗಿನ ವ್ಯಾಯಾಮಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳಿ. ಕಣ್ಣುಗಳ ಒತ್ತಡ ಮತ್ತು […]

Advertisement

Wordpress Social Share Plugin powered by Ultimatelysocial