ಧಾರವಾಡ: ನಾಲ್ಕೈದು ದಿನಗಳಿಂದ ರೌಡಿಯಂತೆ ಸಾರ್ವಜನಿಕರಿಗೆ ಉಪಟಳ ಕೊಡುತ್ತ, ಅರಣ್ಯ ಇಲಾಖೆ ಸಿಬ್ಬಂದಿಗೂ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದ ಒಂಟಿ ಕೋತಿಯನ್ನು ಇಂದು ಸೆರೆ ಹಿಡಿಯಲಾಗಿದೆ. ಧಾರವಾಡದ ಮದಿಹಾಳ ಮತ್ತು ಡಿಪೋ ಸರ್ಕಲ್ ಏರಿಯಾದಲ್ಲಿ ಓಡಾಡುತ್ತಿದ್ದ ಒಂಟಿ ಕೋತಿ ನಾಲ್ಕೈದು ದಿನದಿಂದ 20ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿತ್ತು. ಸಾರ್ವಜನಿಕರ ಮೇಲೆ ಏಕಾಏಕಿ ದಾಳಿ ಮಾಡುತ್ತಿದ್ದ ಈ ಮಂಗ ಸ್ಥಳೀಯರ ಪಾಲಿಗೆ ರೌಡಿ ಕೋತಿಯೇ ಆಗಿತ್ತು. ಈ ಕೋತಿಯನ್ನು ಸೆರೆ ಹಿಡಿಯಲು ಶುಕ್ರವಾರದಿಂದ ನಿರಂತರ ಕಾರ್ಯಾಚರಣೆ ನಡೆಸಲಾಗಿದ್ದು, ಶನಿವಾರ ಬೆಳಗ್ಗೆ ಸಿಕ್ಕಿದೆ. ಈ ನಡುವೆ ಎರಡು ಸಲ ಬಲೆಗೆ ಬಿದ್ದರೂ ಕೋತಿ ಎಸ್ಕೇಪ್ ಆಗಿತ್ತು. ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ಮುಂದುವರಿಸಿದ ಅರಣ್ಯ ಸಿಬ್ಬಂದಿ ಕೊನೆಗೂ ಕೋತಿಯನ್ನು ಸೆರೆ ಹಿಡಿದರು. ಅದಕ್ಕೆ ಮಂಪರು ಇಂಜೆಕ್ಷನ್ ಕೊಟ್ಟು ಕರೆದೊಯ್ದರು.
ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದ ಕೋತಿ ಸೆರೆ..

Please follow and like us: